No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
  • Advertise With Us
  • Grievances
  • About Us
  • Contact Us
Saturday, October 17, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಆಷಾಢ ಅಮಾವಾಸ್ಯೆಗೆ ಕುಂದಾಪ್ರ ಕನ್ನಡದ ಕಂಪು

kalpa News by kalpa News
August 5, 2024
in Special Articles
0
ಆಷಾಢ ಅಮಾವಾಸ್ಯೆಗೆ ಕುಂದಾಪ್ರ ಕನ್ನಡದ ಕಂಪು
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |

“ಸರ್ವ ಜನಾಂಗದ ಶಾಂತಿಯ ತೋಟ” ಎಂದು ಕನ್ನಡ ನಾಡನ್ನು ಕುವೆಂಪು ಬಣ್ಣಿಸಿದಂತೆ ನಮ್ಮದು ಬಹು ಭಾಷಾದೇಶ ಇಲ್ಲಿ ಎಲ್ಲಾ ಮಾತೃಭಾಷೆ ಬೆಳೆದು ಭಾಷಾ ಕಂಪು ಸದಾ ಪಸರಿಸುತ್ತಿರಲು ಮನುಷ್ಯನೆ ಭಾಷಾ ಕೇಂದ್ರ ಬಿಂದುವಾಗಿರುವುದು ನಿಜ.

ಭಾಷಾವಾರು ವಿಂಗಡನೆಯ‌ ದಿನದಂದು ಆಯಾಯ ರಾಜ್ಯದಲ್ಲಿ ಅಲ್ಲಿನ ರಾಜ್ಯ ಭಾಷೆಗೆ ಸಂಬಂಧ ಪಟ್ಟ ಸಂಭ್ರಮಾಚರಣೆಗಳು ನಡೆಯುತ್ತವೆ. ಆದರೆ ಕಡಲು ನದಿಗಳ ಸುಂದರ ಸಂಗಮದ ಊರು. ದ್ವೀಪಗಳ ತೊಟ್ಟಿಲು ಎಂಬ ಹೆಗ್ಗಳಿಕೆಯ ಕುಂದಾಪುರದ ಮುಕುಟಕ್ಕೆ ಬೆಳ್ಳಿಗೆರೆಯ ಮೇಲೊಂದು ಚಿನ್ನದ ಚುಕ್ಕೆ ಎಂಬಂತೆ ಇಲ್ಲಿನ ಆಡುಭಾಷೆ #Kundapra Kannada ಕುಂದಾಪ್ರ ಕನ್ನಡ.
ಆಷಾಡ (ಆಸಾಡಿ) ಅಮಾವಾಸ್ಯೆ #Asadi Amavasya ಅಂದರೆ ಕರ್ಕಾಟಕ ಅಮಾವಾಸ್ಯೆಯಂದು ವಿಶ್ವದಾದಂತ್ಯ ನೆಲೆಸಿರುವ ಕುಂದ ಕನ್ನಡಿಗರಲ್ಲಿ ಸ್ಪೂರ್ತಿ ತುಂಬುವ “ವಿಶ್ವ ಕುಂದಾಪ್ರ ಕನ್ನಡ ದಿನದ” ಆಚರಣೆ ನಡೆಯುತ್ತಿದೆ. ಕುಂದಾಪ್ರ ಕನ್ನಡದ ಕಂಪುನ್ನು ಪಸರಿಸುವ ನಿಟ್ಟಿನಲ್ಲಿ ಹೊಸ ತಲೆಮಾರಿಗೂ ಭಾಷಾ ಸವಿಯ ಉಣಿಸಿ, ಗ್ರಾಮೀಣ ಸೊಗಡನ್ನು ಹೊಂದಿರುವ ಭಾಷೆಗೆ ಕುಂದು ಬರದೆ ಹಬ್ಬಲಿ ಎಂಬ ಮನೋಭಾವದ ಭಾಷಾಭಿಮಾನಕ್ಕೆ ತಲೆದೂಗಲೆ ಬೇಕು. ಒಟ್ಟಿನಲ್ಲಿ ಭಾಷೆ ಬೆಳವಣಿಗೆಗೆ ಇಲ್ಲಿ ಆದ್ಯತೆ. ಇದ್ ದೊಡ್ಡ ಸಂಗ್ತಿ ಮಾರಾಯ್ರೆ, ಒಳ್ಳೆ ಕತಿ ಆಯ್ತ ಅಲ್ಲದೆ ಕಣ್- ಬಾಯ್ ಬಿಡ್ಬೇಡಿ… ಹೌದೆ ನಮ್ ವಿಶ್ವ ಕುಂದಾಪ್ರ ಕನ್ನಡ ದಿನ ಅಂಬ್ರ ನಮ್ ಭಾಷಿ ನಮ್ಗ್ ಚಂದು..ಎನ್ನುತ್ತಾ ಆಚರಣೆಗೆ ಅಣಿಯಾಗಿದ್ದಾರೆ ಕುಂದಾಪುರದ ಜನರು.

