ಕಲ್ಪ ಮೀಡಿಯಾ ಹೌಸ್ | ಅಯೋಧ್ಯಾ |
ರಾಮಮಂದಿರದ #RamMandir ಗರ್ಭಗುಡಿ ಮೊದಲ ಮಳೆಗೆ ಸೋರಿಕೆಯಾಗುತ್ತಿದೆ ಎಂಬ ಆರೋಪವನ್ನು ನಿರ್ಮಾಣ ಸಮಿತಿ ಅಧ್ಯಕ್ಷರು ತಳ್ಳಿ ಹಾಕಿದ್ದಾರೆ.
ಈ ಕುರಿತಂತೆ ಮಾತನಾಡಿರುವ ನಿರ್ಮಾಣ ಸಮಿತಿ ಅಧ್ಯಕ್ಷರು, ಇಂತಹ ಯಾವುದೇ ಘಟನೆ ನಡೆದಿಲ್ಲ. ನೀರು ಸೋರಿಕೆಯಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದ್ದು, ಇಂತಹ ಹೇಳಿಕೆಗಳು ಜನರ ಮನಸ್ಸಿನಲ್ಲಿ ತಪ್ಪು ಭಾವನೆಗಳನ್ನು ಮೂಡಿಸುತ್ತವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮೊದಲ ಮಹಡಿಯಿಂದ ಮಳೆ ನೀರು ಸುರಿಯುವುದನ್ನು ನಾನೂ ಸಹ ನೋಡಿದ್ದೇನೆ. ಆದರೆ, ಇದು ನಿರೀಕ್ಷಿತವೇ ಆಗಿದೆ. ಕಾರಣ, ಗುರು ಮಂಟಪವು ಮೇಲ್ಬಾಗದಲ್ಲಿ ಆಕಾಶಕ್ಕೆ ತೆರೆದುಕೊಂಡಿದೆ. ಇನ್ನೂ, ಎರಡನೇ ಹಾಗೂ ಮೂರನೇ ಮಹಡಿ ಹಾಗೂ ಶಿಖರ ಕಾಮಗಾರಿ ಪೂರ್ಣಗೊಳ್ಳಬೇಕಿದೆ. ಇಂತಹ ಪರಿಸ್ಥಿತಿಯಲ್ಲಿ ಮಳೆ ಬಂದಾಗ ನೀರು ಸೋರುವುದು ಸಹಜವಾಗಿದೆ. ಹೀಗಾಗಿ, ಈ ಬಗ್ಗೆ ಯಾರೂ ತಪ್ಪು ಸಂದೇಶ ರವಾನಿಸಬೇಡಿ ಎಂದು ಅವರು ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post