No Result
View All Result
MEIL Completes Historic Largest Concrete Pour for PHWR at Kaiga
English Articles

MEIL Completes Historic Largest Concrete Pour for PHWR at Kaiga

by kalpa News
July 6, 2026
0

Kalpa Media House  |  Karwar  | Megha Engineering & Infrastructures Ltd. (MEIL) has successfully completed one of the largest monolithic...

Read moreDetails
SPARSH RR Nagar Launches 5 Plastic Surgery Clinics of Excellence

SPARSH RR Nagar Launches 5 Plastic Surgery Clinics of Excellence

July 4, 2026
SWR GM inspect Goods Terminal

SWR General Manager Inspects Central Workshop, Ashokapuram, Mysuru Railway Station and Goods Terminal

July 4, 2026
HERO MOTOCORP ANNOUNCES RS 3200+ CRORE INVESTMENT IN ANDHRA PRADESH

HERO MOTOCORP ANNOUNCES RS 3200+ CRORE INVESTMENT IN ANDHRA PRADESH

July 4, 2026
Indriya, Aditya Birla Jewellery makes history with India’s Largest Hand-Painted Madhubani Hoarding

Indriya, Aditya Birla Jewellery makes history with India’s Largest Hand-Painted Madhubani Hoarding

July 3, 2026
  • Advertise With Us
  • Grievances
  • About Us
  • Contact Us
Monday, July 6, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಉತ್ತರ ಕನ್ನಡ

ಮಹಾಪುರುಷರ ಹಾದಿ ಧರ್ಮತತ್ವ ತಿಳಿಯುವ ಸರಳ ಮಾರ್ಗ: ರಾಘವೇಶ್ವರ ಶ್ರೀ

kalpa News by kalpa News
August 23, 2024
in ಉತ್ತರ ಕನ್ನಡ
0
ಮಹಾಪುರುಷರ ಹಾದಿ ಧರ್ಮತತ್ವ ತಿಳಿಯುವ ಸರಳ ಮಾರ್ಗ: ರಾಘವೇಶ್ವರ ಶ್ರೀ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಗೋಕರ್ಣ  |

ಧರ್ಮದ ತತ್ವವನ್ನು ತಿಳಿಯಲು ಇರುವ ಸರಳ ಮಾರ್ಗವೆಂದರೆ, ಮಹಾಪುರುಷರ ದಾರಿಯನ್ನು ಅನುಸರಿಸುವುದು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ #Raghaveshwara shri ನುಡಿದರು.

ಅಶೋಕೆಯ ಗುರುದೃಷ್ಟಿಯಲ್ಲಿ ಚಾತುಮಾಸ್ಯ ಕೈಗೊಂಡಿರುವ ಶ್ರೀಗಳು 33ನೇ ದಿನ 33ನೇ ಗುರುಗಳಾದ ಶ್ರೀ ರಾಘವೇಶ್ವರಭಾರತೀಮಹಾಸ್ವಾಮಿಗಳ ದಿನಚರಿಯ ಅನಾವರಣ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
“ಪರಾತ್ಪರ ಗುರುಗಳಾದ ಎಂಟನೇ ರಾಘವೇಶ್ವರರ ದಿನಚರಿ ಇಂದು ಅನಾವರಣಗೊಂಡಿದೆ. ಯಾವ ದಾರಿಯಲ್ಲಿ ನಾವು ಸಾಗಬೇಕು ಎಂಬ ಬಗ್ಗೆ ಜನಸಾಮಾನ್ಯರಿಗೆ ಗೊಂದಲಗಳು ಇವೆ. ಸ್ಮøತಿ, ವೇದಗಳ ಮೂಲಕ ಇದನ್ನು ಕಂಡುಕೊಳ್ಳಲು ಹೊರಟರೆ ಅಲ್ಲೂ ಗೊಂದಲವಾಗಬಹುದು. ಮುನಿಗಳ ದಾರಿಯಲ್ಲಿ ಮುನ್ನಡೆಯೋಣ ಎಂದುಕೊಂಡರೆ ಒಬ್ಬೊಬ್ಬರದ್ದು ಒಂದೊಂದು ದಾರಿ. ಇಲ್ಲೂ ದಾರಿ ಗೊಂದಲಮಯ ಎಂದು ಬಣ್ಣಿಸಿದರು.

