No Result
View All Result
60% of Indians have received an invite to a dating app or site later found to be fake
English Articles

60% of Indians have received an invite to a dating app or site later found to be fake

by ಕಲ್ಪ ನ್ಯೂಸ್
February 12, 2026
0

Kalpa Media House  |  India | Today, McAfee released its annual Valentine’s Day research, revealing how fake profiles, AI‑assisted chats,...

Read moreDetails
Tata Motors Indonesia Secures its Biggest Order for 70,000 Yodha and Ultra T.7 Vehicles for Deployment

Tata Motors Indonesia Secures its Biggest Order for 70,000 Yodha and Ultra T.7 Vehicles for Deployment

February 12, 2026
20,000+ runners participated in the 8th Edition of Manipal Marathon

20,000+ runners participated in the 8th Edition of Manipal Marathon

February 12, 2026
Deeksha Brahmavara | A Divine Synergy of Artistic Excellence and Intellectual Brilliance

Deeksha Brahmavara | A Divine Synergy of Artistic Excellence and Intellectual Brilliance

February 10, 2026
ಬೇಸಿಗೆಯಲ್ಲಿ ಗಂಟಲು ಒಣಗುತ್ತಿದೆಯೇ? ಧ್ವನಿ ಗರಗರಿಸುತ್ತಿದೆಯೇ? ಹಾಗಾದರೆ ಹೀಗೆ ಮಾಡಿ | ತಜ್ಞರ ಸಲಹೆ

Stay Hydrated to Protect Your Voice This Summer: ENT Expert Advice

February 10, 2026
  • Advertise With Us
  • Grievances
  • About Us
  • Contact Us
Friday, February 13, 2026
Follow Us
kalpa.news
">
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ವನ್ಯಜೀವಿ ಜಾಗೃತಿಗೆ ಪರಿಸರ ಪ್ರವಾಸೋದ್ಯಮ ಅತ್ಯವಶ್ಯ: ಕುಮಾರ್ ಪುಷ್ಕರ್ ಅಭಿಪ್ರಾಯ

ಕುವೆಂಪು ವಿವಿಯಲ್ಲಿ ಕರ್ನಾಟಕ ಹಕ್ಕಿ ಹಬ್ಬದ 11ನೇ ಆವೃತ್ತಿ ಆಚರಣೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
June 15, 2024
in ಶಿವಮೊಗ್ಗ
0
ವನ್ಯಜೀವಿ ಜಾಗೃತಿಗೆ ಪರಿಸರ ಪ್ರವಾಸೋದ್ಯಮ ಅತ್ಯವಶ್ಯ: ಕುಮಾರ್ ಪುಷ್ಕರ್ ಅಭಿಪ್ರಾಯ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಶಂಕರಘಟ್ಟ  |

ವನ್ಯಜೀವಿಗಳು ಮತ್ತು ಪ್ರಾಣಿಸಂಕುಲದ ಬಗ್ಗೆ ಅರಿವು ಮೂಡಿಸಲು ಪರಿಸರ ಪ್ರವಾಸೋದ್ಯಮವು ಅತ್ಯವಶ್ಯವಾಗಿದೆ. ಇದನ್ನು ಉತ್ತೇಜಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಕರ್ನಾಟಕ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಹೆಚ್ಚುವರಿ ಮುಖ್ಯ ಸಂರಕ್ಷಣಾಧಿಕಾರಿ ಹಾಗು ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿ ಕಾರ್ಯನಿರ್ವಾಹಕ ಅಧಿಕಾರಿ ಕುಮಾರ್ ಪುಷ್ಕರ್ ಅಭಿಪ್ರಾಯಪಟ್ಟರು.

