ಕಲ್ಪ ಮೀಡಿಯಾ ಹೌಸ್ | ರಾಮನಗರ |
ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಮತ್ತೊಂದು ಬರೆ ಎಳೆದಿರುವ ರಾಜ್ಯ ಸರ್ಕಾರ, ನಂದಿನಿ #Nandini ಹಾಲಿನ ದರವನ್ನು ಏರಿಕೆ ಮಾಡುವುದಾಗಿ ಘೋಷಣೆ ಮಾಡಿದೆ.
ಮಾಗಡಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಕುರಿತಂತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ #CM Siddaramaiah ಈ ಬಾರಿ ಸುಳಿವಲ್ಲ ಬದಲಾಗಿ ಬಹಿರಂಗವಾಗಿಯೇ ಘೋಷಣೆ ಮಾಡಿದ್ದಾರೆ.
ಹಾಲಿನ ದರ ಏರಿಕೆ ಮಾಡುತ್ತೇವೆ. ಏರಿಕೆ ಮಾಡಿದ ಹಣವನ್ನು ಸಂಪೂರ್ಣವಾಗಿ ರೈತರಿಗೆ ಹೋಗಬೇಕು ಎಂದಿದ್ದಾರೆ.
ರೈತರಿಗೆ ಹೆಚ್ಚಿನ ಹಣ ನೀಡುವ ಸಲುವಾಗಿ ದರ ಏರಿಕೆ ಮಾಡುತ್ತೇವೆ. ನಮ್ಮ ಸರ್ಕಾರ ಎಂದಿಗೂ ರೈತರು, ಹಾಲು ಉತ್ಪಾದರು, ದತಲಿತರು ಹಾಗೂ ಬಡವರ ಪರವಾಗಿಯೂ ಇರುತ್ತದೆ ಎಂದರು.
Also read: ಚಿಕ್ಕಮಗಳೂರು | KSRTC ಡಿಸಿಗೆ ಚಾಕು ಇರಿದ ಇಲಾಖೆ ನೌಕರ | ಕಾರಣವೇನು?
ಹಿಂದೆ ಎಷ್ಟು ಏರಿಕೆ ಆಗಿತ್ತು?
ಕಳೆದ ಜೂನ್ 25ರಂದು ನಂದಿನ ಹಾಲಿನ ದರವನ್ನು ಪ್ರತಿ ಲೀಟರ್’ಗೆ 2 ರೂ. ಏರಿಕೆ ಮಾಡಿತ್ತು. ಪ್ರತಿ ಲೀಟರ್ ಪ್ಯಾಕೆಟ್ ಹಾಲಿನ ದರವನ್ನ 2 ರೂ. ಹಾಗೂ ಅರ್ಧ ಲೀಟರ್ ಹಾಲಿನ ದರ 22 ರೂ. ನಿಂದ 24 ರೂ.ಗೆ ಹೆಚ್ಚಿಸಿತ್ತು. ಅಲ್ಲದೇ, ಜೊತೆ ಪ್ಯಾಕೆಟ್ ಗಾತ್ರವನ್ನು ದೊಡ್ಡದು ಮಾಡಿತ್ತು.
1,000 ಎಂಎಲ್ (1 ಲೀಟರ್)ಪ್ಯಾಕೆಟ್ ಹಾಲನ್ನು 1,050 ಎಂಎಲ್, ಅರ್ಧ ಲೀಟರ್ ಪ್ಯಾಕೆಟ್ ಅನ್ನು 550 ಎಂಎಲ್ ಹಾಲು ಸಿಗುವಂತೆ ಗಾತ್ರವನ್ನು ದೊಡ್ಡದು ಮಾಡಿತ್ತು.
ಸರ್ಕಾರದ ಈ ನಡೆಗೆ ಹಿಂದೆಯೂ ಸಹ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post