Also read: ಜಿಲ್ಲಾಮಟ್ಟದ ಕುಸ್ತಿ ಪಂದ್ಯಾವಳಿ: ಕ್ರೈಸ್ಟ್‌ಕಿಂಗ್‌ನ ಮೂವರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಧರ್ಮದ ತತ್ವ ಗುಹೆಯೊಳಗೆ ಅಡಗಿಸಲ್ಪಟ್ಟಿದೆ. ಅದನ್ನು ತಿಳಿಯುವ ಸುಲಭ ದಾರಿಯೆಂದರೆ ಮಹಾಪುರುಷರು ನಡೆಯುವ ಹಾದಿ. ಮಹಾಪುರುಷರ ದಾರಿ ಇತರರಿಗೆ ರಾಜಮಾರ್ಗವಾಗುತ್ತದೆ. ಶ್ರೀರಾಮನಂಥ ಮಹಾಪುರುಷರು ನಡೆದ ದಾರಿಯನ್ನು ನೋಡಿದರೆ ನಾವು ಹೇಗೆ ಬದುಕಬೇಕು ಎನ್ನುವುದು ತಿಳಿಯುತ್ತದೆ ಎಂದು ವಿವರಿಸಿದರು.

“ನಮ್ಮ ಪರಾತ್ಪರ ಗುರುಗಳು ನಡೆದ ದಾರಿ, ನಾವು ನಡೆಯಬೇಕಾದ ದಾರಿಯನ್ನು ಶ್ರೀಗಳ ದಿನಚರಿ ತೋರಿಸುತ್ತದೆ. ಇದು ಗುರು- ಶಿಷ್ಯರಿಗೆ ಮಾರ್ಗದರ್ಶನ ನೀಡುವ ಅಪೂರ್ವ ಇತಿಹಾಸ ಕಣಜ. ಹೋದ ದೃಷ್ಟಿಯನ್ನು ತಪಃಶಕ್ತಿಯಿಂದ ಮರಳಿ ಪಡೆದ ಮಹಾನುಭಾವರು ಅವರು. ಸಮಾಜಲ್ಲಿ ಯಾವುದೋ ಮೂಲೆಯಲ್ಲಿ ಕುರುಡು ಸ್ವಾಮಿ ಎಂಬ ಮಾತು ಕೇಳಿಬಂದ ಹಿನ್ನೆಲೆಯಲ್ಲಿ ಛಲದಿಂದ ಘೋರ ತಪಸ್ಸು ಮಾಡಿ ದೃಷ್ಟಿ ಪಡೆದುಕೊಂಡರು. ಇಂಥ ನಿದರ್ಶನ ಇತ್ತೀಚಿನ ದಿನಗಳಲ್ಲಿ ಬೇರೆಲ್ಲೂ ಸಿಗುವುದಿಲ್ಲ. ಇಲ್ಲಿಗೆ ಪೀಠಾಧಿಪತಿಗಳಾಗಿರುವವರು ಇಂದ್ರಿಯಗಳನ್ನು ಗೆದ್ದವರು, ವಶಪಡಿಸಿಕೊಂಡವರು ಎಂದು ಹೇಳಿದರು.

ಅವರ ಬದುಕಿನ ಅಂತ್ಯಕಾಲವನ್ನು ತಾವೇ ಕಂಡುಕೊಂಡ ಮಹಾತ್ಮ ಅಷ್ಟಮ ರಾಘವೇಶ್ವರರು. ಕಾಶಿಯಲ್ಲಿ ಮುಕ್ತಿ ಪಡೆಯುವ ಅಭಿಲಾಷೆ ಹೊಂದಿದ್ದರೂ, ಅಲ್ಲಿಗೆ ಹೋಗಲು ಸಮಯ, ಆರೋಗ್ಯ ಇಲ್ಲ ಎಂಬ ಕಾರಣಕ್ಕೆ ಗೋಕರ್ಣಕ್ಕೆ ಬಂದು ಮುಕ್ತಿ ಹೊಂದಿದರು ಎಂದು ತಿಳಿಸಿದರು.