ನಮ್ಮ ಭಾಷೆ ನಮ್ಮ ಹೆಮ್ಮೆ = ಕುಂದಾಪ್ರ ಕನ್ನಡದ ಶ್ರೀಮಂತಿಕೆಗೆ ದ್ಯೋತಕವಾಗಿ ಈ ಊರಿನ ಜನರ ಭಾಷಾ ಪ್ರೀತಿಯೆ ಇದರ ಉಳಿವು ಹಾಗೂ ಇಂದು ಎಲ್ಲೆಡೆ ಸಂಭ್ರಮದಿಂದ ಆಚರಿಸಿ ಕೊಳ್ಳುವ ವಿಶ್ವ ಕುಂದಾಪ್ರ ಕನ್ನಡ ದಿನದ ಕಂಪು. ಇದು ಕೇವಲ ಭಾಷೆ ಮಾತ್ರವಲ್ಲ ಅಲ್ಲಿನ ಮಣ್ಣಿನ ಸಾಂಸ್ಕೃತಿಕ ತನವನ್ನು ಪ್ರತಿ ‌ನಿಧಿಸುವ ಮಾಧ್ಯಮ.
ಇದು ಚುರುಕಿನ ಭಾಷೆ ಕೇವಲ ಮಾತಿನ ಯಾಂತ್ರಿಕ ಕ್ರಿಯೆಯಲ್ಲ. ದೊಡ್ಡ ಪದ ಸಮೂಹವನ್ನು ಚಿಕ್ಕದು ಗೊಳಿಸಿ ಎರಡೆ ಅಕ್ಷರಗಳಲ್ಲಿ ಉದಾಹರಣೆಗೆ ಹೋಗುತ್ತೇನೆ ಅನ್ನುವುದಕ್ಕೆ “ಹ್ವೊತೆ”. ಕುಳಿತು ಕೊಳ್ಳುವುದಕ್ಕೆ “ಕುಕೊ” ಆಗಬಹುದು ಅನ್ನಲು “ಅಕ್” ಎನ್ನುತ್ತಾರೆ. ಅಷ್ಟೇ ಅಲ್ಲದೆ ಧ್ವನಿಯ ಏರಿಳಿತ ಶುತ್ರಿಯೊಂದಿಗೆ ವ್ಯಾಕರಣದ ಗಟ್ಟಿರೂಪವು ಇದರಲ್ಲಿದೆ. ಆದರೆ ಮಹಾಪ್ರಾಣಗಳು ಅತಿ ವಿರಳವಾಗಿದ್ದು ಮಾತಿನಲ್ಲಿ “ಉ” ಕಾರ ಹೆಚ್ಚಾಗಿ ಉಚ್ಚಾರಣೆಯಾಗುತ್ತದೆ. ಹೊಪುದು, ಬೆಚ್ಚುದು, ಕಾಂಬುದು, ಜಂಬುನಾಥು, ಕೇಂಬುದು, ಕೊಡುದು, ಉಂಬುದು ಹೀಗೆ. ಕುಂದಾಪ್ರ ಭಾಷೆ ಕೇಂಬುಕೆ ಚಂದ. ಜೋಡಿ ಶಬ್ದ ಬಳಕೆಯು ಅತಿಯಾಗಿ ಕಂಡು ಬರುತ್ತದೆ. ಚ್ಯೊಯ್ – ಚ್ಯೊಯ್ ದೋಸಿ ಹೊಯ್ಯವುದ್. ಸರಪರ ಪಾಯಸ ಸುರುದ್,ಕಯ್ಯ ಇಲ್ಲ ಕುಯ್ಯ ಇಲ್ಲ ತಾನಾಯ್ತ ತನ್ನ ‌ಕೆಲ್ಸಾ ಆಯ್ತ್ .ಪಿಳಿ‌-ಪಿಳಿ ಕಣ್ – ಕಣ್ ಬಿಟ್ಟಕಂಡ್ ಅಂಬ್ ಈ ಭಾಷೆಯೊಳಗೊಂದು ವೈವಿಧ್ಯತೆ ಇದೆ. ಪ್ರಾದೇಶಿಕ ವ್ಯತ್ಯಾಸಗಳು ಕೇಳ ಸಿಗುತ್ತದೆ. ಅಷ್ಟೇ ಅಲ್ಲದೇ ಒಂದೊಂದು ಸಮೂದಾಯದ ಜನರ ಉಚ್ಚಾರಣೆ, ಶಬ್ದ ಬಳಕೆಯಲ್ಲಿ ಭಿನ್ನತೆ ಕಂಡುಬರುತ್ತದೆ. ಕುಂದಾಪ್ರ ಕನ್ನಡಕ್ಕೆ ಅದರದೆ ಆದ ಸೊಗಡಿದೆ. ಇಲ್ಲಿ ಬೇರೆ ಬೇರೆ ಮಾತೃ ಭಾಷೆ ಆಡುವ ಜನರಿದ್ದು ಅವರವರ ಭಾಷಾ ಓರಣ ಕುಂದಾಪ್ರ ಕನ್ನಡಕ್ಕೆ ಅಲ್ಪ ಸಲ್ಪವಾಗಿ ತಾಗಿದಂತೆ ಕೇಳಿಬರುತ್ತದೆ.

