ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗೀತಾ ಶಿವರಾಜ್ ಕುಮಾರ್ ಅವರಿಗೆ ಒಂದು ಅವಕಾಶವನ್ನು ನೀಡಬೇಕು ಎಂದು ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು #Sa Ra Govind ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗೀತಾ ಶಿವರಾಜ್ ಕುಮಾರ್ ಅವರು ಈ ನಾಡಿನ ಅಪರೂಪದ ರಾಜಕಾರಣಿ. ಮಾಜಿ ಮುಖ್ಯಮಂತ್ರಿ ದಿ. ಬಂಗಾರಪ್ಪನವರ #Bangarappa ಮಗಳು. ಜೊತೆಗೆ ಖ್ಯಾತ ನಟ ಶಿವರಾಜ್ ಕುಮಾರ್ #Shivarajkumar ಅವರ ಪತ್ನಿಯಾಗಿದ್ದಾರೆ. ಅವರಿಗೊಂದು ಅವಕಾಶ ಕೊಡಬೇಕಾಗಿದೆ. ಹಾಗಾಗಿ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು, ನಿರ್ದೇಶಕರ ಸಂಘ, ನಿರ್ಮಾಪಕರ ಸಂಘ, ಕಲಾವಿದರ ಸಂಘ ಹಾಗೂ ಹಲವು ನಟ, ನಟಿಯರು ಗೀತಾ ಶಿವರಾಜ್ ಕುಮಾರ್ #Geetha ಅವರ ಪರವಾಗಿ ಮತ ಕೇಳಲು ಬಂದಿದ್ದೇವೆ. ಅವರಿಗೊಂದು ಅವಕಾಶ ಕೊಡಬೇಕು ಎಂದರು.
Also read: ಪ್ರಜ್ವಲ್ ಪ್ರಕರಣ | ಕೇಂದ್ರ ಗೃಹ ಸಚಿವ ಅಮಿತ್ ಶಾ ಫಸ್ಟ್ ರಿಯಾಕ್ಷನ್ ಹೇಗಿದೆ ನೋಡಿ
ಬಂಗಾರಪ್ಪನವರು ನೇರ ನುಡಿಗೆ ಹೆಸರಾದವರು. ಅವರು ಕಾವೇರಿ ಹೋರಾಟದ ಸಂದರ್ಭದಲ್ಲಿ ತೆಗೆದುಕೊಂಡ ಸುಗ್ರೀವಾಜ್ಞೆ ಇತಿಹಾಸದಲ್ಲಿ ದಾಖಲಾಗಿದೆ. ನಾನು ಹಾಗೂ ಕನ್ನಡ ಸಂಘಟನೆಯ ಹೋರಾಟಗಾರನಾಗಿದ್ದೆ. ನಮ್ಮ ಹೋರಾಟಕ್ಕೆ ಅವರು ಸುಪ್ರೀಂ ಕೋರ್ಟ್‍ಗೂ ಸೆಡ್ಡು ಹೊಡೆದು ನಿಂತರು. ಅದೇ ಗುಣ ಸಚಿವ ಮಧು ಬಂಗಾರಪ್ಪನವರಿಗೂ ಬಂದಿದೆ. ಹಾಗೂ ಗೀತಾ ಶಿವರಾಜ್ ಕುಮಾರ್ ಅವರು ಕೂಡ ಗೆದ್ದರೆ ಅವರು ಕೂಡ ಒಳ್ಳೆಯ ಕೆಲಸಗಳನ್ನು ಮಾಡುತ್ತಾರೆ ಎಂಬ ನಂಬಿಕೆ ನಮಗಿದೆ. ಸಿನಿಮಾ ನಟ, ನಟಿಯರು, ನಿರ್ಮಾಪಕರು, ನಿರ್ದೇಶಕರು ನಾವೆಲ್ಲಾ ವ್ಯಕ್ತಿಗಾಗಿ ಬಂದಿದ್ದೇವೆ. ಇದು ಪಕ್ಷಾತೀತವಾಗಿದೆ. ಇದರಲ್ಲಿ ಯಾವ ಸ್ವಾರ್ಥವೂ ಇಲ್ಲ. ಇದರ ಹಿಂದೆ ಪ್ರೀತಿ, ಅಭಿಮಾನ ಇದೆ ಅಷ್ಟೇ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post