ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಹಲವು ವರ್ಷಗಳಿಂದ ಸಾಲು ಸಾಲು ದೌರ್ಜನ್ಯ ನಡೆಸಿರುವ ಆರೋಪ ಹಾಗೂ ರೇಣುಕಾಸ್ವಾಮಿ ಭೀಕರ ಹತ್ಯೆ ಆರೋಪ ಹಿನ್ನೆಲೆಯಲ್ಲಿ ನಟ ದರ್ಶನ್ #Actor Darshan ವಿರುದ್ಧ ರೌಡಿ ಶೀಟ್ ಓಪನ್ ಮಾಡುವುದು ನಿಶ್ಚಿತ ಎಂದು ಹೇಳಲಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ #Renukaswamy murder case ಬಂಧನದಲ್ಲಿರುವ ದರ್ಶನ್ ಈ ಹಿಂದೆಯೂ ತಮ್ಮ ಪತ್ನಿ ಮೇಲೆ ಹಲ್ಲೆ, ಯಜಮಾನ ಚಿತ್ರೀಕರಣ ವೇಳೆ ಸಹ ನಟನ ಮೇಲೆ ಹಲ್ಲೆ, ಹೊಟೇಲ್’ನಲ್ಲಿ ಸಿಬ್ಬಂದಿ ಮೇಲೆ ಹಲ್ಲೆ ಸೇರಿದಂತೆ ಹಲವು ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
Also read: ಬೆಂಗಳೂರು | ಅಮೆಜಾನ್’ನಲ್ಲಿ ಆರ್ಡರ್ ಮಾಡಿದ್ದ XBox ಜೊತೆ ಸರ್ಪ್ರ್ರೈಸ್ ಗಿಫ್ಟ್ | ಓಪನ್ ಮಾಡಿದ್ರೆ ಕಾದಿತ್ತು ಶಾಕ್!
ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಮುಕ್ತಾಯವಾದ ನಂತರ ದರ್ಶನ್ ವಿರುದ್ಧದ ಈ ಹಿಂದಿನ ಎಲ್ಲ ಪ್ರಕರಣಗಳನ್ನು ಕ್ರೋಢೀಕರಣ ಮಾಡಿ, ಕಾನೂನು ರೀತಿಯಲ್ಲಿ ಅವರ ವಿರುದ್ಧ ರೌಡಿ ಶೀಟ್ ತೆರೆಯಲು ಪೊಲೀಸ್ ಇಲಾಖೆ ಸಿದ್ದತೆ ನಡೆದಿದೆ ಎಂದು ಹೇಳಲಾಗಿದೆ.
ಆದರೆ, ದರ್ಶನ್ ವಿರುದ್ಧ ರೌಡಿ ಶೀಟ್ ಓಪನ್ ಮಾಡುವ ಕುರಿತಾಗಿ ಪೊಲೀಸ್ ಇಲಾಖೆ ಅಧಿಕೃತ ಮಾಹಿತಿ ಬಹಿರಂಗ ಪಡಿಸಿಲ್ಲ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post