ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಿಜವಾದ ಅರ್ಥದಲ್ಲಿ ಇನ್ನೂ ಸ್ವತಂತ್ರ ಸಿಕ್ಕಿಲ್ಲ ಎಂದು ಉಡುಪಿಯ ಸಾಂಗತ್ಯ ಸಂಸ್ಥೆಯ ಸಹ-ಸಂಸ್ಥಾಪಕ ಹಾಗೂ ಸ್ವಯಂ ನಿವೃತ್ತ ಪ್ರಾಧ್ಯಾಪಕ ಡಾ. ಶ್ರೀಕುಮಾರ್ ಹೇಳಿದರು.
ಅವರು ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಉಳಿವು ಫೌಂಡೇಶನ್, ಗೋ ಸಿರಿ ಸೇವಾ ಟ್ರಸ್ಟ್ ಸಹಯೋಗದೊಂದಿಗೆ ಬುಧವಾರ ಚರಕೋತ್ಸವ #Charkothsava ಎರಡು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಇದು ನನ್ನ ದೇಶ, ದೇಶ ಕಟ್ಟುವಲ್ಲಿ ನನ್ನ ಪಾತ್ರ ಇದೆ ಅನಿಸಬೇಕು. ನಿಜ ಅರ್ಥದಲ್ಲಿ ಸ್ವತಂತ್ರ ಬ್ರಿಟಿಷ್ ಪಡೆದಿದ್ದು ಅಲ್ಲ ಗಾಂಧೀಜಿ ತಮ್ಮ ಆಶ್ರಮ ವಾಸಿಗಳಿಗೆ ಸತ್ಯ, ಅಹಿಂಸೆ, ಸ್ವದೇಶಿ ತತ್ವ ಬೋಧನೆ ಮಾಡಿದ್ದರು. ಹಿಂದೆಗಿಂತ ಹೆಚ್ಚು ಆರ್ಥಿಕ ಅಸಮಾನತೆ ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ ಚರಕದ ಮಹತ್ವವನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.
ಚರಕ ಬರೇ ಬಟ್ಟೆ ತಯಾರಿಕೆ ಯಂತ್ರ ಅಲ್ಲ. ಸರಳ ಜೀವನದ ಧ್ಯೋತಕ. ನಮ್ಮ ಬುದ್ಧಿಮತ್ತೆ ಸೇವೆಗೆ ಬಳಸಬೇಕು ಅಂತ ಗಾಂಧಿ ಹೇಳಿದ್ದಾರೆ. “ಸಿಂಥೆಟಿಕ್, ಮಿಲ್ ಬಟ್ಟೆ ಬಳಕೆ. ಇದಕ್ಕೆ ದೊಡ್ಡ ಬಂಡವಾಳ ಬೇಕು. ಉದ್ಯೋಗ ಅವಕಾಶ ಕಡಿಮೆ. ಹವಾಮಾನ ಬದಲಾವಣೆ ತಪ್ಪು ಸರಿ ಮಾಡಲು ಚರಕ ಪೂರಕ. ಹಿಂದೆ ಹೋದಂತೆ ಅಲ್ಲ. ಅಸಮಾನತೆ ಕಡಿಮೆ ಆಗುತ್ತದೆ. ಸ್ವಾಯತ್ತತೆ ಸಿಗುತ್ತದೆ ಎಂದರು.
