ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಯೋಗಾಸನ ಬುದ್ದಿ, ಮನಸ್ಸು ಹಾಗೂ ಶರೀರವನ್ನು ಸಮತೋಲನದಲ್ಲಿ ಇಡಲು ಒಂದು ದಿವ್ಯ ಶಕ್ತಿಯನ್ನು ಹೊಂದಿದೆ, ಔಷಧಿಗಳು ಕೇವಲ ಶೇ. 20 ರಷ್ಟು ದೇಹದಲ್ಲಿ ಕೆಲಸ ಮಾಡಿದರೆ ಯೋಗವು ಶೇ 100 ರಷ್ಟು ಕಾಯಿಲೆಯನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ ಎಂದು ಮಕ್ಕಳ ತಜ್ನರು, ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ #Dr. Dhananjaya Sarji ಹೇಳಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿವಮೊಗ್ಗ ಜಿಲ್ಲಾ ಸಂಸ್ಥೆ ಹಾಗೂ ಜಿಲ್ಲಾ ಆಯುಷ್ ಇಲಾಖೆ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಸ್ಕೌಟ್ ಭವನದಲ್ಲಿ ಶನಿವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪೂರ್ವಭಾವಿ ಯೋಗೋತ್ಸವವನ್ನು ಹೂಕುಂಡಕ್ಕೆ ನೀರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

Also read: ವಾಣಿಜ್ಯದ ದೃಷ್ಟಿಕೋನದಲ್ಲಿ ಸಿನಿಮಾ ವಿಶ್ಲೇಷಣೆ ಪ್ರಯತ್ನ ಶ್ಲಾಘನೀಯ
ಜಿಲ್ಲಾ ಆಯುಷ ಅಧಿಕಾರಿ ಡಾ. ಲಿಂಗರಾಜ್ ಮಾತನಾಡಿ, ಜೂನ್ 10 ರಿಂದ 20 ನೇ ತಾರೀಕಿನವರೆಗೆ ಪೂರ್ವಭಾವಿ ಕಾರ್ಯಕ್ರಮ ಯೋಗೋತ್ಸವವನ್ನು ಇಂದು ಆಚರಿಸುತ್ತಿದ್ದು ಈ ವಷದ ಧ್ಯೇಯವಾಕ್ಯ ‘ಮಹಿಳಾ ಸಬಲೀಕರಣಕ್ಕಾಗಿ ಯೋಗ’ ಎಂಬುದಾಗಿದೆ. ಆಯುಷ್ ಇಲಾಖೆಯ ಮಹೇಂದ್ರ ಬಿ.ಆರ್ ಮತ್ತು ಕು. ಮೋನಿಕಾ ಸಿ.ಎಸ್. ಕೆಲವು ಆಸನಗಳನ್ನು ಮಾಡಿ ತೋರಿಸಿ ಮಕ್ಕಳಿಂದ ಮಾಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲೆಯ ಮುಖ್ಯ ಆಯುಕ್ತರಾದ ಕೆ.ಪಿ.ಬಿಂದುಕುಮಾ ಮಾತನಾಡಿ, ಪ್ರತಿ ನಿತ್ಯವೂ ಯೋಗ ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













Discussion about this post