ತಮ್ಮ ಪೀಠಸ್ವೀಕಾರದ ಸಂದರ್ಭವನ್ನು ನೆನೆಸಿಕೊಂಡ ಶ್ರೀಗಳು, ರಾಘವೇಶ್ವರಭಾರತಿಗಳ ಸಮಾಧಿ ಸನ್ನಿಧಿಯಿಂದ ಮೊದಲ ಸೂಚನೆ ಬಂದಿತ್ತು. ಅಂಥ ಜೀವಂತ ಸಮಾಧಿ ಅದು. ಇದನ್ನು ಶಿಷ್ಯರು ಆಸ್ಥೆಯಿಂದ ಅಧ್ಯಯನ ಮಾಡಬೇಕು. ಇಂದಿಗೂ ಇರುವ ಅಗಣಿತ ಮಹಿಮ, ಅಸಾಮಾನ್ಯ ತಪಸ್ವಿಯ ದಿನಚರಿ ಬಗ್ಗೆ ಸಮಾಜದಲ್ಲಿ ಚರ್ಚೆ ನಡೆಯಬೇಕು ಎಂದರು.

‘ಕಾಲ’ ಪ್ರವಚನ ಸರಣಿಯನ್ನು ಮುಂದುವರಿಸಿದ ಶ್ರೀಗಳು, ಸತ್ವಗುಣ ದೃಢತೆ ಹಾಗೂ ರಜೋಗುಣ ಜಡತೆಯ ಸಂಕೇತ. ಅಂಥ ದೃಢತೆಯ ಅಧಿಪತಿಯಾದ ಗುರುವಿನ ದೃಷ್ಟಿಯಿಂದ ಬಾಳು ಬಂಗಾರವಾಗುವುದು ಮಾತ್ರವಲ್ಲದೇ, ಮರಣದಲ್ಲೂ ಆತನಿಗೆ ಮುಕ್ತಿ ದೊರಕುತ್ತದೆ ಎಂದು ವಿವರಿಸಿದರು.

http://kalpa.news/wp-content/uploads/2024/04/VID-20240426-WA0008.mp4

ರಾಜಪ್ರಶ್ನೆಗೂ ಜ್ಯೋತಿಷ ಮುಖ್ಯ. ಇದು ಕಾಲ ವಿಧಾಯಕ ಶಾಸ್ತ್ರ. ಉದಾಹರಣೆಗೆ ಯದ್ಧದಿಂದ ಹಿಡಿದು ಪ್ರತಿ ಪ್ರಮುಖ ನಿರ್ಧಾರ ಕೈಗೊಳ್ಳುವಾಗಲೂ ಜ್ಯೋತಿಷಿಗಳ ಸಲಹೆ ಪಡೆಯುವುದು ಅಗತ್ಯ ಎಂದರು. ಗುರು- ಶುಕ್ರ, ಬುಧನಂಥ ಶುಭಗ್ರಹಗಳು ಅಸ್ತಮ ಅಥವಾ ವೃದ್ಧ ಸ್ಥಿತಿಯಲ್ಲಿದ್ದಾಗ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆದ ಕಾರಣ ಶುಭದ ಬದಲು ಅಶುಭ ಫಲ ಹೆಚ್ಚಿತು. ಮೂರು ತಿಂಗಳ ಹಿಂದೆ ಈ ಚುನಾವಣೆ ನಡೆದಿದ್ದರೆ, ಫಲಿತಾಂಶ ಸಂಪೂರ್ಣ ಭಿನ್ನವಾಗಿರತ್ತಿತ್ತು ಎಂದು ಬಣ್ಣಿಸಿದರು.

