ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕರ್ನಾಟಕಕ್ಕೆ ಮೋದಿ ಚೊಂಬು ನೀಡಿದ್ದಾರೆ. ಯಡಿಯೂರಪ್ಪ ಹಾಗೂ ಬಿಜೆಪಿ ನಾಯಕರು ರಾಜ್ಯದ ಜನತೆಗೆ ಚೊಂಬು ಯೋಜನೆ ನೀಡಿದ್ದಾರೆ ಎಂದು ಜಾಹಿರಾತು ಪ್ರದರ್ಶಿಸಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ #Surjewala ಟೀಕಿಸಿದರು
ಕಾಂಗ್ರೆಸ್ ಕಚೇರಿಯಲ್ಲಿ ಗ್ಯಾರಂಟಿ ಹಬ್ಬ ಉದ್ಘಾಟಿಸಿ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅನೇಕ ಯೋಜನೆಗಳನ್ನು ನೀಡಿದ್ದೆವೆಂದು ಸುಳ್ಳು ಹೇಳಿ ಚೊಂಬು ಯೋಜನೆ ನೀಡಿದ್ದಾರೆ ಎಂದು ಚೊಂಬು ಚಿತ್ರದ ಜಾಹಿರಾತು ಪ್ರದರ್ಶಿಸಿ ಬಿಜೆಪಿ ವಿರುದ್ಧ ಟೀಕೆ ಮಾಡಿದರು.

ಶಿವಮೊಗ್ಗದಲ್ಲಿ ಕಾಂಗ್ರೆಸ್ ಗೆಲ್ಲುವ ಮೂಲಕ ಈ ಗೆಲುವಿನ ಓಟ ಮುಂದುವರೆಯಲಿದೆ. ಯಡಿಯೂರಪ್ಪ ಹಾಗೂ ಇತರರು ನಮ್ಮ ಗ್ಯಾರಂಟಿ ಯೋಜನೆಗಳಿಗೆ ಟೀಕಿಸಿದ್ದರು. ಪ್ರಧಾನಿ ಮೋದಿಯವರು ಕೂಡ ಟೀಕೆ ಮಾಡಿದ್ದರು. ಆದರೆ ಈಗ ಗ್ಯಾರಂಟಿ ಯೋಜನೆಗಳಿಂದಲೇ ನಾವಿಂದು ಅಧಿಕಾರ ನಡೆಸುತ್ತಿದ್ದೆವೆ. ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ವಿರೋಧ ಪಕ್ಷದವರು ಅಪಹಾಸ್ಯ ಮಾಡಿದ್ದರು. ಈಗ ಅದೇ ಕರ್ನಾಟಕ ಗ್ಯಾರಂಟಿಯ ಪದ ಕದ್ದಿದ್ದಾರೆ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದರು.

Also read: ನಾನು ಅಖಾಡಕ್ಕೆ ರೆಡಿ, ನನ್ನ ಗೆಲುವು ಶತಸಿದ್ಧ: ಮಾಜಿ ಡಿಸಿಎಂ ಈಶ್ವರಪ್ಪ ಗುಡುಗು
ಕಾಂಗ್ರೆಸ್ ಸರ್ಕಾರ ಈಗ ಮತ್ತೆ ಗ್ಯಾರಂಟಿ ತಂದಿದೆ. ಮಹಾಲಕ್ಷ್ಮಿ ಹೆಸರಿನಲ್ಲಿ ಒಂದು ಲಕ್ಷ ಪ್ರತಿ ಮಹಿಳೆಗೆ ನೀಡುತ್ತೇವೆ. ಮೋದಿಯವರು ಖಾಸಗಿ ಕಂಪನಿಗಳ ಸಾಲ ಮನ್ನಾ ಮಾಡುತ್ತೆ. ನಾವು ರೈತರ ಸಾಲ ಮನ್ನಾ ಮಾಡುತ್ತೇವೆ. ದೇಶದ ಜನರಿಗೆ ಆರೋಗ್ಯ ಯೋಜನೆ ಜಾರಿಗೆ ತರುತ್ತಿದ್ದೇವೆ. ನರೇಗಾ ಕೂಲಿ 530 ರೂ ಗೆ ಹೆಚ್ಚಳ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಪಶ್ಚಿಮ ಘಟ್ಟಗಳ ಬಗ್ಗೆ ಸಹ ಪ್ರಣಾಳಿಕೆಯಲ್ಲಿ ಸೇರಿಸುತ್ತೇವೆ. ನಾವು ಬಂದರೆ ಜಿಎಸ್ಟಿ ರದ್ದು ಮಾಡುತ್ತೇವೆ ದೇಶದ 20 ಜನರ ಬಳಿ ದೇಶದ 60% ಹಣ ಇದೆ. ನಿಮ್ಮ ಹಣವನ್ನು ನಿಮಗೆ ನೀಡುವುದೆ ಗ್ಯಾರಂಟಿ. ಅಭಿವೃದ್ಧಿಯ ಮಾಡಲ್ ಕಾಂಗ್ರೆಸ್ ಸರ್ಕಾರದ ಗುರಿ ಎಂದರು.
ಹುಬ್ಬಳ್ಳಿಯಲ್ಲಿ ಕಾಲೇಜು ವಿದ್ಯಾರ್ಥಿನಿಯನ್ನು ಹತ್ಯೆ ಮಾಡಿದ ಆರೋಪಿಯನ್ನು 6 ಗಂಟೆಯಲ್ಲಿ ಹುಬ್ಬಳ್ಳಿಯಲ್ಲಿ ಅರೆಸ್ಟ್ ಮಾಡಲಾಗಿದೆ. ಯಾರೇ ಇಂತಹ ಕೃತ್ಯ ಮಾಡಿದರು ಅವರಿಗೆ ಶಿಕ್ಷೆ ಕೊಡುತ್ತೇವೆ ಎಂದು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post