ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸೋತಿರುವ ಜಗದೀಶ್ ಶೆಟ್ಟರ್’ಗೆ #Jagadish Shettar ಪಕ್ಷಕ್ಕೆ ಕರೆದುಕೊಂಡಿದ್ದಾರೆ. ನನ್ನನ್ನು ಕರೆದುಕೊಳ್ಳೋದಿಲ್ಲವಾ? ನಾನು ಗೆದ್ದರೆ ಅವರಪ್ಪ ಬಂದು ಕೂಡಾ ಕರಿತಾನೆ ಎಂದು ಮಾಜಿ ಡಿಸಿಎಂ, ಸ್ವತಂತ್ರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ #K S Eshwarappa ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ನಾನು ಗೆದ್ದರೆ ಅವರಪ್ಪ ಬಂದು ಕೂಡ ಕರೀತಾನೆ. ಸೋತಿರುವ ಜಗದೀಶ್ ಶೆಟ್ಟರಿಗೆ ಪಕ್ಷಕ್ಕೆ ಕರೆದುಕೊಂಡು ಹೋಗುತ್ತಾರೆ ನನ್ನನ್ನು ಕರೆದುಕೊಳ್ಳಲ್ವಾ? ಎಂದಿದ್ದಾರೆ.

Also read: ಬಿಜೆಪಿಗೆ ಶಾಕ್ | ಎಂಎಲ್’ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆ.ಪಿ. ನಂಜುಂಡಿ | ಕಾರಣವೇನು?
ಹೊಸನಗರ ತಾಲೂಕಿನ ವೇದ ಗ್ರಾಮ ಪಂಚಾಯಿತಿಗಳ ಪ್ರಮುಖರು ರಾಷ್ಟç ಭಕ್ತರ ಬಳಗ ಸೇರ್ಪಡೆಯಾಗಿದ್ದಾರೆ. ಸೊರಬ ತಾಲೂಕಿನ ಆನವಟ್ಟಿ ಭಾಗದಲ್ಲೂ ಕೂಡ ರಾಷ್ಟçಭಕ್ತರ ಬಳಗ ಸೇರ್ಪಡೆಯಾಗುತ್ತಿದ್ದಾರೆ. ದಿನೇ ದಿನೇ ನನ್ನ ನಿರೀಕ್ಷೆಗೂ ಮೀರಿ ಬೆಂಬಲ ಸಿಗುತ್ತಿದೆ ಎಂದರು.

ನನ್ನ ತಾಯಿ ಬಿಜೆಪಿ ನೂರಕ್ಕೆ ನೂರು ಈ ಚುನಾವಣೆಯಲ್ಲಿ ಗೆದ್ದು ಪುನಃ ಬಿಜೆಪಿ ಸೇರುತ್ತೇನೆ. ಗೆದ್ದು ಬಿಜೆಪಿಯನ್ನು ಸೇರಿ ಮೋದಿಯವರಿಗೆ ಬೆಂಬಲ ಸೂಚಿಸುತ್ತೇನೆ. ತಾತ್ಕಾಲಿಕವಾಗಿ ಬಿಜೆಪಿಯಿಂದ ಕುತಂತ್ರದಿಂದ ಷಡ್ಯಂತರದಿAದ ಹೊರಗಿದ್ದೇನೆ. ನನ್ನನ್ನು ಹೊರ ಹಾಕಿದ್ದರಿಂದ ಅಪ್ಪ ಮಕ್ಕಳಿಗೆ ಸ್ವಲ್ಪ ಸಮಾಧಾನ ಆಗಿರಬಹುದು ಎಂದು ಕಟಕಿಯಾಡಿದರು.
ಅಪ್ಪ ಬಿಎಸ್’ವೈ ಹಠ ಮಾಡಿ ಆರು ತಿಂಗಳು ರಾಜ್ಯಾಧ್ಯಕ್ಷನಾಗಿ ಮಾಡಿದ ವಿಜಯೇಂದ್ರ ನನ್ನನ್ನು ಹೊರ ಹಾಕಿದ್ದಾರೆ ಎಂದರು.

ಇನ್ನು, ನನಗೆ ಕಬ್ಬು ಬೆಳೆಯುವ ರೈತನ ಚಿಹ್ನೆ ಸಿಕ್ಕಿರುವುದು ಯಾವುದೋ ಜನ್ಮದ ಪುಣ್ಯ ಎಂದು ಭಾವಿಸುತ್ತೇನೆ ಎಂದರು.
ನಾಳೆ ಭದ್ರಾವತಿಯಲ್ಲಿ ಹಿಂದುತ್ವವಾದಿ ಯುವಕರು ರಾಷ್ಟ್ರಭಕ್ತರ ಬಳಗ ಸೇರ್ಪಡೆಯಾಗಲಿದ್ದಾರೆ. ಬೈಂದೂರಿನಲ್ಲಿ ಮೀನುಗಾರರು ನನಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಎಲ್ಲಾ ವರ್ಗದ ಜನತೆ ನನಗೆ ಬೆಂಬಲ ನೀಡುತ್ತಿದ್ದು ಗೆದ್ದ ಬಳಿಕ ಅವರ ಅಪೇಕ್ಷೆಗೆ ತಕ್ಕಂತೆ ಸಂಘಟನೆ ಕಟ್ಟುತ್ತೇನೆ ಎಂದರು.

ಇನ್ನು, ಈ ಲೋಕಸಭಾ ಚುನಾವಣೆ ಬೆಳಕ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾನೆ. ಅಪ್ಪ ಮಕ್ಕಳ ಹಿಡಿತದಿಂದ ಪಕ್ಷ ಹೊರಕ್ಕೆ ಬರುತ್ತದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post