ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೆಲ ವರ್ಷಗಳ ಹಿಂದೆ ನಗರಕ್ಕೊಂದು ಪಾಸ್ ಪೋರ್ಟ್ ಕಛೇರಿ #Shivamogga Passport Office ಬಂದಾಗ ಶಿವಮೊಗ್ಗ ಜನತೆ ತುಂಬಾ ಸಂಭ್ರಮಪಟ್ಟಿದ್ದರು. ನಗರ ಕೇಂದ್ರ ಅಂಚೆ ಕಚೇರಿ ಆವರಣದಲ್ಲಿ ತಕ್ಕಮಟ್ಟಿಗೆ ಸಾಕು ಎನಿಸುವಷ್ಟು ಜಾಗದ ಕಟ್ಟಡದಲ್ಲಿ ಪಾಸ್ ಪೋರ್ಟ್ ಕಛೇರಿ ಕಾರ್ಯ ಆರಂಭಿಸಿದಾಗ ಅದು ಶಿವಮೊಗ್ಗದ ಹೆಮ್ಮೆಯ ಕಛೇರಿಯೂ ಆಗಿತ್ತು.
ಆದರೆ, ಈಗ ಅಲ್ಲಿನ ಸ್ವಚ್ಛತೆ ನೋಡಿದಾಗ ನಿಜಕ್ಕೂ ಬೇಸರ ಎನಿಸುತ್ತದೆ. ಕಛೇರಿ ಮುಂಭಾಗದಲ್ಲೇ ಕಳೆ ಗಿಡಗಳು, ಕಸದ ರಾಶಿಯೇ ಕಾಣಬಹುದು. ಕಛೇರಿ ಒಳಗಡೆ ಹೇಳುವಂತಹ ಶುಚಿತ್ವ ಇಲ್ಲ. ಆದರೆ ಇಲ್ಲಿ ಕಟ್ಟಡದ ಒಳಗಡೆ ಹೋಗುವ ಮೊದಲು ಸಾರ್ವಜನಿಕರು ಪಾದರಕ್ಷೆ ಹೊರಗಡೆ ಬಿಡಬೇಕು.
ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಸರ್ಕಾರಿ ಕಛೇರಿಗಳಿಗೆ ಅನಿವಾರ್ಯತೆಯಿಂದ ಹೋಗಲೇಬೇಕು. ಅಂದ ಹಾಗೆ ಅದು ಅಸಹನೀಯವಾಗಬಾರದಲ್ಲವೆ?! ಸಂಬಂಧಪಟ್ಟವರು ಇನ್ನಾದರೂ ಎಚ್ಚೆತ್ತು ಒಂದಿಷ್ಟು ಸುಧಾರಣೆ ಮಾಡುವರೇ ಎಂಬುದು ಸಾರ್ವಜನಿಕರ ಆಶಯ…
ವರದಿ: ತ್ಯಾಗರಾಜ ಮಿತ್ಯಾಂತ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post