ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಸ್ ಅಡಿಗೆ ಬಿದ್ದು ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಾಗರ ತಾಲೂಕಿನ ಜೋಗ್ ಪಾಲ್ಸ್ #Jog falls ಬಳಿ ನಡೆದಿದೆ.
ಅಭಿಷೇಕ್ (29) ಬಸ್ ನಿಂದ ಆಯತಪ್ಪಿ ಬಿದ್ದ ಯುವಕ. ಆತನ ಮೇಲೆ ಬಸ್ ಚಕ್ರ ಹರಿದಿದ್ದು, ಕೈ, ಕಾಲಿಗೆ ತೀವ್ರ ಪೆಟ್ಟಾಗಿದೆ. ಸದ್ಯ ಅಭಿಷೇಕ್ ಸಾಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Also read: ಶಿವಮೊಗ್ಗ | ಸದ್ಗುರು ಪೈಲ್ಸ್ ಕ್ಲಿನಿಕ್’ನಲ್ಲಿ ಜುಪಿಟರ್ ಅಕಾಡೆಮಿಯಿಂದ ವಿನೂತನ ಕಾರ್ಯಕ್ರಮ ಯಶಸ್ವಿ
ಪ್ರಯಾಣಿಕರಿಂದ ತುಂಬಿದ್ದ ಬಸ್‌ನಲ್ಲಿ ಅಭಿಷೇಕ್ ಬಸ್‌ನ ಹಿಂಬಾಗಿಲ ಬಳಿಯಲ್ಲಿ ನಿಂತಿದ್ದರು. ಮುಂದಕ್ಕೆ ಸಾಗುತ್ತಿದ್ದ ಬಸ್ ಚಾಲಕ ಸಡನ್ ಆಗಿ ಬ್ರೇಕ್ ಹಾಕಿದ್ದರಿಂದ ಆಯತಪ್ಪಿದ ಯುವಕ ಕೆಳಕ್ಕೆ ಬಿದ್ದಿದ್ದಾನೆ. ಆತನ ಮೇಲೆ ಬಸ್ ಹರಿದಿದೆ. ತಕ್ಷಣ ಯುವಕನನ್ನು ಕಾರ್ಗಲ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಯಿತು. ಹೆಚ್ಚಿನ ಚಿಕಿತ್ಸೆಗೆ ಸಾಗರದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















