ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯದಾದ್ಯಂತ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿರುವ ಲಾಫಿಂಗ್ ಬುದ್ಧ #Laughing Buddha ಚಿತ್ರದ ನಾಯಕ ನಟ ಪ್ರಮೋದ್ ಶೆಟ್ಟಿ #Pramod Shetty ಹಾಗೂ ನಿರ್ದೇಶಕ ಭರತ್ ರಾಜ್ ರೇಡಿಯೋ ಶಿವಮೊಗ್ಗ ಸ್ಟುಡಿಯೋ ಗೆ ಭೇಟಿ ನೀಡಿ, ಸಂವಹನ ನಡೆಸಿದರು.
ರೇಡಿಯೋ ಶಿವಮೊಗ್ಗ ಎಫ್ ಎಂ ನ ಕಾರ್ಯವೈಖರಿಯನ್ನು ತಿಳಿದುಕೊಂಡು, ಉತ್ತಮ ಬೆಳವಣಿಗೆಯಾಗಲಿ ಎಂದು ಹಾರೈಸಿದರು. ರೇಡಿಯೋ ಬಳಗದೊಂದಿಗೆ ಆತ್ಮೀಯವಾಗಿ ಸಂವಹನ ನಡೆಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಸಂಯೋಜಕ ವೆಂಕಟೇಶ್ ಮೂರ್ತಿ, ರೇಡಿಯೋ ಸಂಯೋಜಕ ಗುರುಪ್ರಸಾದ್ ಬಾಲಕೃಷ್ಣ, ಕಾರ್ಯಕ್ರಮ ಸಂಯೋಜಕ ಅಜೇಯ ಸಿಂಹ, ತಾಂತ್ರಿಕ ಸಂಯೋಜಕ ಶ್ರೀಕಾಂತ್, ಆರ್ ಜೆ ಗಳಾದ ಶ್ವೇತಾ ಪ್ರದೀಪ್, ಮಹಾಲಕ್ಷ್ಮೀ, ರಕ್ಷಿತಾ ಹೊಳ್ಳ ಇದ್ದರು.
Also read: ಸುಂದರ ಬದುಕಿಗೆ ಚೌಕಟ್ಟು ಅಗತ್ಯ: ರಾಘವೇಶ್ವರ ಶ್ರೀ
ಪರಿಸರ ಅಧ್ಯಯನ ಕೇಂದ್ರ, ಕೊಡಚಾದ್ರಿ ಇಂಟಿಗ್ರೆಟೆಡ್ ಡೆವೆಲೆಪ್ಮೆಂಟ್ ಸೊಸೈಟಿ (ಕಿಡ್ಸ್) ಹಾಗೂ ರೇಡಿಯೋ ಶಿವಮೊಗ್ಗದ ಪರವಾಗಿ ಅತಿಥಿಗಳನ್ನು ಗೌರವಿಸಲಾಯಿತು.
ನಾಯಕ ನಟ ಪ್ರಮೋದ್ ಶೆಟ್ಟಿ ಹಾಗೂ ನಿರ್ದೇಶಕ ಭರತ್ ರಾಜ್ ಅವರೊಂದಿಗೆ ವಿಶೇಷ ಮಾತುಕತೆಯನ್ನು ನಡೆಸಲಾಯಿತು. ಈ ಕಾರ್ಯಕ್ರಮ ಸೆ.6ರಂದು ಬೆಳಗ್ಗೆ 11 ಗಂಟೆಗೆ ಪ್ರಸಾರವಾಗಲಿದ್ದು, ನಿಮ್ಮ ಮೊಬೈಲ್ ಗಳಲ್ಲೇ ಕೇಳಬಹುದಾಗಿದೆ. ರೇಡಿಯೋ ಶಿವಮೊಗ್ಗ ಆಪ್ ನ್ನು ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಸ್ಟೋರ್ ಗಳ ಮುಖಾಂತರ ಡೌನ್ಲೋಡ್ ಮಾಡಿಕೊಂಡು, ದಿನದ 24 ಗಂಟೆಗಳ ಪ್ರಸಾರವನ್ನು ಆನಂದಿಸಬಹುದು ಎಂದು ರೇಡಿಯೋ ಶಿವಮೊಗ್ಗದ ನಿಲಯ ನಿರ್ದೇಶಕ ಜಿ.ಎಲ್. ಜನಾರ್ದನ್ ಕೋರಿರುತ್ತಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.new
Discussion about this post