ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗುಡ್ಡೇಕಲ್ ಜಾತ್ರೆಯಂದೇ #Guddekal fair ಐತಿಹಾಸಿಕ ಪ್ರಸಿದ್ಧಿ ಪಡೆದಿರುವ ಅಡಿಕೃತಿಕೆ #Adikruthike ಜಾತ್ರೆಗೆ ನಿನ್ನೆಯಿಂದಲೇ ಚಾಲನೆ ನೀಡಲಾಗಿದೆ.
ನಿನ್ನೆ ಭಕ್ತರು ಕಾವಡಿಗಳನ್ನು ಹೊತ್ತು ಗುಡ್ಡೆಕಲ್ ಬಾಲಸುಬ್ರಹ್ಮಣ್ಯ ದೇವಸ್ಥಾನದವರೆಗೆ ಸಾಗಿ ಬಂದರೂ. ಹೀಗೆ ಸಾಗಿ ಬರುವಾಗ ಹರೋಹರ #Harohara ಎಂದು ಸುಬ್ರಹ್ಮಣ್ಯನನ್ನು #Subrahamanya ನೆನೆಯುತ್ತ ಸಾಗುತ್ತಿರುವ ದೃಶ್ಯ ಕಂಡುಬಂದಿತು.
ಇಂದು ಕೂಡ ಭಕ್ತರು ಕಾವಡಿಗಳನ್ನು ಹೊತ್ತುಕೊಂಡು ಮತ್ತು ಹರಕೆಗಳನ್ನು ಹೊತ್ತುಕೊಂಡ ಅನೇಕರು ನಾಲಿಗೆಗೆ ಬೆಳ್ಳಿ ಅಥವಾ ಕಬ್ಬಿಣದ ತ್ರಿಶೂಲ ಚುಚ್ಚಿಕೊಂಡು ಸಾಗುವ ದೃಶ್ಯಗಳು ಕಂಡುಬಂದವು. ಕೆನ್ನೆಗೆ 15 ಅಡಿ ಉದ್ದದ 5-6 ಕೆಜಿ ಭಾರ ಇರುವ ಕಬ್ಬಿಣದ ಸಲಾಕೆಯನ್ನು ಚುಚ್ಚಿಕೊಂಡವರು ಕೂಡ ಇದ್ದರು. ಹೀಗೆ ಚುಚ್ಚಿಕೊಳ್ಳುವುದನ್ನು ವೇಲ್ ಕಾವಡಿ, ತೇರ್ ಕಾವಡಿ ಎಂದು ಕರೆಯುತ್ತಾರೆ. ತೇರ್ ಕಾವಡಿ ಎಂದರೆ ಶ್ರೀ ಬಾಲಸುಬ್ರಹ್ಮಣ್ಯ ದೇವರನ್ನು ಹೊತ್ತು ಸಣ್ಣ ತೇರನ್ನು ಬೆನ್ನಿನಗೆ ಕಬ್ಬಿಣದ ಕೊಂಡಿಯಿಂದ ಚುಚ್ಚಿಕೊಳ್ಳುತ್ತಾರೆ.
Also read: ದಲಿತರಿಗೆ ಮೀಸಲಿಟ್ಟ 312 ಕೋಟಿ ರೂ. ಹಿಂಪಡೆದು ಸಿದ್ದರಾಮಯ್ಯರಿಂದ ದ್ರೋಹ | ಈಶ್ವರಪ್ಪ ಗಂಭೀರ ಆರೋಪ
ಈ ಭಕ್ತರ ಪರಾಕಷ್ಟೆಯನ್ನು ಕಂಡು ನಗರದ ಜನರು ಮೂಕವಿಸ್ಮಿತರಾಗಿದ್ದು ಕಂಡುಬಂದಿತ್ತು. ಮೈ ಜುಮ್ಮು ಎನ್ನುವಷ್ಟು ಅವರ ಭಕ್ತಿಯ ಪರಾಕಷ್ಠೆ ಹೆಚ್ಚುತ್ತಿತ್ತು. ಇನ್ನೂ ವಿಶೇಷ ವೆಂದರೆ ಕಾವಡಿ ಅಥವಾ ಇದನ್ನು ಚುಚ್ಚಿಕೊಂಡವರು ದೇವಾಲಯದ ತನಕ ಇಳಿಸದೇ ಹೋಗಬೇಕಾಗಿದೆ.
ದೇವಸ್ಥಾನದ ಸುತ್ತಮುತ್ತ ಸಾವಿರಾರು ಭಕ್ತರು ಇಂದು ನೆರೆದಿದ್ದು, ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆದು ಹರಕೆ ಸಮರ್ಪಿಸಲು ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ವಿಶೇಷ ಪೂಜೆಗಳು ನಡೆದವು. ಜಾತ್ರೆ ನಡೆಯುವ ಸುತ್ತಮುತ್ತಲ ಜಾಗಗಳಲ್ಲಿ ಅಂಗಡಿಗಳು ಕೂಡ ತೆರೆದಿದ್ದು, ವ್ಯಾಪಾರ ವಹಿವಾಟು ಕೂಡ ಜೋರಾಗಿ ಕಂಡು ಬಂದಿತ್ತು.
ವಿಶೇಷವಾಗಿ ಮಹಿಳೆಯರು ಹರಿಷಣ ಬಣ್ಣದ ಸೀರೆ ಧರಿಸಿ, ಪುರುಷರು ಹರಿಷಿಣ ಬಣ್ಣದ ಪಂಜೆ ಧರಿಸಿ ವಿಶೇಷ ವಾದ್ಯಗಳೊಂದಿಗೆ ದೇವಸ್ಥಾನಕ್ಕೆ ಬರುವುದು ಕಂಡು ಬಂದಿತ್ತು. ದೇವಸ್ಥಾನದ ಸುತ್ತಮುತ್ತ ಪುಂಡರ ಹಾವಳಿಯನ್ನು ತಡೆಯಲು ಪೊಲೀಸ್ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿತ್ತು. ಕಳ್ಳತನವಾದರೆ ತಕ್ಷಣವೇ ಕಂಡು ಹಿಡಿಯಲು ಅನುಕೂಲವಾಗುವಂತೆ 35ಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ದೇವಸ್ಥಾನದ ಆವರಣದಲ್ಲಿಯೇ ವಿಶೇಷ ಪೊಲೀಸ್ ಠಾಣೆಯನ್ನು ತೆರೆಯಲಾಗಿತ್ತು. ಹಾಗೂ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲಾಗಿತ್ತು. ಮಳೆ ವಿಶ್ರಾಂತಿ ಕೊಟ್ಟಿದ್ದರಿಂದ ಭಕ್ತರ ಸಂಖ್ಯೆಯೂ ಹೆಚ್ಚಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post