ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿಗೆ ತೆರಳುವ ಐದು ಗಂಟೆಗಳ ಪ್ರಯಾಣದಲ್ಲಿ ನಟ ದರ್ಶನ್ #Darshan ತನ್ನ ಸಿನಿಮಾ ಜರ್ನಿ ಹಾಗೂ ಪ್ರಸ್ತುತ ಬೆಳವಣಿಗಳ ಬಗ್ಗೆ ಪೊಲೀಸರ ಜೊತೆ ಪಶ್ಚಾತಾಪದ ಮಾತುಗಳನ್ನಾಡಿದ್ದಾರೆ ಎನ್ನಲಾಗಿದೆ.
ಸರ್, ನನ್ನ ಟೈಂ, ನನ್ನ ಗ್ರಹಚಾರ ಸರಿಯಿಲ್ಲ ಅಷ್ಟೇ… ರೇಣುಕಾಸ್ವಾಮಿ ಕೊಲೆ ಪ್ರಕರಣದ #Renukaswamy Murder Case ಸಂಬಂಧ, ಈಗ ಏನು ಹೇಳಿದರೂ ತಪ್ಪಾಗುತ್ತದೆ. ಕಾನೂನಿನ ಮೂಲಕ ಎಲ್ಲವನ್ನು ಎದುರಿಸುತ್ತೇನೆ ಎಂಬುದಾಗಿ ದರ್ಶನ್ ಹೇಳಿದ್ದಾರೆ ಎಂದು ತಿಳಿದುಬಂದಿದೆ.
Also read: ನಮ್ಮ ಕಣಕಣಗಳಲ್ಲೂ ದೇವರಿದ್ದಾನೆ: ರಾಘವೇಶ್ವರ ಶ್ರೀ
ರೇಣುಕಾಸ್ವಾಮಿ ಕೊಲೆ ಪ್ರಕರಣ ನಂತರದ ಬೆಳವಣಿಗೆಯ ಬಗ್ಗೆ ಮಾತನಾಡುವ ವೇಳೆ ದರ್ಶನ್ ಭಾವುಕರಾಗಿದ್ದರು. ಐದು ಗಂಟೆಗಳ ಪ್ರಯಾಣದಲ್ಲಿ ಕೆಲ ವಿಚಾರಗಳನ್ನು ಹೊರತುಪಡಿಸಿ ಹೆಚ್ಚಿನ ಸಮಯದಲ್ಲಿ ದರ್ಶನ್ ಮೌನವಾಗಿಯೇ ಕುಳಿತಿದ್ದರು ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post