ಕಲ್ಪ ಮೀಡಿಯಾ ಹೌಸ್ | ಗೋಕರ್ಣ |
ದೇಶಕ್ಕೆ ಒಳ್ಳೆಯ ದಿನ ಬರಬೇಕಾದರೆ ದೇಶಕ್ಕೆ ಪುನರ್ಜನ್ಮದ ಅಗತ್ಯವಿದೆ. ಆಧುನಿಕ ಭಾರತದ ಜಾತಕದ ಪ್ರಕಾರ, ಸನಾತನ ಧರ್ಮದ ಪ್ರತೀಕವಾದ ಗುರು ಪ್ರತಿಕೂಲ ಅಥವಾ ಶತ್ರುಸ್ಥಾನದಲ್ಲಿದ್ದಾನೆ. ಇದರಿಂದ ಸನಾತನ ಧರ್ಮಕ್ಕೆ ಆಧುನಿಕ ಭಾರತದಲ್ಲಿ ಗೌರವ ಇಲ್ಲ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ #Raghaveshwara Shri ವಿಶ್ಲೇಷಿಸಿದರು.
ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 34ನೇ ದಿನವಾದ ಶುಕ್ರವಾರ ಕಾಲ ಪ್ರವಚನ ಸರಣಿಯನ್ನು ಅನುಗ್ರಹಿಸಿದರು.

ಯಾವ ಶುಭಗ್ರಹಗಳ ಅನುಕೂಲಗಳೂ ಇಲ್ಲ. ಲಗ್ನದಲ್ಲೂ ಯಾವುದೇ ಶುಭಗ್ರಹಗಳು ಉದಯವಿಲ್ಲ. ಲಗ್ನದಲ್ಲಿ ಇರುವುದು ರಾಹು. ಆದ್ದರಿಂದ ಪ್ರಧಾನ ವಿಷಯಗಳು ಅರ್ಧವಾಗುತ್ತವೆ. ರಾಹು ಅರ್ಧಸ್ವರೂಪದ ಪ್ರತೀಕ. ಆದ್ದರಿಂದ ದೇಶ ಕೂಡಾ ವಿಭಜನೆಯಾಯಿತು. ಪಾಪಗ್ರಹಗಳು ಮಾತ್ರ ಅನುಕೂಲ ಸ್ಥಾನದಲ್ಲಿವೆ. ಆದ್ದರಿಂದ ದೇಶಕ್ಕೆ ದುರವಸ್ಥೆ ಬಂತು ಎಂದು ವಿವರಿಸಿದರು.

Also read: ಗಮನಿಸಿ! ಆ.25ರಂದು ಶಿವಮೊಗ್ಗದ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ
ದೇಶದಲ್ಲಿ ಇತ್ತೀಚೆಗೆ ನಡೆದ ಮಹಾಚುನಾವಣೆಯನ್ನು ನೋಡಿದರೆ ಚುನಾವಣೆ ನಡೆದ ಸಂದರ್ಭದಲ್ಲಿ ಮೊದಲ ಎರಡು ಹಂತದಲ್ಲಿ ಗುರು ಗ್ರಹ ಅಸ್ತಮಾದಿಮುಖವಾಗಿದ್ದ. ಉಳಿದ ಐದು ಹಂತಗಳಲ್ಲಿ ಗುರು ಅಸ್ತನಾಗಿದ್ದ. ಆದರೆ ಜೂನ್ 4ರಂದು ಫಲಿತಾಂಶ ಪ್ರಕಟವಾದ ದಿನ ಗುರು ಉದಯವಾಯಿತು. ಇದರಿಂದ ಅಧಿಕಾರ ಉಳಿಸಿಕೊಳ್ಳಲು ಸಾಧ್ಯವಾಯಿತು. ಆದರೆ ಬಾಲ್ಯಾವಸ್ಥೆಯಲ್ಲಿ ಗುರು ಇದ್ದ ಕಾರಣ ಆಡಳಿತ ಪಕ್ಷಕ್ಕೆ ಸ್ವಂತ ಬಲ ಇಲ್ಲದಾಯಿತು ಎಂದು ವಿಶ್ಲೇಷಿಸಿದರು.

