ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಂದಿನಿ ಹಾಲಿನ ದರ ಏರಿಕೆಯಾಗಿದ್ದರೂ #Nandini Milk Price Hike ಸಹ ಕಾಫಿ-ಟೀ ಬೆಲೆ ಏರಿಕೆ ಮಾಡುವುದಿಲ್ಲ ಎಂದು ಹೊಟೇಲ್ ಹಾಗೂ ರೆಸ್ಟೋರೆಂಟ್’ಗಳ ಸಂಘದ ಅಧ್ಯಕ್ಷ ಪಿ.ಸಿ. ರಾವ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಕಾಫಿ ಹಾಗೂ ಟೀ ದರವನ್ನು ಏರಿಕೆ ಮಾಡುವುದಿಲ್ಲ. ಬದಲಾಗಿ ಹಾಲು ಕೊಳ್ಳುವ ಪ್ರಮಾಣವನ್ನೇ ಕಡಿಮೆ ಮಾಡುತ್ತೇವೆ ಎಂದಿದ್ದಾರೆ.
Also read: ಅಯೋಧ್ಯೆಯಲ್ಲಿ 650 ಕೋಟಿ ರೂ. ವೆಚ್ಚದ ಬೃಹತ್ ಯೋಜನೆ | ಯಾರಿದರ ನಿರ್ಮಾತೃ? ಏನಿದು ಐತಿಹಾಸಿಕ ಹೆಜ್ಜೆ?
ಕೆಎಂಎಫ್ ಹಾಲಿನ ದರವನ್ನು ಹೆಚ್ಚಿಸಿಲ್ಲ ಎಂದು ಹೇಳಿದೆ. ಅರ್ಧ/ಒಂದು ಲೀಟರ್ ಪ್ಯಾಕೆಟ್’ಗೆ 50ಎಂಎಲ್ ಹಾಲನ್ನು ಹೆಚ್ಚು ಸೇರಿಸಿದ್ದು, ಹೆಚ್ಚಿನ ಹಾಲು ಹಿನ್ನೆಲೆಯಲ್ಲಿ ಅದಕ್ಕೆ ಶುಲ್ಕ ವಿಧಿಸಿದೆ. ಇದರಿಂದ ಹೆಚ್ಚಿನ ವ್ಯತ್ಯಾಸವಾಗುದಿಲ್ಲ ಎಂದಿದ್ದಾರೆ.
ನಾವು ಕಡಿಮೆ ಹಾಲು ಖರೀದಿಸಲು ನಿರ್ಧರಿಸಿದ್ದೇವೆ. ಉದಾಹರಣೆಗೆ, ಒಂದು ಹೋಟೆಲ್ 100 ಲೀಟರ್ ಖರೀದಿಸುತ್ತಿದ್ದ ಹೋಟೆಲ್ ಇದೀಗ ಕೇವಲ 95 ಲೀಟರ್ ಖರೀದಿಸಲಿದೆ. ಹೀಗಾಗಿ ಬೆಲೆ ಏರಿಕೆ ಮಾಡುವುದಿಲ್ಲ ಎಂದು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post