ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಹಂಸ ಜ್ಯೋತಿ ಟ್ರಸ್ಟ್ ನ 49ನೇ ವರ್ಷಾಚರಣೆ ಪ್ರಯುಕ್ತ ಹಂಸ ಸಾಂಸ್ಕೃತಿಕ ಸೌರಭ ಹಾಗೂ ಹಂಸ ಸನ್ಮಾನ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಜುಲೈ 31 ಬುಧವಾರ ಸಂಜೆ 4:30ಗಂಟೆಗೆ ಬೆಂಗಳೂರು ಮಲ್ಲತಹಳ್ಳಿ ಕಲಾಗ್ರಾಮದ ಸಾಂಸ್ಕೃತಿಕ ಸಮಚಯ ಭವನದಲ್ಲಿ ಆಯೋಜಿಸಲಾಗಿದೆ.
ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಹಿರಿಯರಂಗ ಸಂಘಟಕ ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಅಧ್ಯಕ್ಷತೆ ವಹಿಸುವ ಸಮಾರಂಭದಲ್ಲಿ ಕಿದ್ವಾಯಿ ಆಸ್ಪತ್ರೆಯ ನಿವೃತ್ತ ನಿರ್ದೇಶಕ ಡಾ. ಸಿ ರಾಮಚಂದ್ರ, ಅಬಕಾರಿ ಇಲಾಖೆ ಉಪಾಯುಕ್ತ ಡಾ. ಬಿ. ಆರ್. ಹಿರೇಮಠ, ಕನ್ನಡ ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್ ಎನ್ ಚಲವಾದಿ, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕಿ ಕೆ ಶಶಿಕಲಾ ಮೊದಲಾದ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಆರಂಭದಲ್ಲಿ ಹಂಸ ಸಾಂಸ್ಕೃತಿಕ ವೈಭವ ನಾದತರಂಗಿಣಿ ತಂಡದಿಂದ ವಿದ್ವಾನ್ ಬೆಟ್ಟ ವೆಂಕಟೇಶ್ ನಿರ್ದೇಶನದಲ್ಲಿ ಖ್ಯಾತ ಕಲಾವಿದರು ಗಳಿಂದ ಹಂಸ ನಾದ ವೈಭವ ತಾಳವಾಧ್ಯ ಕಚೇರಿ, ಸ್ವಪ್ನ ಹಾಗೂ ನಿನಾದ ಸಂಸ್ಕೃತಿ ಕಲಾಕೇಂದ್ರದ ಖ್ಯಾತ ಗಾಯಕರಿಂದ ಹಂಸ ಸುಗಮ ಸಂಗೀತ ವೈಭವ, ಬ್ಯಾಟರಾಯನಪುರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರಿಂದ ಹಂಸ ಯಕ್ಷಗಾನ ವೈಭವ ಮತ್ತು ವಿದುಷಿ ಬಿ ಎಸ್ ಇಂದು ನಾಡಿಗ್ ನಿರ್ದೇಶನದಲ್ಲಿ ಶಾರದಾ ನೃತ್ಯಾಲಯ ತಂಡದವರಿಂದ ಹಂಸ ನೃತ್ಯ ವೈಭವ ನಡೆಯಲಿದೆ.
ಕಾರ್ಮಿಕ ಇಲಾಖೆ ಜಂಟಿ ಕಾರ್ಯದರ್ಶಿ ಹಾಗೂ ಚಲನಚಿತ್ರ ಕಲಾವಿದ ಡಾ. ಸಂಗಮೇಶ ಉಪಾಸೇ, ಹಿರಿಯ ಸಾಂಸ್ಕೃತಿಕ ಸಂಘಟಕ ಡಿಬಿ ಮಲ್ಲಿಕಾರ್ಜುನ ಸ್ವಾಮಿ ಮಹಾಮನೆ, ಪ್ರಾಂಶುಪಾಲ ಆರ್ ಎನ್ ಸುಬ್ಬರಾವ್, ಸಮಾಜ ಸೇವಕಿ ಡಾ.ಸುಕನ್ಯಾ ಹಿರೇಮಠ, ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ರಾಜ್ಯಾಧ್ಯಕ್ಷ ರೋಶಿನಿ ಗೌಡ, ಉದ್ಯಮಿ ಕೆ ಶ್ರೀನಿವಾಸಲು ರೆಡ್ಡಿ, ಟಿಎನ್ ಗಂಗಾಧರ್, ಶಿಲ್ಪ ಶ್ರೀ, ಆರ್‌ಪಿ ರವಿಶಂಕರ್, ಶಿರಸ್ತೆದಾರ್ ಎಂ ವಿಜಯಲಕ್ಷ್ಮಿ, ನೃತ್ಯ ಶಿಕ್ಷಕಿ ವಿದುಷಿ ಬಿಎಸ್ ಇಂದು ನಾಡಿಗ್, ಶುಶ್ರೂಷ ಅಧಿಕ್ಷಕಿ ಎನ್ ಸುಮಿತ್ರಾ ದೇವಿ, ಲೆಕ್ಕಪರಿಶೋಧಕ ಕೆ ಅಂಜನ್ ಕುಮಾರ್, ಮೃದಂಗ ಲಯವಾದ್ಯ ಕಲಾವಿದ ವಿದ್ವಾಂ ಬೆಟ್ಟ ವೆಂಕಟೇಶ್, ಬ್ಯಾಂಕ್ ಆಫ್ ಬರೋಡಾದ ಸಹಾಯಕ ಕಾರ್ಯನಿರ್ವಾಹಕ ಸದಾನಂದ ಜಿ ಕುರುಡಿಕೇರಿ ಇವರುಗಳಿಗೆ 2024ನೇ ಸಾಲಿನ ಹಂಸ ಸನ್ಮಾನ ಪ್ರಶಸ್ತಿ ಸೋಹಿಲ್ ಷಾ ಅವರಿಗೆ ಹಂಸ ಯುವ ಪುರಸ್ಕಾರ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಆಯೋಜಕರಾದ ಹಂಸ ಜ್ಯೋತಿ ಟ್ರಸ್ಟ್ ನ ಸಂಸ್ಥಾಪಕ ವ್ಯವಸ್ಥಾಪಕ ಟ್ರಸ್ಟಿ ಎಂ ಮುರುಳಿಧರ ಮತ್ತು ಹಿರಿಯ ಟ್ರಸ್ಟ್ ಎಂ ಆರ್ ನಾಗರಾಜ ನಾಯ್ಡು ತಿಳಿಸಿರುತ್ತಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post