ಕಲ್ಪ ಮೀಡಿಯಾ ಹೌಸ್ | ಮೈಸೂರು |
ನಮ್ಮ ಮಕ್ಕಳಿಗೆ ಲೌಕಿಕ ಶಿಕ್ಷಣ ನೀಡುವುದು ಎಷ್ಟು ಮುಖ್ಯವೋ ಆಧ್ಯಾತ್ಮಿಕ ಶಿಕ್ಷಣ ನೀಡುವುದೂ ಸಹ ಅಷ್ಟೇ ಮುಖ್ಯವಾದುದು ಎಂದು ಸೋಸಲೆ ಮಠದ ಶ್ರೀ ವಿದ್ಯಾಶ್ರೀಶ ಸ್ವಾಮೀಜಿ ಅಭಿಪ್ರಾಯಪಟ್ಟರು.
ಶ್ರೀವ್ಯಾಸರಾಜ ಮಠ ಹಾಗೂ ಶ್ರೀವ್ಯಾಸತೀರ್ಥ ವಿದ್ಯಾಪೀಠದ ವತಿಯಿಂದ ಸೋಸಲೆ ಗ್ರಾಮದ ವ್ಯಾಸರಾಜ ಮಠದಲ್ಲಿ ಒಂಬತ್ತು ದಿನಗಳ ಕಾಲ ಹಮ್ಮಿಕೊಂಡಿದ್ದ ಶ್ರೀವ್ಯಾಸ-ಶ್ರೀಶ ರಾಜ್ಯ ಮಟ್ಟದ ಉಚಿತ ಧಾರ್ಮಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಲೌಕಿಕ ಶಿಕ್ಷಣದ ಜೊತೆಗೆ ಆಧ್ಯಾತ್ಮಿಕ ಶಿಕ್ಷಣವೂ ಅತ್ಯಗತ್ಯ. ಧಾರ್ಮಿಕ ಶಿಕ್ಷಣದಿಂದ ವಿದ್ಯಾರ್ಥಿಗಳು ಉತ್ತಮ ಸಂಸ್ಕಾರವನ್ನು ಪಡೆದು ಸಮಾಜದಲ್ಲಿ ಒಳ್ಳೆಯ ಪ್ರಭಾವವನ್ನು ಉಂಟು ಮಾಡುವರು ಎಂದರು.
ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಕಲಿತ ಪಾಠ, ವಿದ್ಯೆಯನ್ನು ಮಕ್ಕಳು ಮನೆಯಲ್ಲೂ ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿಯನ್ನು ಪಾಲಕರು ನಿರ್ವಹಿಸಬೇಕು ಎಂದು ಸೂಚಿಸಿದರು.
ಶಿಬಿರದ ಮಹತ್ವ ವ್ಯಾಪ್ತಿ ಮತ್ತು ಪಾಲಕರ ಜವಾಬ್ದಾರಿಯನ್ನು ತಮ್ಮ ಪ್ರವಚನದಲ್ಲಿ ತಿಳಿಸಿಕೊಟ್ಟರು.
ಮೈಸೂರಿನ ಶ್ರೀ ವ್ಯಾಸತೀರ್ಥ ವಿದ್ಯಾಪೀಠದ ಪ್ರಾಂಶುಪಾಲ ಶ್ರೀನಿಧಿ ಪ್ಯಾಟಿ ಆಚಾರ್ಯ ಮಾತನಾಡಿ, ಶ್ರೀಗಳು ವ್ಯಾಸರಾಜ ಮಠದ ಪೀಠಾಧಿಪತಿಗಳಾದ ನಂತರ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಫಲವಾಗಿ ಇಂದು ನವೀಕರಣಗೊಂಡ ಸೋಸಲೆ ಮಠದಲ್ಲಿ ಈ ರೀತಿಯಾದ ಉಚಿತ ಶಿಬಿರವನ್ನು ನಡೆಸಲು ಸಾಧ್ಯವಾಯಿತು ಎಂದರು.
Also read: ಸೊರಬ | ಅಮರ ಜ್ಯೋತಿ ಪಿಯು ಕಾಲೇಜು | ದಾಖಲಾತಿ ಅಂಕಕ್ಕೆ ಮಿತಿಯಿಲ್ಲ, ಫಲಿತಾಂಶಕ್ಕೆ ಸರಿಸಾಟಿಯಿಲ್ಲ
ಮಠದ ಕಳಕಳಿ, ಹೊಸ ಪೀಳಿಗೆ ಬಗ್ಗೆ ಜವಾಬ್ದಾರಿ ಶ್ರೀಪಾದಂಗಳವರ ದೂರದೃಷ್ಟಿಯನ್ನು ವಿವರಿಸಿದರು.
ಗುರುಕುಲ ಮಾದರಿ ಜೀವನ ಪದ್ಧತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ವಿಶಿಷ್ಟ ರೀತಿಯಲ್ಲಿ ಆಯೋಜನೆಗೊಂಡಿದ್ದ ಈ ಶಿಬಿರದಲ್ಲಿ ರಾಜ್ಯದ ವಿವಿಧ ಭಾಗದ 30 ವಿದ್ಯಾರ್ಥಿಗಳು ಮತ್ತು ಕೆಲವು ಪಾಲಕರೂ ಭಾಗವಹಿಸಿದ್ದರು. ಅವರೆಲ್ಲರಿಗೂ ಶ್ರೀಪಾದರು ಪ್ರಮಾಣಪತ್ರ ಹಾಗೂ ಅನುಗ್ರಹ ಮಂತ್ರಾಕ್ಷತೆಯನ್ನು ನೀಡಿ ಆಶೀರ್ವದಿಸಿದರು.
ವ್ಯಾಸತೀರ್ಥ ವಿದ್ಯಾಪೀಠದ ಗೌ.ಕಾರ್ಯದರ್ಶಿ ಡಾ.ಡಿ.ಪಿ. ಮಧುಸೂದನಾಚಾರ್ಯ, ಮಠದ ವ್ಯವಸ್ಥಾಪಕರಾದ ಶ್ರೀಧರ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post