ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ #H D Kumaraswamy ಅವರು ಸೆಪ್ಟೆಂಬರ್ 5ರ ಗುರುವಾರ ನಗರಕ್ಕೆ ಒಂದು ದಿನದ ಭೇಟಿಗಾಗಿ ಆಗಮಿಸುತ್ತಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಗುರುವಾರ ಬೆಳಗ್ಗೆ 6 ಗಂಟೆಗೆ ಬೆಂಗಳೂರಿನ ತಮ್ಮ ಜೆಪಿ ನಗರ ನಿವಾಸದಿಂದ ರಸ್ತೆ ಮಾರ್ಗದಲ್ಲಿ ಆಗಮಿಸುವ ಸಚಿವರು 10 ಗಂಟೆಗೆ ಶಿವಮೊಗ್ಗದ ಆಗಮಿಸಲಿದ್ದು, 10.45ಕ್ಕೆ ಎನ್’ಯು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಉದ್ಘಾಟಿಸಲಿದ್ದಾರೆ.
11.15 ಸಾಗರ ರಸ್ತೆಯಲ್ಲಿರುವ ಕಿಮ್ಮನೆ ಲಕ್ಷುರಿ ಗಾಲ್ಫ್ ರೆಸಾರ್ಟ್’ನಲ್ಲಿ ನಡೆಯಲಿರುವ ಎಚ್.ಎಸ್. ಜಗದೀಶ್ ಅವರ ಕುಟುಂಬದ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
Also read: HISTORIC | ಪಶ್ಚಿಮ ಬಂಗಾಳದಲ್ಲಿ ಅತ್ಯಾಚಾರ ವಿರೋಧಿ ಮಸೂದೆ ಪಾಸ್ | ರೇಪ್ ಸಾಬೀತಾದರೆ ಈ ಶಿಕ್ಷೆ ಖಾಯಂ
12.45ಕ್ಕೆ ಪ್ರೆಸ್ ಕ್ಲಬ್’ಗೆ ಭೇಟಿ ನೀಡಲಿದ್ದು, ಒಂದು ಗಂಟೆಗಳ ಕಾಲ ಸಮಯವನ್ನು ಕಾಯ್ದಿರಿಸಲಾಗಿದೆ.
ಮಧ್ಯಾಹ್ನ 2 ಗಂಟೆಗೆ ಶುಭಮಂಗಳ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 4 ಗಂಟೆಗೆ ಶುಭಮಂಗಳ ಕಲ್ಯಾಣ ಮಂಟಪದಿಂದ ರಸ್ತೆ ಮಾರ್ಗದಿಂದ ಹೊರಡಲಿರುವ ಸಚಿವರು ರಾತ್ರಿ 8 ಗಂಟೆಗೆ ಬೆಂಗಳೂರಿನ ಜೆಪಿ ನಗರ ನಿವಾಸಕ್ಕೆ ತಲುಪಲಿದ್ದು, ಅಲ್ಲಿಯೇ ಅಂದು ವಾಸ್ತವ್ಯ ಮಾಡಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post