ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕಲಬುರ್ಗಿಯ ಪಾಲಿ ಇನ್ಸ್ಟಿಟ್ಯೂಟ್ ಮತ್ತು ಜೈನ್ (ಡೀಮ್ಡ್ ಟು ಬಿ ಯೂನಿವರ್ಸಿಟಿ)ಯ ಸ್ಕೂಲ್ ಆಫ್ ಕಾಮರ್ಸ್ ಕನ್ನಡ ಭಾಷಾ ವಿಭಾಗದ ಸಹಯೋಗದಲ್ಲಿ ಆಗಸ್ಟ್ 3ರ ಶನಿವಾರ ಬೆಳಗ್ಗೆ 10:30 ರಿಂದ ಜಯನಗರ 9ನೇ ಬ್ಲಾಕ್ ನಲ್ಲಿರುವ ಜೈನ್ ವಿವಿಯ ಜೆಜಿಐ ನಾಲೆಡ್ಜ್ ಕ್ಯಾಂಪಸ್ ಕಾನ್ಫರೆನ್ಸ್ ಹಾಲ್ನಲ್ಲಿ ‘ಬೌದ್ಧ ಸಾಹಿತ್ಯ : ಹಲವು ನೆಲೆಗಳು’ #Buddha literature ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ.
ವಿಚಾರ ಸಂಕಿರಣದ ಉದ್ಘಾಟನೆಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಮುಡ್ನಾಕೂಡು ಚಿನ್ನಸ್ವಾಮಿ ಮಾಡುವರು. ಜೈನ್ ಸಮೂಹ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ರವೀಂದ್ರ ಭಂಡಾರಿ, ಜೈನ್ (ಡೀಮ್ಡ್ ಟು ಬಿ ಯುನಿವರ್ಸಿಟಿ) ಪ್ರೋ-ವೈಸ್ ಛಾನ್ಸಲರ್ ಡಾ. ದಿನೇಶ್ ನೀಲಕಂಠ ಗೌರವಾನ್ವಿತ ಅತಿಥಿಗಳಾಗಿ ಆಗಮಿಸುವರು.
ಜೈನ್ (ಡೀಮ್ಡ್ ಟು ಬಿ ಯೂನಿವರ್ಸಿಟಿ)ಯ ಭಾಷಾ ವಿಭಾಗದ ಮುಖ್ಯಸ್ಥೆ ಡಾ. ರಜನಿ ಜೈರಾಮ್ ಅಧ್ಯಕ್ಷತೆ ವಹಿಸುವ ಸಮಾರಂಭದಲ್ಲಿ ಸ್ಕೂಲ್ ಆಫ್ ಕಾಮರ್ಸ್ ಕನ್ನಡ ಭಾಷಾ ವಿಭಾಗದ ಸಂಚಾಲಕಿ ರಾಜೇಶ್ವರಿ ಆಶಯ ನುಡಿಗಳನ್ನಾಡುವರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ಪಾಲಿ ಇನ್ಸ್ಟಿಟ್ಯೂಟ್ ನ ನಿರ್ದೇಶಕರಾದ ಪ್ರೊ ಮಲ್ಲೇಪುರಂ ಜಿ ವೆಂಕಟೇಶರವರು ‘ಬೌದ್ಧ ಸಾಹಿತ್ಯ ಪೂರ್ವಾಪರಗಳು’ ಕುರಿತು ಸಂವಾದ ನಡೆಸುವರು. ಬೆಂಗಳೂರು ಮಹಾಬೋಧಿ ಸೊಸೈಟಿ ತ್ರಿಪಿಟಿಕ ಗ್ರಂಥಮಾಲಾ ಯೋಜನೆಯ ನಿರ್ದೇಶಕ ಡಾ. ಬಿ. ವಿ. ರಾಜಾರಾಮ್ ‘ಬೌದ್ಧ ಸುತ್ತಸಾಹಿತ್ಯ’ ಕುರಿತು ವಿಚಾರ ಮಂಡಿಸುವವರು. ಬಸವೇಶ್ವರ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಶೀಲಾದೇವಿ ಮಳಿಮಠ ಹಾಗೂ ವಿಜಯ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಎಸ್. ಎಲ್. ಮಂಜುನಾಥ್ ಪ್ರತಿಕ್ರಿಯಿಸುವರು.
ಆದಿಚುಂಚನಗಿರಿ ವಿಶ್ವವಿದ್ಯಾಲಯದ ಸಹಪ್ರಾಧ್ಯಾಪಕ ಡಾ. ಟಿ. ಎನ್. ವಾಸದೇವಮೂರ್ತಿ ‘ಧಮ್ಮಪದ ಸಾಹಿತ್ಯ’ ಕುರಿತು ವಿಚಾರ ಮಂಡಿಸುವರು. ವಿಜಯ ಪದವಿಪೂರ್ವ ಮಹಾವಿದ್ಯಾಲಯದ ಉಪನ್ಯಾಸಕಿ ಡಾ.ಅರ್ಚನಾ ಹಾಗೂ ಎನ್ಎಂಕೆಆರ್‌ವಿ ಮಹಿಳಾ ವಿದ್ಯಾಲಯದ ಮುಖ್ಯಸ್ಥೆ ಡಾ. ಸಂಧ್ಯಾ ಹೆಗಡೆ ಪ್ರತಿಕ್ರಿಯಿಸುವರು.
‘ಜಾತಕ ಕಥಾ ಸಾಹಿತ್ಯ’ದ ಬಗ್ಗೆ ಬೌದ್ಧ ವಿದ್ವಾಂಸರಾದ ಮೊಳಕಾಲ್ಮೂರು ಶ್ರೀನಿವಾಸಮೂರ್ತಿ ವಿಚಾರ ಮಂಡಿಸುವರು. ಎಸ್ಎಸ್ಎಂಆರ್ ವಿ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ಪ್ರತಿಮಾ ವಿಜಯ್ ಹಾಗೂ ಕ್ರಿಸ್ತ ಜಯಂತಿ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ. ಕುಪ್ಪನಹಳ್ಳಿ ಎಂ. ಭೈರಪ್ಪ ಪ್ರತಿಕ್ರಿಯಿಸುವರು ಎಂದು ಕಾರ್ಯಕ್ರಮದ ಆಯೋಜಕರಾದ ಪಾಲಿ ಇನ್ಸ್ಟಿಟ್ಯೂಟ್ ಕಾರ್ಯದರ್ಶಿ ರಾಧಾಕೃಷ್ಣ ಮತ್ತು ಬೌದ್ಧ ಸಾಹಿತ್ಯ ರಾಷ್ಟ್ರೀಯ ವಿಚಾರ ಸಂಕಿರಣದ ಸಂಚಾಲಕ ರಾಜಕುಮಾರ ಬಡಿಗೇರ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















