ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಕ್ರೆಬೈಲು ಆನೆ ಬಿಡಾರದ #Sakrebail Elephant Camp ಆನೆಯ ಮೇಲೆ ಕಾಡಾನೆ ದಾಳಿ ಮಾಡಲು ಯತ್ನಿಸಿದ ಘಟನೆ ನಡೆದಿದೆ.
ಶಿಬಿರದ ಸಿಬ್ಬಂದಿ ಆನೆಯನ್ನು ಕಾಡಿನಲ್ಲಿ ಮೇಯಲು ಬಿಟ್ಟಾಗ ಕಾಡಾನೆ ದಾಳಿ ನಡೆಸಲು ಮುಂದಾಗಿದೆ. ಸರಪಳಿ ತುಂಡಾಗಿದ್ದರಿಂದ ಅದು ಶಿಬಿರದ ಕಡೆ ಓಡಿಬಂದು ಪಾರಾಗಿದೆ ಎನ್ನಲಾಗಿದೆ.
Also read: ಜುಲೈ 17ರಂದು ಬೆಂಗಳೂರಿನ ಉತ್ತರಾದಿ ಮಠದಲ್ಲಿ ಮುದ್ರಾ ಧಾರಣೆ
ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳು ಮೇಯಲು ಹೋದ ಬಿಡಾರದ ಆನೆ ಮೇಲೆ ಎರಗಿರುವ ಉದಾಹರಣೆಗಳು ಸಾಕಷ್ಟಿವೆ. ಈವರೆಗೆ ಮೂರು ಆನೆಗಳು ಕಾಡಾನೆ ದಾಳಿಗೆ ಸತ್ತಿವೆ. ಹೆಣ್ಣಾನೆಗಳ ಜತೆ ಸಲುಗೆಯಿಂದಿರುವ ಕಾಡಾನೆಗಳು, ಗಂಡಾನೆಗಳ ಮೇಲೆ ಮಾತ್ರ ಎರಗುತ್ತವೆ. ಇದು ಅರಣ್ಯಾಧಿಕಾರಿಗಳಿಗೆ ತಲೆನೋವಾಗಿದೆ ಪರಿಣಮಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post