ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿದ್ಯಾರ್ಥಿಗಳು ತಾವು ಸ್ವಯಂ ನಿಯಂತ್ರಣ ಹಾಕಿಕೊಳ್ಳದೇ ಡ್ರಕ್ಸ್ ಸೇರಿ ಮಾದಕ ವಸ್ತುಗಳಿಗೆ ದಾಸರಾದರೆ ಇಡೀ ಜೀವನವೇ ನಾಶವಾಗುವ ಅಪಾಯದವಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಎಸ್. ಸಂತೋಷ್ ಹೇಳಿದರು.
ಸುಬ್ಬಯ್ಯ ವೈದ್ಯಕೀಯ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಲ್ಲಿ ಕಲಿಯುವಾಗ ಕೆಲವು ಸ್ನೇಹಿತರು ದುಶ್ಚಟಗಳಿಗೆ ಪ್ರೇರೇಪಿಸುತ್ತಾರೆ. ಸಿಗರೇಟ್ ಸೇದುವಂತೆ, ಮದ್ಯ ಸೇವಿಸುವಂತೆ, ಡ್ರಗ್ಸ್ ಸೇವಿಸುವಂತೆ ಪ್ರೇರೇಪಿಸುತ್ತಾರೆ. ಆದರೆ, ವಿದ್ಯಾರ್ಥಿಗಳು ಸ್ವಯಂ ನಿಯಂತ್ರಣ ಹಾಕಿಕೊಳ್ಳಬೇಕು. ಇಂತಹ ದುಶ್ಚಟಗಳಿಗೆ ನೀವು ದಾಸರಾದರೆ ನಿಮ್ಮ ಜೀವನವೇ ನಾಶವಾಗುತ್ತದೆ. ಹೀಗಾಗಿ, ಎಚ್ಚರಿಕೆಯಿಂದಿರಬೇಕು ಎಂದು ತಿಳಿ ಹೇಳಿದರು.
ನಿಮ್ಮನ್ನು ದುಶ್ಚಟಗಳಿಗೆ ಪ್ರೇರೇಪಿಸುವ ಸ್ನೇಹಿತರ ಮಾತಿಗೆ ನೀವು ಒಪ್ಪದೇ ಇದ್ದರೆ ನಿಮ್ಮನ್ನು ನಾನಾರೀತಿಯಲ್ಲಿ ಅವಹೇಳನ ಮಾಡುತ್ತಾರೆ. ಆದರೆ, ನೀವುಗಳು ಅದು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಸ್ಥಿತ ಮನಸ್ಸಿನಿಂದ ಇರಬೇಕು ಎಂದು ಕರೆ ನೀಡಿದರು.
ಇನ್ನು, ಪ್ರತಿ ತಂದೆ ತಾಯಿಗಳೂ ಸಹ ತಮ್ಮ ಮಕ್ಕಳು ಸರಿದಾರಿಯಲ್ಲಿದ್ದಾರೆಯೇ ಎಂಬುದರ ಬಗ್ಗೆ ಗಮನ ಹರಿಸುತ್ತಿರಬೇಕು. ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ತಿಳಿಸಿ ಹೇಳಿ, ದಾರಿ ತಪ್ಪದಂತೆ ನೋಡಿಕೊಳ್ಳಬೇಕು ಎಂದರು.
Also read: ರೇಣುಕಾಸ್ವಾಮಿ ಹತ್ಯೆ ಪ್ರಕರಣ | ದರ್ಶನ್, ಪ್ರದೋಷ್ ಬಗ್ಗೆ ಹೊರಬಿತ್ತು ಮತ್ತೊಂದು ಶಾಕಿಂಗ್ ವಿಚಾರ
ಮಾದಕ ದ್ರವ್ಯಗಳ ಕಳ್ಳ ಸಾಗಣೆ ಸಮಾಜದಲ್ಲಿ ದೊಡ್ಡ ಪಿಡುಗಾಗಿದೆ. ಇವುಗಳ ದೀರ್ಘಾವಧಿ ಬಳಕೆ ಕಳಪೆ ಆರೋಗ್ಯ, ಮಾನಸಿಕ ಅಸ್ವಸ್ಥತೆ, ಸಾವಿಗೆ ಕಾರಣವಾಗುತ್ತದೆ. ಇದು ಕೇವಲ ಸೇವನೆ ಮಾಡುವವರ ಮೇಲೆ ಮಾತ್ರವಲ್ಲದೇ ಸಮಾಜನ ಮೇಲೆ ಕೂಡ ಭಾರೀ ಪರಿಣಾಮ ಹೊಂದಿದೆ. ಇದು ಸಾಮಾಜಿಕವಾಗಿ, ದೈಹಿಕವಾಗಿ, ಸಾಂಸ್ಕೃತಿಕವಾಗಿ, ಭಾವನಾತ್ಮಕವಾಗಿ ಮತ್ತು ಆರ್ಥಿಕವಾಗಿ ಹಾಳುಮಾಡುತ್ತದೆ ಎಂದರು.
ದುಶ್ಚಟಗಳಿಗೆ ದಾಸರಾಗುವವರನ್ನು ಸಮಾಜ ಅತ್ಯಂತ ಕೆಟ್ಟದಾಗಿ ನೋಡುತ್ತದೆ. ದೈಹಿಕ ಹಾಗೂ ಮಾನಸಿಕ ಆರೋಗ್ಯ ಹದಗೆಡುತ್ತದೆ. ಕೌಟುಂಬಿಕವಾಗಿ ಹಾಗೂ ಸಾಮಾಜಿಕವಾಗಿ ಕಳಂಕ ಹೊತ್ತವರ ರೀತಿ, ತಲೆ ತಗ್ಗಿಸಿ ಬಾಳಬೇಕಾಗುತ್ತದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post