ಕಲ್ಪ ಮೀಡಿಯಾ ಹೌಸ್ | ಕೋಲಾರ |
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ #Lok Sabha Election ರಾಜ್ಯದಲ್ಲಿ ಮೊದಲ ಗೆಲುವು ದಾಖಲಾಗಿದ್ದು, ಈ ಕ್ಷಣಕ್ಕೆ ಕೋಲಾರ ಸಾಕ್ಷಿಯಾಗಿದೆ.
ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಜೆಡಿಎಸ್ ಮುಖಂಡ ಮಲ್ಲೇಶ್ ಬಾಬು #Mallesh Babu ಗೆಲುವು ಸಾಧಿಸಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿದಿದೆ.
Also read: ರಾಜ್ಯದಲ್ಲಿ ಮೊದಲ ಗೆಲುವು | ತುಮಕೂರಿನಿಂದ ಬಿಜೆಪಿಯ ವಿ. ಸೋಮಣ್ಣ ಜಯಭೇರಿ
ಕೋಲಾರ ಕ್ಷೇತ್ರಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು #H D Devegowda ಅಳೆದು ತೂಗಿ ಮಲ್ಲೇಶ್ ಬಾಬುಗೆ ಟಿಕೇಟ್ ನೀಡಿದ್ದರು. ಆದರೆ, ಬಹುತೇಕರು ಮಲ್ಲೇಶ್ ಬಾಬು ಯಾವುದೇ ಕಾರಣಕ್ಕೂ ಗೆಲ್ಲುವುದಿಲ್ಲ ಎಂಬ ಅಭಿಪ್ರಾಯವಿತ್ತು. ಆದರೆ, ಅವೆಲ್ಲವನ್ನೂ ಮೀರಿ ರಾಜ್ಯದಲ್ಲಿ ಅವರು ಮೊದಲ ಗೆಲುವು ದಾಖಲಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news