ಭಾಷಾ ಶ್ರೀಮಂತಿಕೆ = ಕುಂದಾಪ್ರ ಕನ್ನಡದ ಶ್ರೀ ಮಂತಿಕೆಯ ಅಗಾಧತೆ ನೋಡುವಾಗ ಇದು ಉಪಭಾಷೆ, ಪ್ರಾದೇಶಿಕ ಭಾಷೆ ಅಂತ ಅನ್ನಿಸುವುದೆ ಇಲ್ಲ. ಇದರೊಳಗೆ ಏನ್ನುಂಟು ಏನಿಲ್ಲ ಅಗೆದಷ್ಟು ಬಗೆದಷ್ಟು ಸಂಭ್ರಧ್ದವಾಗಿದೆ. ಸರ್ವಕಾಲಿಕ ಸಂದೇಶವನ್ನು ಸಾರುವ ಬದುಕಿಗೆ ಪೂರಕವಾದ ತಮ್ಮ ಜೀವನಾನುಭವದಿಂದ ಕಂಡು ಕೊಂಡ ವಿಚಾರಗಳ ಸಾರ ಸಂಗ್ರಹದ ಭತ್ತ ಕುಟ್ಟುವ ಹಾಡುಗಳು, ದೈನಂದಿನ ವ್ಯವಹಾರದಲ್ಲಿ ನಮಗರಿವಿಲ್ಲದೆ ಸಂದರ್ಭನುಸಾರವಾಗಿ ಮೂಡಿಬರುವ ಶಬ್ದಗಳ ಸುಳಿ ತನ್ನ ತನವನ್ನು ಬಿಟ್ಟು ಕೊಡದ ಭಾಷೆ ಇದು. ಉದಾಹರಣೆಗೆ ಹ್ಯಾಂಗ್ ಇದ್ರಿ ಎಂದು ನಮ್ಮವರನ್ನು ವಿಚಾರಿಸಿ ಕೊಳ್ಳುವ ಭಾಷಾ ಶೈಲಿ. ಹಂಬ್ಲಾಯಿ ಹೇಳಿ ಬಲ್ಯ ಅನ್ನುವುದು ಹಂಬ್ಲಾಯ್ದೆ ಹೋರ್ ಯಾಪಾರ ಹೆಸ್ಕಿ ಆತಿತ್…. ಇಂತಹ ಆಡು ಭಾಷೆ ಎಂದೂ ಅಳಿಯದು ಕಾರಣ ಇಷ್ಟೇ. ಮಾನವ ಸಂಘ ಜೀವಿ ಮಾತು ಮಾನವನ ಅಸ್ತ್ರ ಮಾತಾಡದೆ ಇರಲಾರ ಹಾಗೆಂದ‌ ಮೇಲೆ ಮಾತಿಗೆ ಭಾಷೆ ಬಳಸಲೇ ಬೇಕುತಾನೆ ಭಾಷೆ ಬಳಸಿದಷ್ಟು ಸಮೃದ್ಧವಾಗುವುದು.‌
ಭಾಷಾ ಸೌಂದರ್ಯ= ಒಂದೊಂದು ಶಬ್ದಗಳು ತಳಿರು ತೋರಣ ಕಟ್ಟಿ ಶೃಂಗರಿಸಿದಂತೆ. ಅರ್ಥ ಪೂರ್ಣ ಗಾದೆ ಮಾತುಗಳಿವೆ. “ಹೊಯ್…..ಬೆಲ್ಲ ಹಾಕರ್ ಅಷ್ಟೇ ಪಾಯಸು ಆತ್ತ್ ಅಂಬುದ್. ಸುಳ್ಳ್ ಅಲ್ಲಾ ಕಾಣಿ “ಇಲ್ಲಿ ಬೆಲ್ಲ ಮತ್ತು ಪಾಯಸ ಮುಖ್ಯವಲ್ಲ. ಪ್ರಯತ್ನಕ್ಕೆ ತಕ್ಕ ಫಲ ಸಿಗುತ್ತದೆ ಎಂದರ್ಥ. ಹೇಂಗಾರೂ ಸೈಯ್ಯೆ ನಮ್ಗಂತೂ ಒಂದ್ ನಮನಿ ಹಬ್ಬು ಈ ವಿಶ್ವ ಕುಂದಾಪ್ರ ಕನ್ನಡ ದಿನ.

