ಕಲ್ಪ ಮೀಡಿಯಾ ಹೌಸ್ | ಗಾಜನೂರು(ಶಿವಮೊಗ್ಗ) |
ಜುಲೈ 23ರ ಮಂಗಳವಾರ ಎನ್’ಡಿಎ ಸರ್ಕಾರದ ಐತಿಹಾಸಿ ಬಜೆಟ್ ಮಂಡನಯಾಗಲಿದ್ದು, ಶಿವಮೊಗ್ಗ ಕ್ಷೇತ್ರದ ಹಲವು ವಿಚಾರಗಳ ಬಗ್ಗೆ ಒತ್ತು ನೀಡುವಂತೆ ಮನವಿ ಮಾಡಿದ್ದೇನೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.
ತುಂಬಿದ ತುಂಗಾ ನದಿಗೆ ಗಾಜನೂರು ಅಣೆಕಟ್ಟೆಯಲ್ಲಿ ಬಾಗಿನ ಅರ್ಪಿಸಿದ ನಂತರ ಅವರು ಮಾತನಾಡಿದರು.
ಮಂಗಳವಾರ ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಶಿವಮೊಗ್ಗದ ರೈಲ್ವೆ, ಹೆದ್ದಾರಿ, ಪ್ರವಾಸೋದ್ಯಮ ಹಾಗೂ ಮೂಲಸೌಕರ್ಯಕ್ಕೆ ಒತ್ತು ನೀಡುವಂತೆ ಮನವಿ ಮಾಡಿದ್ದೇನೆ ಎಂದರು.
Also read: ಸೊರಬ | ತುಂಬಿದ ನದಿಯಲ್ಲಿ ಮೀನು ಹಿಡಿಯುವ ವೇಳೆ ಸುಳಿಗೆ ಸಿಲುಕಿ ವ್ಯಕ್ತಿ ನಾಪತ್ತೆ
ಶಿವಮೊಗ್ಗ ಹಾಗೂ ಬೀರೂರು ನಡುವಿನ ರೈಲ್ವೆ ಡಬ್ಲಿಂಗ್ ಕಾಮಗಾರಿ 1600 ಕೋಟಿ ರೂ. ವೆಚ್ಚದಲ್ಲಿ ನಡೆಯಲಿದ್ದು, ಡಿಪಿಆರ್ ಸಿದ್ದವಾಗಿದೆ. ಆಗುಂಬೆಯಲ್ಲಿ 12 ಕಿಮೀ ಉದ್ದದ ಸುರಂಗ ಕಾರ್ಯವೂ ಸಹ ಆಗಬೇಕಿದ್ದು, ಕೇಂದ್ರದಿಂದ ಈ ವರ್ಷ 8-10 ಸಾವಿರ ಕೋಟಿ ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಗೆ ಬರುವ ನಿರೀಕ್ಷೆ ಇದೆ ಎಂದರು.
ಇನ್ನು, ತುಂಬಿ ಹರಿಯುತ್ತಿರುವ ತುಂಗಾ ನದಿಗೆ ಗಾಜನೂರು ಅಣೆಕಟ್ಟೆಯಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರು ಬಾಗಿನ ಅರ್ಪಿಸಿದರು.
ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಪ್ರಮುಖರಾದ ಎಸ್. ದತ್ತಾತ್ರಿ, ಬಳ್ಳೇಕೆರೆ ಸಂತೋಷ್ ಸೇರಿದಂತೆ ಹಲವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post