ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಾಗರ ತಾಲೂಕಿನ ಹುಲಿದೇವರಬದ ಗಣಿವಾರ ಕೊಡಚಾದ್ರಿ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳಿಗೆ ನಾಟಿ ಮಾಡುವುದನ್ನು ಹೇಳಿಕೊಡಲಾಯಿತು.
ಸತತ ಐದನೇ ವರ್ಷ ವಿದ್ಯಾರ್ಥಿಗಳಿಗೆ ನಾಟಿ ಮಾಡುವುದನ್ನು ಹೇಳಿಕೊಡಲಾಗುತ್ತಿದ್ದು, ಮಕ್ಕಳಿಗೆ ಬದುಕಿನ ಶಿಕ್ಷಣವಾದ ಕೃಷಿಯಲ್ಲಿ ನಾಟಿ ಮಾಡುವುದನ್ನು ಕಲಿಸುತ್ತಿರುವುದು ಶಾಲೆಯ ಹೆಗ್ಗಳಿಕೆ. ಕಲಿಕೆ ಕೇವಲ ಪುಸ್ತಕದಲ್ಲಿರುವ ಪಠ್ಯಕ್ರಮಕ್ಕಷ್ಟೇ ಸೀಮಿತ ಆಗಬಾರದು ಎಂಬುದು ಶಿಕ್ಷಕರ ಆಶಯ.
ಕೆಸರು ಗದ್ದೆಯಲ್ಲಿ ನಾಟಿ ಮಾಡಿ ಹೊಸ ಅನುಭವ ಪಡೆದ ವಿದ್ಯಾರ್ಥಿಗಳು. ಕಂಬಳದ ಸಂಭ್ರಮವನ್ನು ಅನುಭವಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















