ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎನ್ನುವವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳನ್ನಾಗಿ ಪವಿತ್ರ ಗೌಡ #Pavithra Gowda ಹಾಗೂ ದರ್ಶನ್ #Darshan ಅವರ ಎಫ್‌ಐಆರ್‌ನಲ್ಲಿ ಗುರುತಿಸಲಾಗಿದೆ.
ಈ ಕುರಿತಂತೆ ಪ್ರಕರಣದ ಮೊದಲನೇ ಆರೋಪಿಯಾಗಿ (ಎ 1) ಪವಿತ್ರ ಗೌಡ, ಎರಡನೇ ಆರೋಪಿಯಾಗಿ (ಎ 2) ದರ್ಶನ್, ಮೂರನೆಯ ಆರೋಪಿಯಾಗಿ (ಎ 3) ವಿನಯ್ ಸೇರಿದಂತೆ ಒಟ್ಟು 13 ಮಂದಿಯನ್ನು ಆರೋಪಿಗಳನ್ನಾಗಿ ಉಲ್ಲೇಖಿಸಲಾಗಿದೆ.
ಇನ್ನು ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸುತ್ತಿದ್ದು, 13 ಮಂದಿಯೂ ಯಾವುದೇ ಸಣ್ಣ ಕಾಯಿಲೆಗಳು ಸಹ ಇಲ್ಲದೆ ಸದೃಢವಾಗಿದ್ದಾರೆ ಎಂದು ವೈದ್ಯಕೀಯ ವರದಿಯಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
Also read: ಇದೇನು ಕರ್ನಾಟಕವೋ, ಪಾಕಿಸ್ಥಾನಿ ಆಕ್ರಮಿತ ಕಾಶ್ಮೀರವೋ: ಆರ್. ಅಶೋಕ್ ಪ್ರಶ್ನೆ
ವೈದ್ಯಕೀಯ ಪರೀಕ್ಷೆ ನಂತರ 13 ಜನರನ್ನು ಬೆಂಗಳೂರಿನ ಎಕಾನಾಮಿಕಲ್ ನ್ಯಾಯಾಲಯಕ್ಕೆ ಇಂದೇ ಹಾಜರುಪಡಿಸಲಿದ್ದು, ಪ್ರಕರಣದ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ನೀಡುವ ಸಾಧ್ಯತೆ ಹೆಚ್ಚಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news






















