ಕಲ್ಪ ಮೀಡಿಯಾ ಹೌಸ್ | ತರೀಕೆರೆ |
ತಾನು ಕೈ ಹಿಡಿದ ಪತ್ನಿಯನ್ನೇ ಭೀಕರವಾಗಿ ಕೊಚ್ಚಿ ಕೊಂದ ಪತಿ ಪರಾರಿಯಾಗಿರುವ ಘಟನೆ ಚಿಕ್ಕಮಗಳೂರು #Chikkamagaluru ಜಿಲ್ಲೆಯ ತರೀಕೆರೆಯ ಕರಕುಚ್ಚಿಯಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಮೇಘನಾ(20) ಹಾಗೂ ಪಾಪಿ ಪತಿಯನ್ನು ಚರಣ್ ಎಂದು ಗುರುತಿಸಲಾಗಿದೆ.
ಪತಿಯ ವಿಪರೀತ ಕಿರುಕುಳಕ್ಕೆ ಬೇಸತ್ತಿದ್ದ ಮೇಘನಾ ಸುಮಾರು 2 ವರ್ಷಗಳಿಂದ ಆತನಿಂದ ದೂರವಾಗಿದ್ದಳು. ಎರಡು ವರ್ಷಗಳಿಂದ ಶಂಕರಘಟ್ಟದಲ್ಲಿರುವ ತನ್ನ ಅಜ್ಜಿಯ ಮನೆಯಲ್ಲಿ ಆಕೆ ವಾಸವಾಗಿದ್ದಳು.
ನಿನ್ನೆ ಕರಕುಚ್ಚಿ ಗ್ರಾಮದಲ್ಲಿರುವ ತನ್ನ ತಾಯಿಯ ಮನೆಗೆ ಆಕೆ ಬಂದಿದ್ದಳು.
ನಿನ್ನೆ ಚಾನಲ್’ನಲ್ಲಿ ಬಟ್ಟೆ ಸ್ವಚ್ಛ ಮಾಡಲು ತೆರಳಿದ್ದ ವೇಳೆ ಹೊಂಚು ಹಾಕಿದ್ದ ಚರಣ್, ಮೇಘನಾಳನ್ನು ಅತ್ಯಂತ ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.
ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news