ಉಳಿವು ಪೌಂಡೇಷನ್‍ನ ಡಾ.ಸೀಮಾ ಪ್ರಾಸ್ತಾವಿಕ ಮಾತನಾಡಿ, ಪ್ರಕೃತಿ ಜೊತೆಗೆ ಸಾಮರಸ್ಯ ಅಗತ್ಯ. ಶಿರೂರು, ವಯನಾಡು ಬದುಕು ಕ್ಷಣಿಕ ಎಂಬಂತೆ ಆಗಿದೆ. ಹತ್ತಿ ದೇಸೀ ತಳಿಗಳಿಗೆ ಜಾಗತಿಕ ಬೇಡಿಕೆ ಇತ್ತು. ಮ್ಯಾಂಚೆಸ್ಟರ್ ಕೈಗಾರಿಕೆಗಳು ಕಾಯುತ್ತಿದ್ದವು. ಇದಕ್ಕೆ ಬ್ರಿಟೀಷರು ಕೊಡಲಿ ಏಟು ಹಾಕಿದರು. ನಮ್ಮ ತಳಿ ನಾಶ ಮಾಡಿದರು. ಬಿಟಿ ಹತ್ತಿ ತಂದರು. ನೂರಾರು ದೇಸಿ ತಳಿ ಇತ್ತು. ಗಾಂಧೀಜಿ ಚರಕದ ಮೂಲಕ ಸ್ವಾವಲಂಬನೆ ಕನಸು ಕಂಡಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ಶೇ.97 ರಷ್ಟು ಇದ್ದ ಹತ್ತಿ ಕೃಷಿ ಈಗ ಶೇ.04 ಕ್ಕೆ ಇಳಿದಿದೆ ಎಂದು ವಿಷಾದಿಸಿದ ಅವರು, ಕಾರ್ಖಾನೆಗಳ ಸಿಂಥೆಟಿಕ್ ಬಟ್ಟೆ ಬಳಕೆ ಆಗುತ್ತಿದೆ. ಪರಿಸರ ಹಾನಿ ಆಗುತ್ತಿದೆ. ಅತಿರೇಕದ ಯಂತ್ರ ಅವಲಂಬನೆ ನಿರುದ್ಯೋಗ ಸೃಷ್ಟಿ ಮಾಡಿದೆ ಎಂದರು.
Also read: ವಿಕಸಿತ ಭಾರತ ನಮ್ಮೆಲ್ಲರ ಗುರಿಯಾಗಬೇಕು: ಸಂಸದ ಯದುವೀರ್ ಒಡೆಯರ್
“ಖಾದಿ ಬಟ್ಟೆ ತುಂಬಾ ದುಬಾರಿ ಎಂಬ ಆರೋಪ ಇದೆ. ಸಿಂಥೆಟಿಕ್ ಬಟ್ಟೆ ಕಡಿಮೆ ಇದೆ. ಅಲ್ಲಿ ಕಲ್ಲಿದ್ದಲು, ಪೆಟ್ರೋಲಿಯಂ ಬಳಕೆ ಇದೆ. ಇದರಿಂದ ಸಂಪನ್ಮೂಲ ಖಾಲಿ ಆಗುತ್ತಿದೆ.“ಉತ್ಪಾದನೆ ಮತ್ತು ವಿನಿಮಯ ಎಲ್ಲರ ಅಗತ್ಯ ಪೂರೈಸುತ್ತಿಲ್ಲ. ಇದರ ಹಿಂದೆ ಲಾಭದ ದೃಷ್ಟಿ ಇದೆ. ಎಲ್ಲರ ಅಗತ್ಯ ಪೂರೈಸಲು ಲಾಭದ ದೃಷ್ಟಿ ಇರಬಾರದು ಎಂದರು.
ಕರ್ನಾಟಕ ಸರ್ವೋದಯ ಮಂಡಳಿಯ ಚಿತ್ರದುರ್ಗ ಜಿಲ್ಲಾಧ್ಯಕ್ಷ ಡಾ.ಹೆಚ್.ಕೆ.ಎಲ್.ಸ್ವಾಮಿ ಮಾತನಾಡಿ, ಯುವ ಜನಾಂಗ ಬದಲಾವಣೆ ದಾರಿ ಹುಡುಕುತ್ತಿದ್ದಾರೆ. ಫಾರ್ಮಸಿ ಓದಿದ್ದು. ಸಬರಮತಿ ಆಶ್ರಮದಿಂದ 40 ಚರಕ ತಂದಿದ್ದೆ. ಕೊನೆಗೆ ಅಲ್ಲಿಂದ ತರಲು ಆಗಲ್ಲ ಅಂತ ಚಿತ್ರದುರ್ಗ ದಲ್ಲಿ ಚರಕ ತಯಾರು ಮಾಡಿದೆವು. ಈಗ ಶಿವಮೊಗ್ಗ ದಲ್ಲಿ ಚರಕ ತಯಾರು ಮಾಡಿದ್ದಾರೆ. ಇದು ಖುಷಿ ತಂದಿದೆ. ಚಿತ್ರದುರ್ಗ ಪಾರ್ಕ್ ನಲ್ಲಿ ಕಲ್ಲು ಚರಕ ಇಡುವ ಯೋಚನೆ ಇದೆ.ಗಾಂಧೀಜಿ ಚರಕ ಸೂರ್ಯ ಎಂದು ಕರೆದರು ಎಂದರು.
