ಕಲ್ಪ ಮೀಡಿಯಾ ಹೌಸ್ | ತೀರ್ಥಹಳ್ಳಿ |
ಆಗುಂಬೆ ಘಾಟಿಯಲ್ಲಿ #Agumbe Ghat ಓಮಿನಿ ಕಾರ್ ಮೇಲೆ ಬೃಹತ್ ಮರವೊಂದು ಉರುಳಿ ಬಿದ್ದು ಸಂಚಾರ ಅಸ್ತವ್ಯಸ್ತವಾಗಿರುವ ಘಟನೆ ನಡೆದಿದೆ.
ಆಗುಂಬೆಯ ನಾಲ್ಕನೆ ತಿರುವಿನಲ್ಲಿ ಈ ಘಟನೆ ಜರುಗಿದ್ದು ಮರ ಬಿದ್ದ ಪರಿಣಾಮ ಓಮಿನಿ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದೆ. ಕಾರಿನಲ್ಲಿ ಇದ್ದ ಸವಾರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
Also read: ನಟ ದರ್ಶನ್ & ಗ್ಯಾಂಗ್’ಗೆ ಮತ್ತೆ ಜೈಲೇ ಗತಿ | ಎಷ್ಟು ದಿನ ನ್ಯಾಯಾಂಗ ಬಂಧನ ವಿಸ್ತರಣೆ?
ನಾಲ್ಕನೇ ತಿರುವಿನಲ್ಲಿ ಮರ ಬಿದ್ದ ಪರಿಣಾಮ ಸಂಚಾರ ಬಂದ್ ಆಗಿದ್ದು ಮರ ತೆರವುಗೊಳಿಸುವವರೆಗೂ ಸಂಚಾರ ಅಸ್ತವ್ಯಸ್ತ ವಾಗಲಿದೆ. ಮರ ತೆರವುಗೊಳಿಸಲು ಸ್ಥಳೀಯರು ಹರ ಸಾಹಸ ಪಡುತ್ತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post