ಅಷ್ಟಮ ರಾಘವೇಶ್ವರರ ದಿನಚರಿಯ ಅನಾವರಣವನ್ನು ಮುಂಬೈ ಐಐಟಿಯ ನಿವೃತ್ತ ಅಧಿಕಾರಿ ಎಲ್.ಜಿ.ಭಟ್ಟಗದ್ದೆ ನೆರವೇರಿಸಿದರು. ವಿವಿವಿ ಗೌರವಾಧ್ಯಕ್ಷ ಡಿ.ಡಿ.ಶರ್ಮಾ, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಮಂಜುನಾಥ್ ಸುವರ್ಣಗದ್ದೆ, ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ಶ್ರೀಶ ಶಾಸ್ತ್ರಿ, ವಿವಿವಿ ಆಡಳಿತಾಧಿಕಾರಿ ಡಾ.ಪ್ರಸನ್ನ ಕುಮಾರ್ ಟಿ.ಜಿ, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಜಿ.ವಿ.ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. ಎಸ್.ಜಿ.ಭಟ್ ಕಬ್ಬಿನಗದ್ದೆ ಕಾರ್ಯಕ್ರಮ ನಿರೂಪಿಸಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

Tags: GokarnaKannada News WebsiteKannada_NewsKannada_News_LiveKannada_News_OnlineKannada_WebsiteLatest News KannadaNews_in_KannadaNews_KannadaRaghaveshwara shriUttara Kannadaಗೋಕರ್ಣಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಜಿಲ್ಲಾಮಟ್ಟದ ಕುಸ್ತಿ ಪಂದ್ಯಾವಳಿ: ಕ್ರೈಸ್ಟ್‌ಕಿಂಗ್‌ನ ಮೂವರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

Next Post

ಅಪಘಾತದಲ್ಲಿ ಕೈ-ಕಾಲು ತುಂಡಾಗಿದ್ದರೆ ಭಯಪಡದೆ ಹೀಗೆ ಮಾಡಿ

kalpa News

kalpa News

Next Post
ಅಪಘಾತದಲ್ಲಿ ಕೈ-ಕಾಲು ತುಂಡಾಗಿದ್ದರೆ ಭಯಪಡದೆ ಹೀಗೆ ಮಾಡಿ

ಅಪಘಾತದಲ್ಲಿ ಕೈ-ಕಾಲು ತುಂಡಾಗಿದ್ದರೆ ಭಯಪಡದೆ ಹೀಗೆ ಮಾಡಿ

Leave a Reply Cancel reply

Your email address will not be published. Required fields are marked *

No Result
View All Result
MEIL Completes Historic Largest Concrete Pour for PHWR at Kaiga
English Articles

MEIL Completes Historic Largest Concrete Pour for PHWR at Kaiga

by kalpa News
July 6, 2026
0

Kalpa Media House  |  Karwar  | Megha Engineering & Infrastructures Ltd. (MEIL) has successfully completed one of the largest monolithic...

Read moreDetails
SPARSH RR Nagar Launches 5 Plastic Surgery Clinics of Excellence

SPARSH RR Nagar Launches 5 Plastic Surgery Clinics of Excellence

July 4, 2026
SWR GM inspect Goods Terminal

SWR General Manager Inspects Central Workshop, Ashokapuram, Mysuru Railway Station and Goods Terminal

July 4, 2026
HERO MOTOCORP ANNOUNCES RS 3200+ CRORE INVESTMENT IN ANDHRA PRADESH

HERO MOTOCORP ANNOUNCES RS 3200+ CRORE INVESTMENT IN ANDHRA PRADESH

July 4, 2026
Indriya, Aditya Birla Jewellery makes history with India’s Largest Hand-Painted Madhubani Hoarding

Indriya, Aditya Birla Jewellery makes history with India’s Largest Hand-Painted Madhubani Hoarding

July 3, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!