ಜಲಪ್ರಶ್ನವನ್ನು ವಿಶ್ಲೇಷಿಸಿದರು. ಮನೆಯನ್ನೇ ಒಂದು ರಾಶಿಚಕ್ರವಾಗಿ ಕಂಡುಕೊಂಡರೆ ಕುಂಭ ರಾಶಿಯಲ್ಲಿ ಅಥವಾ ಉತ್ತರಮುಖದ ಈಶಾನ್ಯದಲ್ಲಿ ಬಾವಿ ಬಂದರೆ ಆ ಜಾಗ ಸರ್ವಶ್ರೇಷ್ಠ, ಆದರೆ ಕನ್ಯಾರಾಶಿಯಲ್ಲಿ ಅಂದರೆ ನೈರುತ್ಯದಲ್ಲಿ ಬಾವಿ ನಿಷಿದ್ಧ ಎಂದು ಹೇಳಿದರು.
ಇಂದು ಅನಾವರಣಗೊಂಡ ತಿಗಳಾರಿ ಲಿಪಿ ಬಗ್ಗೆ ಉಲ್ಲೇಖಿಸಿ, ತಿಗಳಾರಿ ಲಿಪಿಯಲ್ಲಿ ನಿಗೂಢ ನಿಧಿ ಇದೆ. ಇದು ಅವಜ್ಞೆಗೆ ಒಳಗಾಗಿದೆ. ಇದನ್ನು ಕಲಿತು ಇದರಲ್ಲಿನ ಜ್ಞಾನವನ್ನು ನಮ್ಮದಾಗಿಸಿಕೊಳ್ಳೋಣ ಎಂದು ಹೇಳಿದರು.
ಹವ್ಯಕರ ನಿಗೂಢ ಲಿಪಿ ತಿಗಳಾರಿಯ ಮಹತಿಯನ್ನು ಅರ್ಪಿತಾ ಹೆದ್ಲಿ ಅನಾವರಣಗೊಳಿಸಿದರು. ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಆಡಳಿತ ಖಂಡದ ಸಂಯೋಜಕ ಹಾರಕೆರೆ ನಾರಾಯಣ ಭಟ್, ಚಾತುರ್ಮಾಸ್ಯ ಸಮಿತಿ ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ಶ್ರೀಶ ಶಾಸ್ತ್ರಿ, ವಿವಿವಿ ಆಡಳಿತಾಧಿಕಾರಿ ಡಾ.ಪ್ರಸನ್ನ ಕುಮಾರ್ ಟಿ.ಜಿ, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಜಿ.ವಿ.ಹೆಗಡೆ, ಮೋಹನ ಹರಿಹರ ಮತ್ತಿತರರು ಉಪಸ್ಥಿತರಿದ್ದರು. ಮಡಿವಾಳ, ಬೋವಿ ಮತ್ತು ನಾಡವರ ಸಮಾಜದಿಂದ ಸ್ವರ್ಣಪಾದುಕಾಪೂಜೆ ನೆರವೇರಿತು. ನಾಡವರ ಸಮಾಜದ ಮುಖಂಡರಾದ ನಿವೃತ್ತ ಡಿವೈಎಸ್ಪಿ ಪ್ರಮೋದ್‍ರಾವ್, ಜಿಲ್ಲಾಪಂಚಾಯ್ತಿ ಮಾಜಿ ಸದಸ್ಯ ಪ್ರದೀಪ್ ನಾಯ್ಕ, ಉದ್ಯಮಿ ಆನಂದ ಕವರಿ, ನಿವೃತ್ತ ಪ್ರಾಚರ್ಯ ಬೀರಣ್ಣ ನಾಯಕ ಮತ್ತಿತರರು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post