ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ #Renukaswamy Murder Case ಸಂಬಂಧಿಸಿದಂತೆ ನಟ ದರ್ಶನ್ #Actor Darshan ಹಾಗೂ ಸಹಚರರ ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಣೆ ಮಾಡಲಾಗಿದ್ದು, ಜುಲೈ 18ರವರೆಗೂ ಮತ್ತೆ ಜೈಲೇ ಗತಿಯಾಗಿದೆ.
ನ್ಯಾಯಾಂಗ ಬಂಧನ ಅವಧಿ ಇಂದಿಗೆ ಮುಕ್ತಾಯವಾದ ಹಿನ್ನೆಲೆಯಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು.
ನಾಲ್ವರು ಆರೋಪಿಗಳನ್ನು ತುಮಕೂರು ಜೈಲಿನಿಂದ ಹಾಗೂ ಎ1 ಪವಿತ್ರಾ ಗೌಡ, #Pavithra Gowda ಎ2 ನಟ ದರ್ಶನ್ ಸೇರಿ ಉಳಿದ ಎಲ್ಲ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿನಿಂದಲೇ ವೀಡಿಯೋ ಕಾನ್ಪರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು.
Also read: ಶಿವಮೊಗ್ಗ | ಎರಡು ಮಕ್ಕಳ ತಾಯಿಯ ಐತಿಹಾಸಿಕ ದಾಖಲೆ | ಏನಿದು ಸಾಧನೆ?
ಪ್ರತಿಯೊಬ್ಬರ ಹೆಸರನ್ನೂ ಕೂಗಿದ ಕೋರ್ಟ್ ಸಿಬ್ಬಂದಿ, ಹೆಸರು ಕೂಗುತ್ತಿದ್ದಂತೆ ಎಲ್ಲ ಆರೋಪಿಗಳು ಕೂಡ ಕೈ ಎತ್ತಿ ತಮ್ಮ ಹಾಜರಿ ಖಾತರಿಪಡಿಸಿದ್ದಾರೆ.
ಎಲ್ಲಾ 17 ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಲು, ನ್ಯಾಯಾಂಗ ಬಂಧನ ವಿಸ್ತರಣೆ ಮಾಡುವಂತೆ ಎಸ್’ಪಿಪಿ ಕಡೆಯಿಂದ ರಿಮಾಂಡ್ ಅರ್ಜಿ ಸಲ್ಲಿಕೆಯಾಗಿತ್ತು.
ಸರ್ಕಾರಿ ವಕೀಲರ ವಾದದಂತೆ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post