ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶೃಂಗೇರಿ ಶ್ರೀ ಶಾರದ ಪೀಠಾಧೀಶ್ವರರಾದ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳವರ #Shri Bharathi Thirtha Mahaswami of Shringeri Mutt ಕರಕಮಲ ಸಂಜಾತರಾದ ಜಗದ್ಗುರು ವಿಧುಶೇಖರ ಭಾರತೀ ಮಹಾಸ್ವಾಮಿಗಳವರು ಜು.24 ರಿಂದ ಜೂ. 26ರವರೆಗೆ ಶಿವಮೊಗ್ಗದ ಶ್ರೀ ಶೃಂಗೇರಿ ಶಂಕರಮಠದಲ್ಲಿ ಭಕ್ತರನ್ನು ಅನುಗ್ರಹಿಸಲಿದ್ದಾರೆ ಎಂದು ಶಿವಮೊಗ್ಗದ ಶಂಕರಮಠದ ಧರ್ಮಾಧಿಕಾರಿ ಡಾ.ಪಿ. ನಾರಾಯಣ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಗದ್ಗುರು ದರ್ಶನದ ಸಂದರ್ಭದಲ್ಲಿ ಶ್ರೀಶೃಂಗೇರಿ ಶಂಕರಮಠದಲ್ಲಿ ಭೀಕ್ಷಾವಂದನೆ, ಪಾದಪೂಜೆ, ವಸ್ತ್ರ ಸಮರ್ಪಣೆ ಇತ್ಯಾದಿ ಎಲ್ಲಾ ಸೇವೆಗಳಿಗೆ ಅವಕಾಶವಿದೆ ಎಂದರು.

Also read: ಕಮಲಾ ನೆಹರೂ ಕಾಲೇಜಿನ ವಿಜಯಲಕ್ಷ್ಮಿ ಪರ ಹೈಕೋರ್ಟ್ ಮಹತ್ವದ ತೀರ್ಪು | ಏನಿದು ಪ್ರಕರಣ?
ಜೂ.25ರಂದು ಬೆಳಿಗ್ಗೆ 6ಕ್ಕೆ 108 ನಾರಿಕೇಳ ಗಣಹೋಮ, 9ಕ್ಕೆ ಶ್ರೀ ಜಗದ್ಗುರುಗಳವರ ಸಾನಿಧ್ಯದಲ್ಲಿ ಪೂರ್ಣಾಹುತಿ ನಡೆಯಲಿದೆ. ನಂತರ ಶ್ರೀಗಳು ನಗರದ ವಿವಿಧ ಸಂಘ ಸಂಸ್ಥೆಗಳಿಗೆ ಭೇಟಿ ನೀಡಲಿದ್ದಾರೆ. ಸಂಜೆ 6ಕ್ಕೆ ಶ್ರೀ ಗಾಯಿತ್ರಿ ಮಾಂಗಲ್ಯ ಮಂದಿರದಲ್ಲಿ ಶಿವಮೊಗ್ಗದ 30ಕ್ಕೂ ಹೆಚ್ಚು ಭಜನ ಮಂಡಳಿಗಳ 500 ಮಾತೆಯರಿಂದ ಶ್ರೀ ಶಂಕರ ಭಗವತ್ಪಾದ ವಿರಚಿತ “ಕಲ್ಯಾಣವೃಷ್ಟಿಸ್ತವ ಸ್ತೋತ್ರ, ಶಿವಪಂಚಾಕ್ಷರ ನಕ್ಷತ್ರಮಾಲಾ ಸ್ತೋತ್ರ ಹಾಗೂ ಶ್ರೀಲಕ್ಷ್ಮೀ ನೃಸಿಂಹ ಕರುಣಾರಸ ಸ್ತೋತ್ರಗಳ ಮಹಾ ಸಮರ್ಪಣೆ ನಡೆಯಲಿದೆ, 6ಕ್ಕೆ ಗುರುವಂದನೆ ಹಾಗೂ ಶ್ರೀಗಳಿಂದ ಆರ್ಶೀವಚನ ಮತ್ತು 8ಕ್ಕೆ ಶ್ರೀ ಶೃಂಗೇರಿ ಶಂಕರಮಠದಲ್ಲಿ ಚಂದ್ರಮೌಳೇಶ್ವರ ಪೂಜೆ ನೆರವೇರಲಿದೆ ಎಂದರು.

ಹೆಚ್ಚಿನ ಮಾಹಿತಿಗಾಗಿ ಮೊ. 9844137136, 9448943937, 8971525680ರಲ್ಲಿ ಸಂಪರ್ಕಿಸಬಹುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬ್ರಾಹ್ಮಣ ಸಮಾಜದ ಅಧ್ಯಕ್ಷ ನಟರಾಜ್ ಭಾಗವತ್, ಶಿವಶಂಕರ್, ಕೇಶವಮೂರ್ತಿ, ಚಂದ್ರಶೇಖರ್, ಮಂಜುನಾಥ್, ಚೇತನ್, ಲಕ್ಷ್ಮೀಶ್ರೀಧರ್, ಎಸ್.ನಾಗೇಶ್, ಕೃಷ್ಣಮೂರ್ತಿ, ಸುಧೀಂದ್ರ, ರವಿಕುಮಾರ್, ವೆಂಕಟೇಶ್ ಮೂರ್ತಿ ಇನ್ನಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
 
	    	



 Loading ...
 Loading ... 
							



 
                
Discussion about this post