ಕಲ್ಪ ಮೀಡಿಯಾ ಹೌಸ್ | ಕೋಲ್ಕತ್ತಾ |
ಕೋಲ್ಕತ್ತಾದ #Kolkata ತಾರಾತಲಾದಲ್ಲಿ ಬ್ರಿಟಾನಿಯಾ ತನ್ನ 77 ವರ್ಷದ ಐತಿಹಾಸಿಕ ಕಾರ್ಖಾನೆಯನ್ನು ಮುಚ್ಚುವುದಾಗಿ ಕಂಪೆನಿ ಘೋಷಣೆ ಮಾಡಿದೆ.
ಕೋಲ್ಕತ್ತಾದಲ್ಲಿರುವ ತಾರಾತಲಾದಲ್ಲಿ ಬ್ರಿಟಾನಿಯಾ #Britannia ಕಾರ್ಖಾನೆಯನ್ನು ಕಂಪೆನಿ 1947ರಲ್ಲಿ ಆರಂಭಿಸಿತ್ತು. ಆದರೆ, ಈಗ ಈ ಘಟಕವನ್ನು ಮುಚ್ಚುವುದಾಗಿ ಘೋಷಣೆ ಮಾಡಿದೆ. ಇದೇ ವೇಳೆ ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಉದ್ಯೋಗಿಗಳು ಸ್ವಯಂ ನಿವೃತ್ತಿ(ವಿಆರ್’ಎಸ್) ಪಡೆಯಲು ಒಪ್ಪಿಕೊಂಡಿದ್ದಾರೆ.
ಇನ್ನು, ಇಂತಹ ಐತಿಹಾಸಿಕ ಕಂಪೆನಿ ಮುಚ್ಚುತ್ತಿರುವುದು ಸ್ಥಳೀಯರಿಗೂ ಸಹ ದುಃಖದ ಸಂಗತಿಯಾಗಿದ್ದು, ಈ ನಿರ್ಧಾರ ಸ್ವಾಗತಾರ್ಹವಲ್ಲ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post