ಕಲ್ಪ ಮೀಡಿಯಾ ಹೌಸ್ | ಚಿಕ್ಕಮಗಳೂರು |
ತನ್ನ ಕುಟುಂಬಸ್ಥರನ್ನು ಕರೆದು ಬುದ್ದಿ ಹೇಳಿದರು ಎಂಬ ಕ್ಷುಲ್ಲಕ ಕಾರಣಕ್ಕಾಗಿ ಕೆಎಸ್’ಆರ್’ಟಿಸಿ #KSRTC ವಿಭಾಗೀಯ ನಿಯಂತ್ರಣಾಧಿಕಾರಿಗೆ ಇಲಾಖೆಯ ನೌಕರನೊಬ್ಬ ಚಾಕುವಿನಿಂದ ಇರಿದಿರುವ ಘಟನೆ ನಡೆದಿದೆ.
ದಾಳಿಗೆ ಒಳಗಾದ ಅಧಿಕಾರಿಯನ್ನು ಜಗದೀಶ್ ಕುಮಾರ್ ಹಾಗೂ ಆರೋಪಿ ನೌಕರನನ್ನು ಜ್ಯೂನಿಯರ್ ಅಸಿಸ್ಟೆಂಟ್ ರಿತೇಶ್ ಎಂದು ಗುರುತಿಸಲಾಗಿದೆ.
ಘಟನೆಯ ಹಿನ್ನೆಲೆ ಏನು?
ಜ್ಯೂನಿಯರ್ ಅಸಿಸ್ಟೆಂಟ್ ರಿತೇಶ್ ಚಿಕ್ಕಮಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ. ಈತನ ಹಾಜರಾತಿ ಸರಿಯಿಲ್ಲ ಎಂಬ ಕಾರಣಕ್ಕಾಗಿ ಆತನ ಕುಟುಂಬಸ್ಥರನ್ನು ಕರೆಸಿದ ಡಿಸಿ ಅವರು ಕೌನ್ಸಿಲಿಂಗ್ ಮಾಡಿದ್ದರು. ಅಲ್ಲದೇ, ಕುಟುಂಬಸ್ಥರ ಮನವಿಯ ಮೇರೆಗೆ ರಿತೇಶ್’ನಲ್ಲಿ ಚಿಕ್ಕಮಗಳೂರಿನಿಂದ ಬೇಲೂರಿಗೆ ವರ್ಗಾವಣೆ ಸಹ ಮಾಡಿಕೊಟ್ಟಿದ್ದರು.
Also read: ನಾಗಮಂಗಲ ಕೋಮುಗಲಭೆ | ನಗರ ಠಾಣೆ ಅಧಿಕಾರಿ ಅಶೋಕ್ ಕುಮಾರ್ ಸಸ್ಪೆಂಡ್
ಕುಟುಂಬಸ್ಥರನ್ನು ಕರೆದು ತನ್ನ ವಿಚಾರವಾಗಿ ಕೌನ್ಸಿಲಿಂಗ್ ಮಾಡಿದ್ದರಿಂದ ಅವರ ಮುಂದೆ ತನಗೆ ಅವಮಾನವಾಗಿದೆ ಎಂದು ಸಿಟ್ಟಿಗೆದ್ದ ರಿತೇಶ್ ಈ ಕೃತ್ಯ ಎಸಗಿದ್ದಾನೆ.
ಘಟನೆ ನಡೆದಿದ್ದು ಹೇಗೆ?
ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್ ಕುಮಾರ್ ಅವರು ಕೆಲಸ ಮುಗಿಸಿ ತಮ್ಮ ಕಚೇರಿಯಿಂದ ಮನೆಗೆ ತೆರಳಲು ವಾಹನ ಹತ್ತುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ರಿತೇಶ್ ಏಕಾಏಕಿ ಚಾಕುವಿನಿಂದ ಚುಚ್ಚಲು ಮುಂದಾಗಿದ್ದಾನೆ. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಅಧಿಕಾರಿಯ ಕೈಗೆ ಗಾಯಗಳಾಗಿದೆ. ಹೆದರಿದ ರಿತೇಶ್ ಅಲ್ಲಿಂದ ಪರಾರಿಯಾಗಿದ್ದಾನೆ.
ಗಾಯಗೊಂಡ ಅಧಿಕಾರಿಯನ್ನು ಅಧಿಕಾರಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಘಟನೆ ಕುರಿತು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ರಿತೇಶ್’ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post