ಒಂದು ಬೇಸರದ ಸಂಗತಿ ಎಂದರೆ ಇತ್ತೀಚೆಗೆ ಕುಂದಾಪ್ರ ಕನ್ನಡ ಆಡುವ ಕೆಲವರು ಭಾಷೆಯ ಮೂಲ ಬೇರನ್ನು ಅಲುಗಾಡಿಸುತ್ತಿದ್ದು, ಭಾಷೆಯನ್ನು ತಿರುಚುತ್ತಾ ಪರಭಾಷಾ ಶಬ್ದಗಳನ್ನು ಕುಂದಾಪ್ರ ಕನ್ನಡದೊಳಗೆ ತುರಿಕಿಸುತ್ತಾ ಭಾಷೆಯ ಅಂದ ಗೆಡಿಸಿ ಭಾಷಾ ಅಸ್ತಿತ್ವಕ್ಕೆ ಧಕ್ಕೆ ಬರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಭಾಷೆಯ ಸ್ವರೂಪದಲ್ಲಿ ಬದಲಾವಣೆಗಳಾಗುತ್ತಾ ಹೋಗಿ ಭಾಷಾ ಶ್ಯೆಲಿಯಲ್ಲಿ ಬದಲಾವಣೆ ಬರಬಾರದು. ಆಧುನಿಕತೆ ಬೆಳೆದಂತೆ ಕೆಲವು ಕಾಯಕಗಳು ಮರೆಯಾಗಿ ಬಳಸುವ ವಸ್ತುಗಳ ಅಗತ್ಯವಿಲ್ಲದೆ. ಅದರ ಹೆಸರು ಮರೆಯಾಗುತ್ತಿದೆ. ಉದಾಹರಣೆಗೆ ಒನಕಿ, ಕಡಗೋಲ್, ತಿರಿ, ಗೆರಸಿ, ಸಾರಣಿಗಿ, ಕಡುಕಲ್ .
ಕುಂದಾಪ್ರ ಕನ್ನಡ ಯಾವ ಶಾಲೆಗೂ ಉದ್ಯೋಗಕ್ಕೂ ಮಾನದಂಡವಲ್ಲ. ಇದು ಮನದಂಗಳದ ಭಾಷೆ, ಮನೆ, ಮನೆಯ ಭಾಷೆ, ಒಡಲಾಳದಲ್ಲಿ ಅಡಗಿರುವ ನಾಲಿಗೆಯಲ್ಲಿ ನಲಿವ ಸೋಲಿಲ್ಲದ ಭಾಷೆ. ಇದಕ್ಕೆ ಅಳಿವಿಲ್ಲ. ಮೌಖಿಕವಾಗಿ ಮೆರೆದಾಡುವ ಕುಂದ ಕನ್ನಡ, ಕುಂದಾಪ್ರ ಕನ್ನಡ ಎಂದೆಲ್ಲಾ ಕರೆವ ಭಾಷೆ ಪಶ್ಚಿಮಕ್ಕೆ ಕಲ್ಯಾಣಪುರ ಹೊಳೆಯಿಂದ, ದಕ್ಷಿಣಕ್ಕೆ ‌ಹೆಬ್ರಿ, ಉತ್ತರಕ್ಕೆ ಬೈಂದೂರು ಶಿರೂರುನಿಂದ ಮಾಬುಕಳ ಹೊಳೆಯವರೆಗೆ ಮೂಡಣ ಪರ್ವತ ಹಾಗೂ ಪಡುವಣ ಕಡಲ ತಡಿಯವರಗೆ ಇರುವ ಊರುಗಳಲ್ಲಿ ಕುಂದಾಪ್ರ ಕನ್ನಡ ಹಬ್ಬಿದೆ.