ಭದ್ರಾ ಹುಲಿ ಸಂರಕ್ಷಿತ ಅರಣ್ಯ 25ನೇ ವರ್ಷದ ವಿಶೇಷ ಸಂದರ್ಭದಲ್ಲಿ ಕರ್ನಾಟಕ ಅರಣ್ಯ ಇಲಾಖೆ, ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿ, ಭದ್ರಾ ಹುಲಿ ಸಂರಕ್ಷಿತ ಅರಣ್ಯ ಮಂಡಳಿ ಹಾಗು ಕುವೆಂಪು ವಿ ವಿ ಸಂಸ್ಥೆಗಳು ಜಂಟಿಯಾಗಿ 11ನೇ ಹಕ್ಕಿ ಹಬ್ಬವನ್ನು ಭದ್ರಾ ಹುಲಿ ಸಂರಕ್ಷಿತ ಅರಣ್ಯ ಚಿಕ್ಕಮಗಳೂರಿನಲ್ಲಿ  ಜೂ. 14-16 ರ ವರೆಗೆ 3 ದಿನಗಳ ಕಾರ್ಯಕ್ರಮ ಹಮ್ಮಿಕೊಂಡಿದ್ದು, ವಿವಿಯ ಬಸವ ಸಭಾ ಭವನದಲ್ಲಿ ಶುಕ್ರವಾರ ಹಕ್ಕಿ ಹಬ್ಬ ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕದ ಪಕ್ಷಿ ಪ್ರಭೇದಗಳನ್ನು ನೆನೆಯಲು, ಸಂರಕ್ಷಿಸಲು 2015ರಿಂದ ಪ್ರತಿವರ್ಷ ಪಕ್ಷಿ ಹಬ್ಬ ಆಚರಿಸಲಾಗುತ್ತಿದೆ. ಹಕ್ಕಿಗಳ ಕಾಡುಗಳ ವೃದ್ಧಿಗೆ, ಅಧಿಕವಾಗುವ ಕೀಟಗಳ ನಾಶಕ್ಕೆ ಕಾರಣವಾಗುವ ಮೂಲಕ ಪರಿಸರ ಸಂರಕ್ಷಣೆ ಮತ್ತು ಸಮತೋಲನ ಮಾಡುತ್ತವೆ. ಭದ್ರಾ ಹುಲಿ ಸಂರಕ್ಷಿತ ಅರಣ್ಯದ 25ನೇ ವರ್ಷದ ಸಲುವಾಗಿ ಇಲ್ಲಿ ಪಕ್ಷಿ ಹಬ್ಬ ಏರ್ಪಡಿಸಲಾಗಿದೆ. ಆಗ ಇದ್ದ 5 ಹುಲಿಗಳ ಸಂಖ್ಯೆ ಈಗ 35ಕ್ಕೆ ಏರಿದೆ. ಈ ಬಾರಿ ‘ಕಪ್ಪು ತಲೆಯ ಹೊನ್ನಕ್ಕಿ’ 11ನೇ ಹಕ್ಕಿ ಹಬ್ಬದ ರಾಯಭಾರಿ ಹಕ್ಕಿ ಎಂದು ಕರ್ನಾಟಕ ಅರಣ್ಯ ಇಲಾಖೆ ಘೋಷಿಸಿದೆ. ಈ ಹಕ್ಕಿಯ ಕುರಿತು ಅರಿವು ಮೂಡಿಸಲು ಪುಸ್ತಕವೊಂದನ್ನು ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿ ಪ್ರಕಟಿಸಿದ್ದು ಇಲ್ಲಿ ಬಿಡುಗಡೆಗೊಳಿಸಿತು. ಪ್ರತಿ ವರ್ಷ ಒಂದೊಂದು ಹಕ್ಕಿಯನ್ನು ರಾಯಭಾರಿ ಹಕ್ಕಿಯಾಗಿ ಘೋಷಿಸಲಾಗಿತ್ತು.

ಕುಮಾರ್ ಪುಷ್ಕರ್, ಪರಿಸರ ಪ್ರವಾಸೋದ್ಯಮ ಮಂಡಳಿ ಕಾರ್ಯನಿರ್ವಾಹಕ ಅಧಿಕಾರಿ

ಪರಿಸರ ಪ್ರವಾಸೋದ್ಯಮ ನೀತಿಯನ್ನು ರೂಪಿಸಿದ್ದು ಸದ್ಯದಲ್ಲೇ ಅನುಮೋದನೆ ಪಡೆಯಲಾಗುವುದು ಜೊತೆಗೆ ಪರಿಸರ ಪ್ರವಾಸೋದ್ಯಮದ ಕುರಿತು ಸಂಶೋಧನೆಗಳನ್ನು ನಡೆಸಲಾಗುತ್ತಿದೆ. ಪ್ರಕೃತಿ ಪ್ರಿಯರಿಗೆ ಟ್ರಕಿಂಗ್ ಸೇರಿದಂತೆ ವಿವಿಧ ಪರಿಸರ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕುಮಾರ್ ಪುಷ್ಕರ್ ತಿಳಿಸಿದರು.
ರಾಜ್ಯವು ಅತಿಹೆಚ್ಚು ಪಕ್ಷಿಪ್ರಭೇದಗಳಿಗೆ ತವರಾಗಿದೆ. ಬೇರೆಲ್ಲ ರೀತಿಯ ಪ್ರಾಣಿಗಳಿಗಿಂತಲ್ಲೂ ಹೆಚ್ಚಿನ ಪಕ್ಷಿಗಳ ಪ್ರಭೇದಗಳು ಇಲ್ಲಿ ಹೆಚ್ಚಿವೆ. ಕರ್ನಾಟಕವು 1359 ಪಕ್ಷಿಪಭೇದಗಳ ಬೀಡಾಗಿದೆ. ಜಾಗತಿಕವಾಗಿ ಇರುವ ಪಕ್ಷಿಗಳ ಸಂಕುಲದ ಶೇ. 10 ರಷ್ಟು ಭಾರತದಲ್ಲಿವೆ. ಅನೇಕ ಅಳಿವಿನಂಚಿನಲ್ಲಿರುವ ಪಕ್ಷಿಗಳು ಕರ್ನಾಟಕದಲ್ಲಿ ಸಂರಕ್ಷಣೆಗೆ ಒಳಪಟ್ಟಿವೆ ಎಂದು ಅವರು ತಿಳಿಸಿದರು.

