ಕಂಪ್ಯೂಟರ್ ಖರೀದಿಸಲು ಮತ್ತು ಡಿವಿಡಿ ಇಟ್ಟುಕೊಳ್ಳಲು ಇಷ್ಟು ಕಷ್ಟ ಇರಬೇಕಾದರೆ ಇನ್ನು ಇಂಟರ್ನೆಟ್ ಬಗ್ಗೆ ಕೇಳೋದೇ ಬೇಡ. ಬಹುಶಃ ನೀವು ಉ.ಕೊರಿಯಾದ ಬಹುಪಾಲು ಜನರನ್ನು ಇಂಟರ್ನೆಟ್ ಬಗ್ಗೆ ಕೇಳಿದರೆ ಹಾಗಂದ್ರೆ ಏನು ಎಂಬ ಮರುಪ್ರಶ್ನೆ ಖಂಡಿತಾ ಬರುತ್ತದೆ. ಯಾಕಂದ್ರೆ ಜನರು ಸ್ಥಳೀಯ ಆಡಳಿತದಿಂದ ಅನುಮತಿ ಪಡೆದು ಕಂಪ್ಯೂಟರ್ ಖರೀದಿಸಿದರೂ ಇಂಟರ್ನೆಟ್ ಸಂಪರ್ಕ ಸಿಗುತ್ತಿರಲಿಲ್ಲ. ಬದಲಾದ ಪರಿಸ್ಥಿತಿಯಲ್ಲಿ ಉ.ಕೊರಿಯಾ ತನ್ನದೇ ಆದ Linux ಆಧಾರಿತ Red star ಆಪರೇಟಿಂಗ್ ಸಿಸ್ಟಂನ್ನು ಅಭಿವೃದ್ಧಿ ಪಡಿಸಿ, ತನ್ನದೇ ಆದ Kwangmyong ಅನ್ನೋ Dial up ನೆಟ್‌ವರ್ಕ್‌ನ್ನು ಸಿದ್ಧಪಡಿಸಿದೆ. ನೆನಪಿರಲಿ Kwangmyong ಒಂದು ಇಂಟ್ರಾನೆಟ್ (Intranet) ಅಂದರೆ ಉ.ಕೊರಿಯಾ ಒಳಗೆ ಮಾತ್ರ ಸಂಪರ್ಕ ಸಾಧಿಸಲು ಸಾಧ್ಯ. ಹೊರಗಿನ ಪ್ರಪಂಚಕ್ಕೆ ಸಂಪರ್ಕ ಸಾಧಿಸಲು ಇಂಟರ್ನೆಟ್ ಬೇಕಾಗುತ್ತದೆ. ಈ ಇಂಟ್ರಾನೆಟ್ ವ್ಯವಸ್ಥೆ ಸಹ ಎಲ್ಲಿರಗೂ ಲಭ್ಯವಿಲ್ಲ. ಕಂಪ್ಯೂಟರ್ ಲ್ಯಾಬ್‌ಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಯುನಿವರ್ಸಿಟಿಗಳಲ್ಲಿ ಹಾಗೂ ಕೆಲವೇ ಕೆಲವು ಆಯ್ದ ಸೈಬರ್ ಕೆಫೆಗಳಲ್ಲಿ ಲಭ್ಯವಿದೆ. ಆದರೆ ಈ ಮೊದಲೇ ಹೇಳಿದಂತೆ ಇಲ್ಲಿನ ನಾಗರಿಕರು ಸ್ವತಂತ್ರವಾಗಿ ದೇಶದಾದ್ಯಂತ ಸಂಚರಿಲು ಸಾಧ್ಯವಿಲ್ಲ, ಹಾಗಾಗಿ Pyongyang ಎಲ್ಲರೂ ತೆರಳಲು ಸಾಧ್ಯವಿಲ್ಲ ಮತ್ತು ಎಲ್ಲರಿಗೂ ಸೈಬರ್ ಕೆಫೆಗೆ ಪ್ರವೇಶ ಸಾಧ್ಯವಾಗುವುದಿಲ್ಲ. ಹಾಗಾದರೇ Internet ಇಲ್ವಾ! ಅಂದ್ರೆ, ಖಂಡಿತಾ ಇದೇ ಕೇವಲ VIP ಅಧಿಕಾರಿಗಳಿಗೆ ಮತ್ತು ದೇಶದ ಪರವಾಗಿ ಸುಳ್ಳು ಪ್ರಚಾರ ನೀಡುವ ತಂತ್ರಜ್ಞರಿಗೆ ಮಾತ್ರ.
120 ಕೋಟಿ ಜನಸಂಕ್ಯೆ ಇರೋ ಭಾರತದಲ್ಲಿ 3,46,85,992 IP address ಗಳಿವೆ. 31 ಕೋಟಿ ಜನಸಂಖ್ಯೆಯ ಅಮೆರಿಕಾದಲ್ಲಿ 154,16,05,760 IP address ಗಳಿವೆ. ಆದರೆ 2.5 ಕೋಟಿ ಜನಸಂಖ್ಯೆಯ ಉ.ಕೊರಿಯಾದಲ್ಲಿ ಕೇವಲ 1024 IP addresಗಳಿವೆ. ಅಂದರೆ ಅಲ್ಲಿನ ಸರಕಾರ Internet ಮೇಲೆ ಯಾವ ರೀತಿಯ ನಿರ್ಬಂಧ ವಿಧಿಸಿದೆ ಅನ್ನೋದನ್ನ ಊಹಿಸ ಬಹುದು. ಹಾಗಾದರೆ ಯಾಕಾಗಿ ಉ. ಕೊರಿಯಾ ಈ ಮಟ್ಟಿಗಿನ ನಿರ್ಬಂಧ ವಿಧಿಸಿ ತನ್ನ ನಾಗರಿಕರನ್ನು ಹೊರ ಪ್ರಪಂಚದಿಂದ ಮತ್ತು ಹೊರ ಪ್ರಪಂಚವನ್ನು ಉ.ಕೊರಿಯಾದಿಂದ ಬೇರ್ಪಡಿಸಿದೆ ಅಂತ ನೋಡುವುದಾ ದರೆ ಅದು ಅಲ್ಲಿನ ಬಡತನವನ್ನು ಹೊರ ಪ್ರಪಂಚದಿಂದ ಮುಚ್ಚಿಬುಡುವ ಪ್ರಯತ್ನ ಮತ್ತು ಹೊರಗಿನ ಆಗುಹೋಗುಗಳಿಂದ ತನ್ನ ನಾಗರಿಕರನ್ನು ದೂರವಿಟ್ಟು, ತಮ್ಮ ದೇಶವೇ ಸ್ವರ್ಗ ಮತ್ತು ಹೊರಗಿನ ಪ್ರಪಂಚ ನಕರ ಎಂದು ಬಿಂಬಿಸಿ ಕಾಪಾಡಿಕೊಳ್ಳಲಿ ಅನ್ನುವ ಹಿಡನ್ ಅಜೆಂಡಾ.
Discussion about this post