ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನೀಟ್ ಕೋಚಿಂಗ್’ಗಾಗಿ #NEET Coaching ಬೇರೆ ದೊಡ್ಡ ಊರುಗಳಿಗೆ ತೆರಳುತ್ತಿದ್ದ ಮಲೆನಾಡಿನ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ದೊರೆತಿದ್ದು, ಬೇರೆಡೆಗಿನ ಅಲೆದಾಟಕ್ಕೆ ಬ್ರೇಕ್ ಬೀಳಲಿದೆ.
ಹೌದು… ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಗಾಗಿ (ನೀಟ್) ಉತ್ಕೃಷ್ಟ ದರ್ಜೆಯ ಕೋಚಿಂಗ್ ಸೆಂಟರನ್ನು ಮೇ ತಿಂಗಳಿನಿಂದ ನಗರದಲ್ಲಿ ದೇಶ್ ನೀಟ್ ಅಕಾಡೆಮಿ #DESH NEET Academy ಆರಂಭಿಸಲಿದೆ.
ಈ ಕುರಿತಂತೆ ಮಾಹಿತಿ ನೀಡಿದ ಅಕಾಡೆಮಿಯ ಮುಖ್ಯಸ್ಥ ರಾಕೇಶ್ ವಿನ್ಸೆಂಟ್ ಡಿಸೋಜ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ (ನೀಟ್) ಯಶಸ್ಸನ್ನು ಸಾಧಿಸಲು ಮಹತ್ವಾಕಾಂಕ್ಷಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಮೀಸಲಾಗಿರುವ ಶಿವಮೊಗ್ಗದ ಪ್ರಥಮ ವಸತಿ ಸಹಿತ ಲಾಂಗ್ ಟರ್ಮ್ ನೀಟ್ ಕೋಚಿಂಗ್ ಸಂಸ್ಥೆಯಾದ ದೇಶ್ ನೀಟ್ ಅಕಾಡೆಮಿ ಮೇ ತಿಂಗಳಲ್ಲಿ ಅಧಿಕೃತವಾಗಿ ಆರಂಭಗೊಳಲಿದೆ ಎಂದು ತಿಳಿಸಿದ್ದಾರೆ.
ಅತ್ಯುತ್ಕೃಷ್ಟ ದರ್ಜೆಯ ಸೌಲಭ್ಯ, ತರಬೇತಿ
ನೀಟ್ ಆಕಾಂಕ್ಷಿಗಳಲ್ಲಿ ಸಮಗ್ರ ಮತ್ತು ವೈಯುಕ್ತಿಕಗೊಳಿಸಿದ ತರಬೇತಿ ಒದಗಿಸುವ ಗುರಿಯನ್ನು ಅಕಾಡೆಮಿ ಹೊಂದಿದೆ.
ಅನುಭವಿ ಅಧ್ಯಾಪಕರು, ಅತ್ಯಾಧುನಿಕ ಸೌಲಭ್ಯಗಳು ಮತ್ತು ನವೀನ ಬೋಧನಾ ವಿಧಾನಗಳನ್ನು ವಿದ್ಯಾರ್ಥಿಗಳು ತಮ್ಮ ಪರೀಕ್ಷೆಯಲ್ಲಿ ಉತ್ಕೃಷ್ಟಗೊಳಿಸಲು ಮತ್ತು ಉನ್ನತ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಸಶಕ್ತಗೊಳಿಸಲು ವಿನ್ಯಾಸಗೊಳಿಸಲಾಗಿದೆ.
ತರಬೇತಿ ಕೇಂದ್ರ ಎಲ್ಲಿ ಆರಂಭವಾಗಲಿದೆ?
ಶಿವಮೊಗ್ಗದ ಗಂಧರ್ವ ನಗರದಲ್ಲಿ ಆರಂಭಗೊಳ್ಳಲಿರುವ ಅಕಾಡೆಮಿಯಲ್ಲಿ ಸುಮಾರು 200 ವಿದ್ಯಾರ್ಥಿಗಳಿಗೆ ತರಬೇತಿ ನೀಡಬಹುದಾಗಿದೆ.
Also read: ತೈವಾನ್ | 24 ಗಂಟೆಯಲ್ಲಿ 80ಕ್ಕೂ ಅಧಿಕ ಬಾರಿ ಭೂಕಂಪನ | ಅಕ್ಕಪಕ್ಕದ ದೇಶಗಳಲ್ಲೂ ಆತಂಕ
ಮಲೆನಾಡು ಭಾಗದ ವಿದ್ಯಾರ್ಥಿಗಳು ನೀಟ್ ಕೋಚಿಂಗ್’ಗಾಗಿ ದೂರ ದೂರದ ಊರುಗಳಿಗೆ ಅಲೆದಾಡುವ ಹಾಗೂ ಸಮಯ ವ್ಯರ್ಥ ಮಾಡುವ ಅಗತ್ಯ ಇರುವುದಿಲ್ಲ.
ಉಚಿತ ಭೌತಶಾಸ್ತ್ರ ತರಗತಿ ಶಿಬಿರ
ಅಕಾಡೆಮಿ ವತಿಯಿಂದ ಉಚಿತ ಭೌತಶಾಸ್ತ್ರ ಅನುಮಾನ ನಿವಾರಣಾ ತರಗತಿ ಶಿಬಿರವನ್ನು ಏ.24ರಿಂದ 30ರವರೆಗೆ ನಡೆಯಲಿದೆ.
ಪ್ರತಿದಿನ ಬೆಳಿಗ್ಗೆ 10 ರಿಂದ 1 ಮತ್ತು ಸಂಜೆ 5 ರಿಂದ 7ರವರೆಗೆ ಬಸವೇಶ್ವರ ನಗರದಲ್ಲಿರುವ ಆಕ್ಸ್‌ಫರ್ಡ್ ಶಾಲೆಯಲ್ಲಿ ನಡೆಯಲಿದ್ದು, ಉಚಿತ ಪ್ರವೇಶವಿದೆ.
ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿಯ ಶಿಕ್ಷಣ ವಿಭಾಗದ ಮುಖ್ಯಸ್ಥ ಎ. ರಮಣ, ಅಭಿಷೇಕ್ ಹಿರೇಮಠ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post