ಕಲ್ಪ ಮೀಡಿಯಾ ಹೌಸ್ | ಸಕಲೇಶಪುರ(ಹಾಸನ) |
ನಿರಂತರ ಭಾರೀ ಮಳೆಯಿಂದಾಗಿ #Heavy rain ಸಕಲೇಶಪುರದ ಕುಂಬರಡಿ ಹಾಗೂ ಹಾಲೇರ್ ಎಸ್ಟೇಟ್ ನಡುವೆ ಅಪಾಯಕಾರಿಯಾಗಿ ಭಾರೀ ಭೂಕುಸಿತ ಉಂಟಾಗಿದ್ದು, ಇಲ್ಲಿನ ರಸ್ತೆಯೇ ಮಣ್ಣಿನೊಂದಿಗೆ ಪ್ರಪಾತ ಸೇರಿದೆ.
ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆ ಜಿಲ್ಲೆಯಲ್ಲಿ ಹಲವು ಅನಾಹುತಗಳನ್ನು ಸೃಷ್ಠಿ ಮಾಡುತ್ತಿದ್ದು, ಈ ಭೂಕುಸಿತಕ್ಕೆ ಜನ ಬೆಚ್ಚಿ ಬಿದ್ದಿದ್ದಾರೆ.

Also read: ಚಾರ್ಮಾಡಿ ಹೆದ್ದಾರಿ ಬಂದ್ | ಚಿಕ್ಕಮಗಳೂರು-ದಕ್ಷಿಣ ಕನ್ನಡ ಸಂಪರ್ಕ ಕಡಿತ | ವಾಹನ ಸವಾರರೇ ಎಚ್ಚರ
ಮಳೆಗೆ ಸಕಲೇಶಪುರ ತಾಲೂಕಿನ ಮಠಸಾಗರ ಗ್ರಾಮದ ಸೇತುವೆ ಸಂಪೂರ್ಣ ಜಲಾವೃತಗೊಂಡಿದ್ದು, ಸೇತುವೆ ಮುಳುಗಡೆ ಹಿನ್ನೆಲೆ ಕೆಲ ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ.

ಭಾರಿ ಮಳೆಯ ನಡುವೆ ಶಾಲೆಗಳಿಗೆ ತೆರಳಲು ವಿದ್ಯಾರ್ಥಿಗಳು, ಶಿಕ್ಷಕರು ಪರದಾಡುವಂತಾಗಿದ್ದು, ಮಕ್ಕಳಿಗೆ ರಜೆ ನೀಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









Discussion about this post