ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಪ್ರತಿಷ್ಠಿತ ಜೆಎನ್’ಎನ್’ಸಿಇ ಕಾಲೇಜಿನಲ್ಲಿ ಭಾರತ ಸರ್ಕಾರದ ವತಿಯಿಂದ ನ್ಯಾಷನಲ್ ಸೈಬರ್ ರಿಸೋರ್ಸ್ ಸೆಂಟರ್ ಆರಂಭಿಸಿದ್ದು, ಈ ಮೂಲಕ ಜಿಲ್ಲೆಯಲ್ಲಿ ಮತ್ತೊಂದು ಮಹತ್ವದ ಅತ್ಯಾಧುನಿಕ ತಂತ್ರಜ್ಞಾನ ಕೇಂದ್ರ ಆರಂಭವಾದಂತಾಗಿದೆ.
ಕಾಲೇಜಿನಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೈಬರ್ ಸಂಪನ್ಮೂಲ ಕೇಂದ್ರವನ್ನು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ಉದ್ಘಾಟಿಸಿದರು.
ಏನಿದು ನ್ಯಾಷನಲ್ ಸೈಬರ್ ರಿಸೋರ್ಸ್ ಸೆಂಟರ್?
ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ರಾಷ್ಟ್ರೀಯ ಸೈಬರ್‌ಭದ್ರತಾ ಸಂಶೋಧನಾ ಮಂಡಳಿಯು ದೇಶದ ವಿವಿಧ ಕಾಲೇಜುಗಳಲ್ಲಿ ನ್ಯಾಷನಲ್ ಸೈಬರ್ ರಿಸೋರ್ಸ್ ಸೆಂಟರ್ ಸ್ಥಾಪಿಸುತ್ತಿದೆ.
Also read: ಖಾಸಗಿ ಮಾಹಿತಿಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಬೇಡಿ: ಎಡಿಸಿ ಭೂಮರೆಡ್ಡಿ ಕಿವಿಮಾತು
ಈ ಮೂಲಕ ವಿದ್ಯಾರ್ಥಿಗಳಿಗೆ ಸೈಬರ್ ಕ್ಷೇತ್ರದಲ್ಲಾಗುತ್ತಿರುವ ನಾವೀನ್ಯಯುತ ಬದಲಾವಣೆಗಳು ಹಾಗೂ ಸವಾಲುಗಳನ್ನು ಪರಿಚಯಿಸಲಿದೆ. ವಿಶೇಷ ಪ್ರಾಜೆಕ್ಟ್’ಗಳನ್ನು ವಿದ್ಯಾರ್ಥಿಗಳಿಗೂ ನೀಡುವುದರ ಮೂಲಕ ಸೈಬರ್ ಪ್ರಕರಣಗಳ ಸಮರ್ಪಕವಾಗಿ ಪರಿಹರಿಸುವ ಬಗೆಯನ್ನು ಪರಿಚಯಿಸಿಕೊಡಲಿದೆ. ಇದಕ್ಕೆ ಬೇಕಾದ ಸಾಫ್ಟ್’ವೇರ್ ಮತ್ತು ಸಂಪನ್ಮೂಲಗಳನ್ನು ರಾಷ್ಟ್ರೀಯ ಸೈಬರ್ ಭದ್ರತಾ ಸಂಶೋಧನಾ ಮಂಡಳಿಯು ನೀಡಲಿದೆ.
ಸೈಬರ್ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ನಾವೀನ್ಯಯುತ ಚಿಂತನೆಗೆ ಸೈಬರ್ ಸಂಪನ್ಮೂಲ ಕೇಂದ್ರ ಪೂರಕವಾಗಿದೆ. ಗೌಪ್ಯ ಮಾಹಿತಿಗಳಿಗೆ ಪಾಸ್’ವರ್ಡ್ ನೀಡುವುದರಿಂದ ಪ್ರಾರಂಭವಾಗಿ ಡಿಜಿಟಲಿಕರಣದ ಅನೇಕ ಆವಿಷ್ಕಾರಗಳಿಗೆ ಸೈಬರ್ ಭದ್ರತಾ ಕ್ಷೇತ್ರ ಸಾಕ್ಷಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post