ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ/ದಕ್ಷಿಣ ಕನ್ನಡ |
ಈಗಾಗಲೇ ನಿರಂತರ ಮಳೆಯಿಂದಾಗಿ ಹೈರಾಣಾಗಿರುವ ಮಲೆನಾಡು #Malnad ಹಾಗೂ ಕರಾವಳಿಯ #Coastal 5 ಜಿಲ್ಲೆಗಳಿಗೆ ಮುಂದಿನ ಎರಡು ದಿನ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಈ ಕುರಿತಂತೆ ಹವಾಮಾನ ಇಲಾಖೆ #IMDKarnataka ಮಾಹಿತಿ ಪ್ರಕಟಿಸಿದ್ದು, ಆಗಸ್ಟ್ 1ರವರೆಗೂ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದ್ದು, ಅತಿ ತೀವ್ರವಾದ ಮಳೆಯಾಗಲಿದೆ ಎಂದಿದೆ.
ಉಡುಪಿ #Udupi ಜಿಲ್ಲೆಯಲ್ಲಿ ನಾಳೆ ಅಂದರೆ ಜುಲೈ 30ರಂದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಈ ಐದೂ ಜಿಲ್ಲೆಗಳಲ್ಲಿ ಆಗಸ್ಟ್ 1ರವರೆಗೂ ರೆಡ್ ಅಲರ್ಟ್ #RedAlert ಘೋಷಿಸಲಾಗಿದ್ದು, ತೀವ್ರವಾದ ಮಳೆ ಸುರಿಯಲಿದೆ.
Also read: ಶಿಕಾರಿಪುರ | ಮೈದುಂಬಿಕೊಂಡ ಅಂಜನಾಪುರ ಜಲಾಶಯಕ್ಕೆ ಬಾಗಿನ ಸಮರ್ಪಣೆ
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಆಗಸ್ಟ್ 2ರಂದು ಆರೆಂಜ್, ಆಗಸ್ಟ್ 3-4 ರಂದು ಯೆಲ್ಲೋ ಅಲರ್ಟ್, ಉತ್ತರ ಕನ್ನಡ ಜಿಲ್ಲೆಯಲ್ಲಿ ಜುಲೈ 31-ಆಗಸ್ಟ್ 1ರಂದು ಆರೆಂಜ್, ಆಗಸ್ಟ್ 2-4ರವರೆಗೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಈಗಾಗಲೇ ಹಲವು ಭೂ ಕುಸಿತಕ್ಕೆ ಒಳಗಾಗಿರುವ ಹಾಸನ ಜಿಲ್ಲೆಯಲ್ಲಿ ಜುಲೈ 31-ಆಗಸ್ಟ್ 2ರಂದು ಆರೆಂಜ್, ಜುಲೈ 3ರಂದು ಯೆಲ್ಲೋ ಅಲರ್ಟ್ ಮುನ್ಸೂಚನೆ ನೀಡಲಾಗಿದೆ.
ಶಿವಮೊಗ್ಗದ ಮುನ್ಸೂಚನೆಯೇನು?
ಇನ್ನು, ಜುಲೈ 31 ಹಾಗೂ ಆಗಸ್ಟ್ 1ರಂದು ಜಿಲ್ಲೆಯಲ್ಲಿ ರೆಡ್ ಹಾಗೂ ಜುಲೈ 2 ಆರೆಂಜ್, ಜುಲೈ 3ರಂದು ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post