ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಎಲ್ಲಾ ವರ್ಗದ ಜನರಿಗೂ ಆರೋಗ್ಯ ಕಲ್ಪಿಸುವ ನಿಟ್ಟಿನಲ್ಲಿ ಮಣಿಪಾಲ್‍ನ ಕಸ್ತೂರಿಬಾ ಆಸ್ಪತ್ರೆ ಮಣಿಪಾಲ್ ಆರೋಗ್ಯ ಕಾರ್ಡ್‍ನ್ನು #Manipal Health Card ಪರಿಚಯಿಸುತ್ತಿದ್ದು, ಪ್ರಸಕ್ತ ವರ್ಷದ ಮಣಿಪಾಲ್ ಆರೋಗ್ಯ ಕಾರ್ಡ್ 2024 ನೊಂದಣಿ ಈಗಾಗಲೇ ಆರಂಭವಾಗಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ಮೋಹನ್ ಶೆಟ್ಟಿ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ 23 ವರ್ಷಗಳಿಂದ ಮಣಿಪಾಲ್ ಆರೋಗ್ಯ ಕಾರ್ಡ್‍ನ್ನು ಪರಿಚಯಿಸಲಾಗುತ್ತಿದೆ. ಕಳೆದ ಸಾಲಿನಲ್ಲಿ 3.60 ಲಕ್ಷ ಸದಸ್ಯರು ಕಾರ್ಡ್‍ನ್ನು ನೊಂದಾಯಿಸಿಕೊಂಡಿದ್ದರು. ಈ ಬಾರಿ 4 ಲಕ್ಷ ಗುರಿಯನ್ನು ಇಟ್ಟುಕೊಂಡಿದ್ದೇವೆ ಎಂದರು.
ಭಾರತೀಯ ಆರೋಗ್ಯ ವ್ಯವಸ್ಥೆಯು ದೂರದರ್ಶಿತ್ವದ ನಾಯಕ ಡಾ. ಟಿ.ಎಂ.ಎ. ಪೈ, ಅವರ ಸಮರ್ಪಣೆ ಮತ್ತು ಸಮಾಜ ಸೇವೆಯಲ್ಲಿ ಬದ್ಧತೆ ಅಸಾಧಾರಣವಾಗಿ ಅಪರೂಪ. ಅವರ ಕನಸನ್ನು ನನಸಾಗಿಸುವಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಕೈಗೆಟಕುವಂತೆ ಮಾಡುವುದು ಈ ಕಾರ್ಡ್‍ನ ಉದ್ದೇಶವಾಗಿದೆ. ಇಡೀ ಕುಟುಂಬಕ್ಕಾಗಿ ಉತ್ತಮ ಮೌಲ್ಯ ವಿಶ್ವಾಸರ್ಹ ಸೇವೆ ಎಂಬ ಧ್ಯೇಯ ವಾಕ್ಯದ ಅಡಿಯಲ್ಲಿ ನಾವು ಈ ಕಾರ್ಡ್‍ನ್ನು ಪರಿಚಯಿಸುತ್ತಿದ್ದೇವೆ ಎಂದರು.
ಮಾಹೆಯ ಕುಲಾಧಿಪತಿ ಡಾ. ರಾಮದಾಸ್ ಪೈ ಅವರ ನೇತೃತ್ವದಲ್ಲಿ 2000 ರಲ್ಲಿ ಪ್ರಾರಂಭವಾದ ಮಣಿಪಾಲ್ ಆರೋಗ್ಯ ಕಾರ್ಡ್ ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆಯನ್ನು ಒದಗಿಸಲು ಶ್ರಮಿಸುತ್ತಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಆರಂಭವಾಗಿ ಕರಾವಳಿ ಮತ್ತು ಮಧ್ಯ ಕರ್ನಾಟಕದ 12-15 ಜಿಲ್ಲೆಗಳಿಗೆ ವಿಸ್ತರಣೆಗೊಂಡಿದೆ ಎಂದರು.
ಮಣಿಪಾಲ್ ಆರೋಗ್ಯ ಕಾರ್ಡ್‍ದಾರರು ತಜ್ಞ ಮತ್ತು ಸೂಪರ್ ಸ್ಪೆಷಲಿಸ್ಟ್ ವೈದ್ಯರೊಂದಿಗೆ ಸಮಾಲೋಚನೆ ಶುಲ್ಕದಲ್ಲಿ 50% ರಿಯಾಯಿತಿ, ರೋಗನಿರ್ಣಯ ಮತ್ತು ಪ್ರಯೋಗಾಲಯ ಪರೀಕ್ಷೆ ಸೇವೆಯಲ್ಲಿ 25% ರಿಯಾಯಿತಿ, ರೇಡಿಯಾಲಜಿ ,ಹೊರರೋಗಿ ಕಾರ್ಯವಿಧಾನಗಳು ಮತ್ತು ಮಧುಮೇಹ ಪಾದದ ಆರೈಕೆಯಲ್ಲಿ 20% ರಿಯಾಯಿತಿ, ಡಯಾಲಿಸಿಸ್‍ನಲ್ಲಿ 100ರೂ. ರಿಯಾಯಿತಿ, ಆಸ್ಪತ್ರೆಯ ಔಷಧಿಗಳ ಮೇಲೆ 10% ವರೆಗೆ ರಿಯಾಯಿತಿ ಮತ್ತು ಜನರಲ್ ವಾರ್ಡ್‍ನಲ್ಲಿ ಒಳರೋಗಿಗಳ ಬಿಲ್‍ಗಳಲ್ಲಿ (ಕಾನ್ಸುಮಬೆಲ್ಸ್ ಮತ್ತು ಪ್ಯಾಕೇಜ್‍ಗಳನ್ನು ಹೊರತುಪಡಿಸಿ) 25% ರಿಯಾಯಿತಿ ಸೌಲಭ್ಯವಿದೆ ಎಂದರು.