ದಿನ ನಾಲ್ಕು ಗಂಟೆ ನೂಲು ತೆಗೆದರೆ ನಾಲ್ಕು ದಿನಕ್ಕೆ ಒಂದು ಸೀರೆ ತಯಾರಗಲಿದೆ. ಜನ ಆಗಸ್ಟ್ ಹದಿನೈದರಂದು ಮಾತ್ರ ಖಾದಿ ತೊಡಲು ಹೋಗುತ್ತಿದ್ದಾರೆ. ಇದು ಸರಿ ಅಲ್ಲ. ಸ್ವದೇಶಿ ತತ್ವದ ಪ್ರಕಾರ ಅಲ್ಲಿಯ ವಸ್ತು ಅಲ್ಲಿಯೇ ಖರೀದಿ ಮಾಡಬೇಕು. ಇದು ಗಾಂಧೀಜಿ ಸಿದ್ಧಾಂತ. ಗಾಂಧೀಜಿ ಫ್ಲೆಕ್ಸ್ ಮೇಲೆ ಬರೆಯಬಾರದು. ಖಾದಿ ಮೇಲೆ ಬರೆಯಬೇಕು. ಬಟ್ಟೆ ,ಜೀವನ ಎರಡೂ ಚೆನ್ನಾಗಿರಬೇಕು. ಬಟ್ಟೆ ಚೆನ್ನಾಗಿದ್ದರೂ ಜೀವನ ಚೆನ್ನಾಗಿ ಇರಲ್ಲ. “ಗಣ್ಯರಿಗೆ ಹಾರ ಹಾಕಬೇಡಿ, ಖಾದಿ ಬಟ್ಟೆಗಳ ಹಾರ ಹಾಕಿ. ರಸ್ತೆ ರಸ್ತೆಯಲ್ಲಿ ಖಾದಿ ಮಾರಾಟ ಆಗಬೇಕು ಎಂದರು.
ಪರಿಸರ ಅಧ್ಯಯನ ಕೇಂದ್ರ ಮತ್ತು ರೇಡಿಯೋದ ಜಿ.ಎಲ್.ಜನಾರ್ಧನ ಮಾತನಾಡಿ, ಪರಿಸರ ತುರ್ತುಸ್ಥಿತಿ ಇದ್ದೇವೆ. ನಾವೆಲ್ಲಾ ಸಮಸ್ಯೆ ಅನುಭವಿಸುತ್ತಿದ್ದೇವೆ. ದುರಂತ ಕಣ್ಣು ಮುಂದೆ ಇದೆ. ದಾರಿ ಕಾಣುತ್ತಿಲ್ಲ. ನಾವೀಗ ಕೃತಕ ಬುದ್ದಿಮತ್ತೆ ಕಾಲದಲ್ಲಿ ಇದ್ದೇವೆ. ಕಪ್ಪೆ ಹಿಡಿದು ನೀರಿಗೆ ಹಾಕಿ ಬಿಸಿ ಮಾಡಿದರೆ ಸ್ವಲ್ಪ ನೃತ್ಯ ಮಾಡುತ್ತದೆ. ನಾವೂ ಅದೇ ಸ್ಥಿತಿಯಲ್ಲಿ ಇದ್ದೇವೆ ಎಂದರು.
ಚರಕೋತ್ಸವದ ಅಂಗವಾಗಿ ಖಾದಿ ಬಟ್ಟೆ ಮಾರಾಟ ಪ್ರದರ್ಶನ ಗುಡಿ ಕೈಗಾರಿಕೆ ಮತ್ತು ಕರಕುಶಲ ಪ್ರದರ್ಶನ ಸಾವಯವ ತಿನಿಸುಗಳ ಅಂಗಡಿಗಳು, ಪರಿಸರ ಪೂರಕ ವಸ್ತುಗಳ ಮಾರಾಟ, ದೇಸಿ ತರಕಾರಿ ಬೀಜಗಳ ಮಾರಾಟವನ್ನು ಹಮ್ಮಿಕೊಳ್ಳಲಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post