ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಆಶಾಢ ಶುದ್ಧ ಪ್ರಥಮ ಏಕಾದಶಿ ಅಂಗವಾಗಿ ಜಯನಗರದ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಜಗದ್ಗುರು ಶ್ರೀಮನ್ ಮದ್ವಾಚಾರ್ಯಮೂಲ ಮಹಾಸಂಸ್ಥಾನದೀಶ್ವರರಾದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪರಮಪೂಜ್ಯ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ತಮ್ಮ ಅಮೃತ ಹಸ್ತದಿಂದ ಭಕ್ತರಿಗೆ ತಪ್ತ ಮುದ್ರಾಧಾರಣೆ ಮಾಡಿದರು.
ಪ್ರಥಮ ಏಕಾದಶಿ ಅಂಗವಾಗಿ ಶ್ರೀಮಠದಲ್ಲಿ ಸುಬುಧೇಂದ್ರ ಶ್ರೀಗಳು ಶ್ರೀಮನ್ ಮೂಲರಾಮಚಂದ್ರದೇವರ ಸಂಸ್ಥಾನ ಪೂಜೆಯನ್ನು ನೆರವೇರಿಸಿದರು. ತದನಂತರ ಶ್ರೀ ಸುದರ್ಶನ ಹೋಮದೊಂದಿಗೆ ವಿಶೇಷವಾಗಿ ಶಯನಿ ಪ್ರಥಮ ಏಕಾದಶಿ ಪ್ರಯುಕ್ತ ಶ್ರೀ ರಾಘವೇಂದ್ರ ಸ್ವಾಮಿಗಳ ಮುಂಭಾಗದ ಬಂಗಾರದ ತೊಟ್ಟಿಲನಲ್ಲಿ ಶ್ರೀಮನ್ ಮೂಲ ರಾಮಚಂದ್ರ ದೇವರಿಗೆ ತೊಟ್ಟಿಲ ಸೇವೆಯನ್ನು ನೆರವೇರಿಸಿದರು.
ಆನಂತರ ಮಹಾಮಂಗಳಾರತಿಯೊಂದಿಗೆ ಪ್ರಾರ್ಥನೆಯನ್ನು ಸಲ್ಲಿಸಿ ತಾವು ತಪ್ತ ಮುದ್ರಾ ಧಾರಣವನ್ನು ಸ್ವೀಕರಿಸಿದರು. ತದನಂತರ ಶ್ರೀಮಠದ ಸಹಸ್ರಾರು ಶಿಷ್ಯರಿಗೆ ಮತ್ತು ಭಕ್ತರಿಗೆ ನಿರಂತರವಾಗಿ ತಪ್ತಮುದ್ರಾಧಾರಣವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಶ್ರೀಮಠದ ಪಂಡಿತರಿಂದ ಭಾಗವತ ಪ್ರವಚನ ಮಾಲಿಕೆಯ ಉಪನ್ಯಾಸವೂ ನೆರವೇರಿತು.
Also read: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ವಿಪಕ್ಷ ನಾಯಕ ಆರ್. ಅಶೋಕ ಆಗ್ರಹ
ಪ್ರಶಂಸೆಗೆ ಪಾತ್ರವಾದ ಅಚ್ಚುಕಟ್ಟು ವ್ಯವಸ್ಥೆ
ಈ ತಪ್ತ ಮುದ್ರಾಧಾರಣೆ ಸ್ವೀಕರಿಸಲು ಸಹಸ್ರಾರು ಶಿಷ್ಯ ಭಕ್ತರಿಗೆ ಅಚ್ಚುಕಟ್ಟಾದ ಸರದಿ ಸಾಲಿನಲ್ಲಿ ಬರುವ ಹಾಗೆ ವಯೋವೃದ್ಧರಿಗೆ ಮತ್ತು ವಿಕಲಚೇತನರಿಗೆ ಪ್ರತ್ಯೇಕದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಈ ಕುರಿತಂತೆ ಮಾತನಾಡಿದ ಶ್ರೀಮಠದ ನಂದಕಿಶೋಋ ಆಚಾರ್ಯ, ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್.ಕೆ ವಾಧೀಂದ್ರ ಆಚಾರ್ಯರ ನೇತೃತ್ವದಲ್ಲಿ ಸಿಬ್ಬಂದಿಗಳ ಸಹಕಾರದೊಂದಿಗೆ ವ್ಯವಸ್ಥೆ ಮಾಡಲಾಗಿದ್ದು,ತಪ್ತ ಮುದ್ರಾಧಾರಣೆಗೆ ಆಗಮಿಸುವ ಯಾವುದೇ ಭಕ್ತರಿಗೂ ಸಣ್ಣ ತೊಂದರೆಯೂ ಸಹ ಆಗದಂತೆ ಸಕಲ ವ್ಯವಸ್ಥೆ ಮಾಡಲಾಗಿದೆ ಎಂದರು.
ಶ್ರೀ ಮಠದ ಪ್ರಾಕಾರ ಪೂಜಾ ಮಂದಿರ ರಾಯರ ಹೊರಬಾಗಿಲಿನಿಂದ ಶಾಲಿನಿ ಆಟದ ಮೈದಾನದವರೆಗೆ ತಪ್ತ ಮುದ್ರಾಧಾರಣಗಾಗಿ ಸಹಸ್ರಾರು ಶಿಷ-ಭಕ್ತ ಸಮೂಹವು ಎದ್ದು ಕಾಣುತ್ತಿತ್ತು. ಬೆಳಗ್ಗೆಯಿಂದಲೇ ನಿರಂತರವಾಗಿ ರಾತ್ರಿ 10 ಗಂಟೆಯವರೆಗೆ ತಪ್ತ ಮುದ್ರಾಧಾರಣಾ ಕಾರ್ಯಕ್ರಮವೂ ಮುಂದುªರೆಯಲಿದೆ.
ಶ್ರೀ ಮಠದ ಶಿಷ್ಯರು ಮತ್ತು ಭಕ್ತರು ಭಗವಂತನ ಚಿಹ್ನೆಗಳಾದ ಚಕ್ರ ಶಂಖವನ್ನು ಧರಿಸಿಕೊಂಡು ಶ್ರೀಹರಿವಾಯುಗುರುಗಳ ಅನುಗ್ರಹಕ್ಕೆ ಪಾತ್ರರಾದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post