Also read: ರೀಲ್ಸ್ ಶೋಕಿ | ಪ್ರಪಾತಕ್ಕೆ ಬಿದ್ದ ಕಾರು | ಯುವತಿ ಸಾವು | ಸ್ನೇಹಿತನ ವಿರುದ್ಧ ಕೇಸ್ | ಘಟನೆ ನಡೆದಿದ್ದೆಲ್ಲಿ
ಕಾರ್ಡ್‍ದಾರರು ಕಸ್ತೂರ್ಬಾ ಆಸ್ಪತ್ರೆ-ಮಣಿಪಾಲ, ಡಾ.ಟಿಎಂಎ ಪೈ ಆಸ್ಪತ್ರೆ-ಉಡುಪಿ, ಡಾ.ಟಿಎಂಎ ಪೈ ರೋಟರಿ ಆಸ್ಪತ್ರೆ-ಕಾರ್ಕಳ, ಕೆಎಂಸಿ ಆಸ್ಪತ್ರೆ-ಮಂಗಳೂರು ಮತ್ತು ಅತ್ತಾವರ, ದುರ್ಗಾ ಸಂಜೀವನಿ ಮಣಿಪಾಲ ಆಸ್ಪತ್ರೆ-ಕಟೀಲು, ಮಣಿಪಾಲ ಆಸ್ಪತ್ರೆ-ಗೋವಾ ಮತ್ತು ಮಣಿಪಾಲ ಹಾಗೂ ಮಂಗಳೂರಿನಲ್ಲಿನ ದಂತ ಕಾಲೇಜುಗಳಲ್ಲಿ ಪ್ರಯೋಜನಗಳನ್ನು ಪಡೆಯಬಹುದು ಎಂದರು.
ಮಣಿಪಾಲ ಮತ್ತು ಮಂಗಳೂರಿನಲ್ಲಿ ಇತರ ಆಸ್ಪತ್ರೆಗಳಲ್ಲಿನ ರಿಯಾಯಿತಿಗಳು ಮತ್ತು ಹೆಚ್ಚಿನ ಮಾಹಿತಿಗಾಗಿ, www.manipalhealthcard.comಗೆ ಭೇಟಿ ನೀಡಿ ಅಥವಾ 9980854700 / 08202923748 ಅನ್ನು ಸಂಪರ್ಕಿಸಿ. ಎಲ್ಲಾ ನಮ್ಮ ಅಧಿಕೃತ ಪ್ರತಿನಿಧಿಗಳ ಮೂಲಕ ನೋಂದಣಿ ಮಾಡಬಹುದು ಎಂದರು.
ಶಿವಮೊಗ್ಗದ ಆರೋಗ್ಯ ಕಾರ್ಡ್‍ನ ಮುಖ್ಯ ಸಂಯೋಜಕ ನವೀನ್ ಕೆ.ಆರ್ ಮಾತನಾಡಿ, ಆರೋಗ್ಯ ಕಾರ್ಡ್ ಮಾಡಿಸುವರು. ಶಿವಮೊಗ್ಗದ ಶುಭಮಂಗಳ ಕಲ್ಯಾಣ ಮಂದಿರದ ಎದುರಿನಲ್ಲಿರುವ ನಮ್ಮ ಕಚೇರಿಗೆ ಬಂದು ನೊಂದಣಿ ಮಾಡಿಸಬಹುದು ಎಂದರು.
ಶಿವಮೊಗ್ಗ: ಕಸ್ತೂರ್ಬಾ ಆಸ್ಪತ್ರೆ ಮಾಹಿತಿ ಕೇಂದ್ರ, ನವೀನ ಟೈರ್ಸ್, ವಿನೋಭನಗರದ ಶ್ರೀ ನವೀನ್ ಕೆ ಆರ್ 7829540338, ಪ್ರತಿನಿಧಿಗಳಾದ ವಿಜಯ್ ಆನಂದ್, 9844383344, ಬಾಪೂಜಿ ಎಂ 9916131880, ವಿಪ್ರ ಸೌಹಾರ್ದ, 9242373839, ಸೇಂಟ್ ಮಿಲಾಗ್ರೆಸ್ ಸೌಹಾರ್ದ 9538400604, ಕೃಷಿಕ್ ಸೌಹಾರ್ದ, 9686264966, ಶಾರದ ಸೌಹಾರ್ದ, 9880838430, ಶ್ರೀ ನಿತಿನ್ ಎಸ್ ಮೂರ್ತಿ: 9480028241 ಮತ್ತು ಹತ್ತಿರದ ಅಧಿಕೃತ ಪ್ರತಿನಿಧಿಗಳಲ್ಲಿ ನೊಂದಾಯಿಸಿಕೊಳ್ಳಬಹುದು.
ಪತ್ರಿಕಾಗೋಷ್ಟಿಯಲ್ಲಿ ಪ್ರತಿನಿಧಿ ಪ್ರವೀಣ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post