ಕಲ್ಪ ಮೀಡಿಯಾ ಹೌಸ್ | ಮೈಸೂರು |
ವಿಶ್ವ ಹಿಂದೂ ಪರಿಷದ್ #Vishwahinduparishad ಸ್ಥಾಪನೆಯಾಗಿ 60 ವರ್ಷಗಳು ಪೂರ್ಣಗೊಂಡ ಪ್ರಯುಕ್ತ ಮೈಸೂರಿನ #Mysore ವಿವಿಧ ಭಾಗಗಳಲ್ಲಿ ಅಯೋಧ್ಯಾ ರಾಮ ಮಂದಿರದ ಪ್ರಸಾದ ಹಾಗೂ ಸಪ್ತ ನದಿಗಳ ತೀರ್ಥ ವಿತರಣೆ ಮಾಡಲಾಯಿತು.
ವಿಶ್ವ ಹಿಂದೂ ಪರಿಷದ್ ಸ್ಥಾಪನೆಯಾಗಿ ಈ ಕೃಷ್ಣ ಜನ್ಮಾಷ್ಟಮಿಗೆ #KrishnaJanmashtami ಅರವತ್ತು ವರ್ಷಗಳು ಪೂರ್ಣಗೊಳಲಿದ್ದು, ಮೈಸೂರಿನ ವಿವಿಧ ಭಾಗಗಳಲ್ಲಿ ಜನ್ಮಾಷ್ಟಮಿಯ ಆಚರಣೆ ಹಾಗೂ ವಿಶ್ವ ಹಿಂದೂ ಪರಿಷದ್’ನ ಷಷ್ಠಿ ಪೂರ್ತಿ ಸಂಭ್ರಮಾಚರಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ಅಯೋಧ್ಯಾ #Ayodhya ರಾಮಮಂದಿರದ ಪ್ರಸಾದ ಹಾಗೂ ವಿವಿಧ ನದಿಯ ತೀರ್ಥಗಳು ವಿವಿಧ ಕ್ಷೇತ್ರಗಳಿಂದ ಮೈಸೂರಿನ ವಿದ್ಯಾರಣ್ಯಪುರಂ ನಲ್ಲಿರುವ ಗುರುದೇವ ಸೇವಾಶ್ರಮಕ್ಕೆ ಬಂದು ತಲುಪಿವೆ.

ವೃದ್ದಿಸಿರುವ ಪ್ರಸಾದಗಳನ್ನು ವಿವಿಧ ಭಾಗಗಳಲ್ಲಿನ ದೇವಾಲಯಗಳಲ್ಲಿ ಸಾರ್ವಜನಿಕರಿಗೆ ವಿತರಿಸಲಾಗುತ್ತದೆ.
ವಿಶ್ವ ಹಿಂದೂ ಪರಿಷದ್ ಸಲಹೆಗಾರರಾದ ಸುಬ್ರಹ್ಮಣ್ಯ ಜಟ್ಟಪ್ಪ ಮಾತನಾಡಿ, ಸನಾತನ ಹಿಂದೂ ಧರ್ಮದ ಜಾಗೃತಿ ಮಾಡಬೇಕಾದುದು ಧಾರ್ಮಿಕ ಸಂಘಟನೆಯಾಗಿ ವಿಶ್ವ ಹಿಂದೂ ಪರಿಷತ್ ನ ಆದ್ಯ ಕರ್ತವ್ಯವಾಗಿದೆ. ಷಷ್ಠಿ ಪೂರ್ತಿ ಸಂಭ್ರಮಾಚರಣೆ ಕಾರ್ಯಕರ್ತರಲ್ಲಿ ನವೋತ್ಸಾಹವನ್ನು ತಂದಿದೆ. ಗುರುದೇವ ಸೇವಾಶ್ರಮವನ್ನು ಕೇಂದ್ರವಾಗಿರಿಸಿಕೊಂಡು ವಿವಿಧ ಪ್ರಖಂಡಗಳಲ್ಲಿ ಪ್ರಸಾದ ವಿತರಿಸಲಾಗುವುದು ಎಂದು ತಿಳಿಸಿದರು.

ಸಹ ಕಾರ್ಯದರ್ಶಿ ಪುನೀತ್ ಜಿ. ಕೂಡ್ಲೂರು ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು. ವಿಭಾಗ ಸಂಯೋಜಕಿ ಸವಿತಾ ಘಾಟ್ಕೆ ಹಾಗೂ ಮಮತಾ ಸೇರಿದಂತೆ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post