ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ದೇಶದ ರೈತರಿಗೆ ಪ್ರಧಾನಿ ನರೇಂದ್ರ ಮೋದಿ #PM Narendra Modi ನೇತೃತ್ವದ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಭತ್ತ, ರಾಗಿ ಸೇರಿ 22 ಬೆಳೆಗಳ ಕನಿಷ್ಠ ಬೆಂಬಲ ಬೆಲೆಯಲ್ಲಿ #MSP ಹೆಚ್ಚಳ ಮಾಡಿದೆ.
ಈ ಕುರಿತಂತೆ ಆದೇಶ ಹೊರಡಿಸಿರುವ ಕೇಂದ್ರ ಸರ್ಕಾರ, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ.50 ರಷ್ಟು ಎಂಎಸ್ಪಿ ಹೆಚ್ಚಿಸಿದೆ.

Also read: ಭದ್ರಾವತಿ | ಕಾಗೆ ಕೋಡಮಗ್ಗೆ ಬ್ರಿಡ್ಜ್ ಬಳಿ ಪತ್ತೆಯಾಗಿದ್ದೇನು? ಸಾಮಾಜಿಕ ಕಾರ್ಯಕರ್ತರಿಂದ ದೂರು
ಈ ಕ್ರಮದಿಂದ 2 ಲಕ್ಷ ರೈತರಿಗೆ ಲಾಭವಾಗಲಿದ್ದು, ಸರ್ಕಾರಕ್ಕೆ 35,000 ಕೋಟಿ ರೂ. ಹೆಚ್ಚುವರಿ ಹೊರೆಯಾಗಲಿದೆ ಎಂದು ತಿಳಿಸಿದೆ.

- ಭತ್ತದ ಮೇಲಿನ ಎಂಎಸ್’ಪಿ 143 ರೂಪಾಯಿ ಏರಿಕೆಯಾಗಿದ್ದು, ಭತ್ತದ ಕನಿಷ್ಠ ಬೆಲೆ ಈಗ 2,300 ರೂಪಾಯಿ ಆಗಿದೆ.
- ರಾಗಿಗೆ 268 ರೂ.
- ಗೋಧಿ 150 ರೂ.
- ಮೆಕ್ಕೆ ಜೋಳ 128 ರೂ.
- ಜೋಳ 210 ರೂ.
- ಸಜ್ಜೆ 150 ರೂ.
- ತೊಗರಿ 400 ರೂ.
- ಹೆಸರುಬೇಳೆ 803 ರೂ.
- ಉದ್ದಿನ ಬೇಳೆ 350 ರೂ.
- ಕಡಲೆಕಾಯಿ 527 ರೂ.
- ಸೂರ್ಯಕಾಂತಿ 360 ರೂ.
- ಸೋಯಾಬೀನ್ 300 ರೂ.
- ಹತ್ತಿ 400 ರೂ.
- ಎಳ್ಳು 632 ರೂ.
- ಹುಚ್ಚೆಳ್ಳು 983 ರೂ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post