ಕುಲಪತಿ ಪ್ರೊಫೆಸರ್ ಶರತ್ ಅನಂತಮೂರ್ತಿ ಮಾತನಾಡಿ, ಸಫಾರಿ ಇಂದು ಜನಪ್ರಿಯ ಚಟುವಟಿಕೆ ಆಗಿದೆ. ಸಫಾರಿ ಹೋದಾಗ ಪ್ರಾಣಿ ಪಕ್ಷಿಗಳು ನಮ್ಮ ಮುಂದೆ ಬಂದು ನಿಲ್ಲುತ್ತವೆ, ಕೆಲವೇ ಘಂಟೆಯಲ್ಲಿ ಎಲ್ಲವನ್ನೂ ನೋಡುವ ಹಂಬಲ ಜನರಿಗಿರುತ್ತದೆ. ಆದರೆ ಇದೊಂದು ಧ್ಯಾನ. ಮಾನವ-ಪ್ರಕೃತಿ-ಪ್ರಾಣಿ ಸಂಕುಲದ ನಂಟು-ಸೂಕ್ಷ್ಮತೆಗಳನ್ನು ಅರಿತು ನಂತರ ನೋಡಲು ತೆರಳಬೇಕು. ಸಾಕಷ್ಟು ತಾಳ್ಮೆ ಬೇಕು, ನಿರಂತರ ಅಲೋಚನೆಗೆ ಅಲ್ಲಿಂದ ಪ್ರಕ್ರಿಯೆ ಆರಂಭ ಆಗಬೇಕು. ಕೇವಲ ಮನರಂಜನೆ ಅಲ್ಲ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಿವಮೊಗ್ಗ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹನುಮಂತಪ್ಪ,   ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರಾದ ಯಶ್ಪಾಲ್  ಕ್ಷೀರಸಾಗರ್, ಕಾರ್ಯಯೋಜನೆ ಅಧಿಕಾರಿಯಾದ ಸೋನಾಲ್ ವ್ರುಷ್ಟಿ, ಶಿವಮೊಗ್ಗ ವಲಯದ ಉಪ ಅರಣ್ಯಾಧಿಕಾರಿ ಪ್ರಸನ್ನ ಕೃಷ್ಣ ಪಟಗಾರ್, ನಂದೀಶ್ ಎಲ್, ಆನಂದ್ ಕೆಸಿ, ರಮೇಶ್ ಬಾಬು, ಕುಲಸಚಿವರಾದ ಮಂಜುನಾಥ್ ಎ ಎಲ್,  ಪರೀಕ್ಷಾಂಗ ಕುಲಸಚಿವ ಪ್ರೊ. ಗೋಪಿನಾಥ್ ಎಸ್ ಎಂ,ವನ್ಯಜೀವಿ ವಿಭಾಗದ ಅಧ್ಯಕ್ಷ ಪ್ರೊ ವಿಜಯ್ ಕುಮಾರ್ ಉಪಸ್ಥಿತರಿದ್ದರು. ಹಕ್ಕಿ ಹಬ್ಬದ ಕಾರ್ಯಕ್ರಮದಲ್ಲಿ ವಿವಿಯ ವಿವಿಧ ವಿಭಾಗಗಳ ನೂರಕ್ಕೂ ಅಧಿಕ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿವಿಧ ವಿಭಾಗಗಳ ವಿದ್ಯಾರ್ಥಿಗಳು ತೆಗೆದಿದ್ದ ಹಕ್ಕಿಗಳ ವಿಶೇಷ ಛಾಯಾಚಿತ್ರಗಳನ್ನು ಕಾರ್ಯಕ್ರಮದಲ್ಲಿ ಪ್ರದರ್ಷಿಸಲಾಗಿತ್ತು ಮತ್ತು ಅವುಗಳ ಮಾಹಿತಿಯನ್ನು ಆಗಮಿಸಿದವರಿಗೆ ನೀಡಲಾಯಿತು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

http://kalpa.news/wp-content/uploads/2024/05/Kumadwathi-1.mp4
http://kalpa.news/wp-content/uploads/2024/04/VID-20240426-WA0008.mp4
Tags: Kannada NewsKannada News LiveKannada News Online ShivamoggaKannada News WebsiteKannada WebsiteLatest News KannadaLocal NewsMalnad NewsNews in KannadaNews KannadaShankaraghattaShimogaShivamogga Newsಮಲೆನಾಡು_ಸುದ್ಧಿಶಂಕರಘಟ್ಟಶಿವಮೊಗ್ಗ_ನ್ಯೂಸ್
Share202Tweet123Send
Previous Post

ಚಂದ್ರಗುತ್ತಿ ಶ್ರೀ ರೇಣುಕಾಂಬ ದೇಗುಲದಲ್ಲಿ ಸಂಗ್ರಹವಾದ ಕಾಣಿಕೆ ಹಣವೆಷ್ಟು?