ಲತಾ ಸಂತೋಷ ಶೆಟ್ಟಿ, ಮುದ್ದುಮನೆ 

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Asadi AmavasyaKannada News WebsiteKannada_NewsKannada_News_LiveKannada_News_OnlineKannada_WebsiteKundapra KannadaLatest News KannadaNews_in_KannadaNews_KannadaSpecial Articleಆಷಾಡ (ಆಸಾಡಿ) ಅಮಾವಾಸ್ಯೆಕುಂದಾಪ್ರ ಕನ್ನಡ.ವಿಶೇಷ ಲೇಖನ
Share198Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ | ಇಂದು ದರ ಎಷ್ಟಿದೆ?

Next Post

ಚಿಕ್ಕಮಗಳೂರು | ನಕಲಿ ಚಿನ್ನದ ಆಭರಣ ಅಡವಿಟ್ಟು ವಂಚಿಸಿದ್ದ ಇಬ್ಬರ ಬಂಧನ

kalpa News

kalpa News

Next Post
ಚಿಕ್ಕಮಗಳೂರು | ನಕಲಿ ಚಿನ್ನದ ಆಭರಣ ಅಡವಿಟ್ಟು ವಂಚಿಸಿದ್ದ ಇಬ್ಬರ ಬಂಧನ

ಚಿಕ್ಕಮಗಳೂರು | ನಕಲಿ ಚಿನ್ನದ ಆಭರಣ ಅಡವಿಟ್ಟು ವಂಚಿಸಿದ್ದ ಇಬ್ಬರ ಬಂಧನ

Leave a Reply Cancel reply

Your email address will not be published. Required fields are marked *

No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL