ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕರ್ನಾಟಕ ಸರ್ಕಾರದ ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ರಾಜ್ಯದ ಬಡತನ ನಿರ್ಮೂಲನೆ ಹಾಗೂ ಬಡಜನರ ಶ್ರೇಯೋಭಿವೃದ್ಧಿಗಾಗಿ ಕೈಗೊಳ್ಳುತ್ತಿರುವ ಮಹತ್ವದ ಕಾರ್ಯಯೋಜನೆಯ ಭಾಗವಾಗಿ ಮಂಗಳವಾರ ಕರ್ನಾಟಕ ಅಂತರ್ಗತ ಜೀವನೋಪಾಯ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದೆ.
ರಾಷ್ಟ್ರೀಯ ಜೀವನೋಪಾಯ ಮಿಷನ್, ಕರ್ನಾಟಕ ಮತ್ತು ಬಡತನ ನಿರ್ಮೂಲ ಕಾರ್ಯಕ್ರಮಗಳಿಗೆ ಹೆಸರುವಾಸಿಯಾದ ಜಾಗತಿಕ ಸಂಸ್ಥೆಯಾದ ಬ್ರ್ಯಾಕ್ (BRAC) ಇಂಟರ್ನ್ಯಾಷನಲ್ ನಡುವೆ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ತಿಳುವಳಿಕೆ ಪತ್ರ (ಎಂಒಯು) ಕ್ಕೆ ಮಂಗಳವಾರ ವಿಕಾಸ ಸೌಧದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ. ಶರಣಪ್ರಕಾಶ ಪಾಟೀಲ್, #Minister Sharana Prakasha ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್ ಅವರ ಸಮ್ಮುಖದಲ್ಲಿ ರಾಷ್ಟ್ರೀಯ ಜೀವನೋಪಾಯ ಮಿಷನ್‍ನ ಮಿಷನ್ ನಿರ್ದೇಶಕಿ ಪಿಐ ಶ್ರೀ ವಿದ್ಯಾ ಮತ್ತು ಶ್ವೇತಾ ಎಸ್ ಬ್ಯಾನರ್ಜಿ, ಕಂಟ್ರಿ ಲೀಡ್ – ಇಂಡಿಯಾ, ಬ್ರ್ಯಾಕ್ ಇಂಟರ್ ನ್ಯಾಷನಲ್ ನಡುವೆ ಸಹಿ ಹಾಕಲಾಯಿತು.

ರಾಜ್ಯದ 10 ಜಿಲ್ಲೆಗಳ 20 ತಾಲೂಕುಗಳಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕಳಪೆ ಸ್ಥಾನ ಪಡೆದಿದೆ. ಇದು ಅತ್ಯಂತ ದುರ್ಬಲ ಗುಂಪುಗಳನ್ನು, ವಿಶೇಷವಾಗಿ ಮಹಿಳೆಯರನ್ನು ಗುರಿಯಾಗಿಸುತ್ತದೆ ಮತ್ತು ಆತ್ಮವಿಶ್ವಾಸ, ಕೌಶಲ್ಯ ತರಬೇತಿ, ಜೀವನೋಪಾಯವನ್ನು ಹೆಚ್ಚಿಸುವ, ಸಾಮಾಜಿಕ ಸೇರ್ಪಡೆಯನ್ನು ಉತ್ತೇಜಿಸುವ ಮತ್ತು ಸಾಮಥ್ರ್ಯ-ನಿರ್ಮಾಣ ವಿಧಾನದ ಮೂಲಕ ಆರ್ಥಿಕ ಸಮೃದ್ಧಿಯನ್ನು ಉತ್ತೇಜಿಸುವ ಮೂಲಕ ಅವರನ್ನು ಸಬಲೀಕರಣಗೊಳಿಸುತ್ತದೆ ಎಂದು ಹೇಳಿದರು.

Also read: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ವಿಪಕ್ಷ ನಾಯಕ ಆರ್. ಅಶೋಕ ಆಗ್ರಹ
ಫಲಾನುಭವಿಗಳ ಆಯ್ಕೆಯಲ್ಲಿ ಗ್ರಾಮ ಸಭೆಗಳು, ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟಗಳು ಮತ್ತು ಸ್ವ-ಸಹಾಯ ಗುಂಪುಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಪ್ರಾಯೋಗಿಕ ಹಂತದಲ್ಲಿ ಬಾಗಲಕೋಟೆ ಜಿಲ್ಲೆಯ ಹುನಗುಂದ ಬಾದಾಮಿ, ಬೀದರ್ ನ ಔರಾದ್, ಕಮಲನಗರ, ಕಲಬುರಗಿಯ ಕಾಳಗಿ ಮತ್ತು ಶಹಾಬಾದ, ರಾಯಚೂರಿನ ಮಸ್ಕಿ , ಸಿರವಾರ, ಯಾದಗಿರಿಯ ವಡಗೇರಾ , ಗುರುಮಿಟ್ಕಲ್ , ಕೊಪ್ಪಳ ಜಿಲ್ಲೆಯ ಕನಕಗಿರಿ, ಗಂಗಾವತಿ, ತಾಳಿಕೋಟೆ, ಅಲ್ಮೇಲ್, ವಿಜಯಪುರ, ವಿಜಯನಗರ ಜಿಲ್ಲೆಯ ಕೂಡ್ಲಿಗಿ ಹರಪನಹಳ್ಳಿ, ಕಂಪ್ಲಿ ಬಳ್ಳಾರಿ ಜಿಲ್ಲೆಯ ಕುರುಗೋಡು, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಮತ್ತು ಯಳಂದೂರು ಸೇರಿದಂತೆ 20 ತಾಲೂಕುಗಳನ್ನು ಪ್ರಾಯೋಗಿಕ ಹಂತದಲ್ಲಿ ಅನುಷ್ಟಾನ ಮಾಡುವುದಾಗಿ ತಿಳಿಸಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post