ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸೊರಬ ತಾಲೂಕಿನ ಕುಬಟೂರಿನ ಸರ್ಕಾರಿ ಶಾಲೆಯಲ್ಲಿ ಸ್ಥಾಪಿಸಲಾಗಿರುವ ಬೂತ್ ನಲ್ಲಿ ಇಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ #Madhu Bangarappa ಮತ ಚಲಾವಣೆ ಮಾಡಿದರು.
ಮತದಾನ ಮಾಡುವುದಕ್ಕೂ ಮೊದಲು ದೇವಸ್ಥಾನಗಳಿಗೆ ಭೇಟಿ ನೀಡಿದರು. ನಂತರ ಕುಬಟೂರಿನ ಮತಗಟ್ಟೆ 31ರಲ್ಲಿ ಸರತಿ ಸಾಲಿನಲ್ಲಿ ನಿಂತು ಪತ್ನಿ ಅನಿತಾ ಜೊತೆ ಮತದಾನ ಮಾಡುವುದರ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ ಎಲ್ಲರೂ ಮತದಾನ ಮಾಡಬೇಕು. ಸತ್ಯ ಸುಳ್ಳು ನಡುವೆ ಚುನಾವಣೆ ನಡೆಯುತ್ತಿದೆ. ಗ್ಯಾರಂಟಿ ಯೋಜನೆ ಮೇಲೆ ಚುನಾವಣೆ ನಡೆಯುತ್ತಿದೆ. ಭಾವನಾತ್ಮಕ ವಿಷಯದಲ್ಲಿ ಚುನಾವಣೆ ನಡೆಯಲ್ಲ. ಈ ಬಾರಿ ರಾಜ್ಯ ಸರ್ಕಾರ ನೀಡಿರುವ ಗ್ಯಾರಂಟಿ ಚೆನ್ನಾಗಿ ವರ್ಕೌಟ್ ಆಗಿದೆ ಎಂದರು.
Also read: ಎರಡು ಲಕ್ಷ ಮತಗಳ ಅಂತರದ ಗೆಲುವು ನಿಶ್ಚಿತ: ಮಾಜಿ ಡಿಸಿಎಂ ಈಶ್ವರಪ್ಪ ಭರವಸೆ
ಆರೂವರೆ ಲಕ್ಷ ಮತದಾರರನ್ನು ಭೇಟಿ ಆಗಿದ್ದೇವೆ. ನಮ್ಮ ಅಭ್ಯರ್ಥಿ ಪರವಾಗಿ ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, #Rahul Gandhi ಮಲ್ಲಿಕಾರ್ಜುನ ಖರ್ಗೆ #Mallikarjuna Kharge ಪ್ರಚಾರ ಮಾಡಿದ್ದರು. ವೈಯಕ್ತಿಕ ಟೀಕೆ, ಆರೋಪ ಪ್ರತ್ಯಾರೋಪ ಪ್ರತಿ ಚುನಾವಣೆಯಲ್ಲಿ ಇರುತ್ತದೆ. ವೈಯಕ್ತಿಕ ಟೀಕೆ, ಟಿಪ್ಪಣಿ ಹತೋಟಿಯಲ್ಲಿದ್ದರೆ ಒಳ್ಳೆಯದು. ಟೀಕೆ ಟಿಪ್ಪಣಿಗಳಿಂದ ಯಾರ ಮನಸ್ಸಿಗೂ ನೋವು ಉಂಟಾಗಬಾರದು ಎಂದು ಹೇಳಿದರು.
ಈ ಬಾರಿವ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಗೀತಕ್ಕ #Geetha Shivarajkumar ಗೆದ್ದೇ ಗೆಲ್ಲುತ್ತಾರೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಎಲ್ಲೆಡೆ ಉತ್ತಮ ಬೆಂಬಲ ದೊರಕಿದೆ. ಮತದಾರರು ನಮ್ಮ ಕೈ ಹಿಡಿಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜ್ವಲ್ ರೇವಣ್ಣ #Prajwal Revanna ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕಾನೂನು ಇದೆ. ಕಾನೂನು ಎಲ್ಲವನ್ನು ನೋಡಿಕೊಳ್ಳುತ್ತದೆ. ಕಾನೂನು ವ್ಯಾಪ್ತಿಯಲ್ಲಿ ಶಿಕ್ಷೆ ಆಗುತ್ತದೆ. ಸಂತ್ರಸ್ಥರಿಗೆ ನೂರಕ್ಕೆ ನೂರು ನ್ಯಾಯ ಕೊಡಿಸುತ್ತೇವೆ. ಸಂತ್ರಸ್ಥರಿಗೆ ರಕ್ಷಣೆ ಕೊಡಬೇಕು. ಆ ಕೆಲಸ ಸರ್ಕಾರದಿಂದ ಆಗುತ್ತದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post