Next Post

ಬದಲಾಗುತ್ತಿರುವ ಜಗತ್ತಿಗೆ ಹೊಂದಿಕೊಳ್ಳಲು ಶಿಕ್ಷಣ ಅತೀ ಅಗತ್ಯ: ಪ್ರಭಾಕರ ಶೆಟ್ಟಿ ಕೊಂಡಳ್ಳಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಬದಲಾಗುತ್ತಿರುವ ಜಗತ್ತಿಗೆ ಹೊಂದಿಕೊಳ್ಳಲು ಶಿಕ್ಷಣ ಅತೀ ಅಗತ್ಯ: ಪ್ರಭಾಕರ ಶೆಟ್ಟಿ ಕೊಂಡಳ್ಳಿ

ಬದಲಾಗುತ್ತಿರುವ ಜಗತ್ತಿಗೆ ಹೊಂದಿಕೊಳ್ಳಲು ಶಿಕ್ಷಣ ಅತೀ ಅಗತ್ಯ: ಪ್ರಭಾಕರ ಶೆಟ್ಟಿ ಕೊಂಡಳ್ಳಿ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

ಈ ಎಲ್ಲಾ ದಿನಗಳು ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್, ಅರಸೀಕೆರೆ ರೈಲುಗಳ ಬಿಗ್ ಅಪ್ಡೇಟ್

February 6, 2026
ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

January 12, 2026
ಸಂಕ್ರಾಂತಿ ಹಬ್ಬದ ಪ್ರಯುಕ್ತ ಮೈಸೂರು – ಟುಟಿಕೊರಿನ್ ನಡುವೆ ಎರಡು ವಿಶೇಷ ರೈಲುಗಳು

ಮಹಾಶಿವರಾತ್ರಿ | ಯಶವಂತಪುರ – ಕಲಬುರಗಿ ನಡುವೆ ವಿಶೇಷ ಎಕ್ಸ್’ಪ್ರೆಸ್ ರೈಲು ಸಂಚಾರ

February 12, 2026
ಈ ದಿನಗಳು ಬೆಂಗಳೂರು-ಶಿವಮೊಗ್ಗ ಜನಶತಾಬ್ದಿ, ತುಮಕೂರು ಎಕ್ಸ್’ಪ್ರೆಸ್ ರೈಲುಗಳು ರದ್ದು

ಈ ದಿನಗಳು ಬೆಂಗಳೂರು-ಶಿವಮೊಗ್ಗ ಜನಶತಾಬ್ದಿ, ತುಮಕೂರು ಎಕ್ಸ್’ಪ್ರೆಸ್ ರೈಲುಗಳು ರದ್ದು

February 12, 2026
ಮಹಾ ಶಿವರಾತ್ರಿ | ಫೆ.15 ರಂದು ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯದಲ್ಲಿ ವಿಶೇಷ ಪೂಜೆ

ಮಹಾ ಶಿವರಾತ್ರಿ | ಫೆ.15 ರಂದು ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯದಲ್ಲಿ ವಿಶೇಷ ಪೂಜೆ

February 12, 2026
ಕಂಪ್ಲಿ ಉತ್ಸವ | ವೈಭವದ ತುಂಗಾರತಿ | 18 ವೇದಿಕೆಗಳಲ್ಲಿ ಭರತನಾಟ್ಯ ಪ್ರದರ್ಶನ

ಕಂಪ್ಲಿ ಉತ್ಸವ | ವೈಭವದ ತುಂಗಾರತಿ | 18 ವೇದಿಕೆಗಳಲ್ಲಿ ಭರತನಾಟ್ಯ ಪ್ರದರ್ಶನ

February 12, 2026
ಧಾರವಾಡ | ನೂತನ ಜಿಲ್ಲಾಧಿಕಾರಿಯಾಗಿ ಸ್ನೇಹಲ್ ಅಧಿಕಾರ ಸ್ವೀಕಾರ

ಧಾರವಾಡ | ನೂತನ ಜಿಲ್ಲಾಧಿಕಾರಿಯಾಗಿ ಸ್ನೇಹಲ್ ಅಧಿಕಾರ ಸ್ವೀಕಾರ

February 12, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL