ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಪ್ರತಿಷ್ಠಿತ ಜೆಎನ್’ಎನ್ ಇಂಜಿನಿಯರಿಂಗ್ ಕಾಲೇಜು #JNNCE ವತಿಯಿಂದ ಸೆ.14ರಂದು ಉದ್ಯೋಗ ಮೇಳ #JobFair ಆಯೋಜಿಸಲಾಗಿದೆ.
ಜೆಎನ್’ಎನ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ಮತ್ತು ಎಂಸಿಎ ವಿಭಾಗದ ಸಂಯುಕ್ತಾಶ್ರಯದಲ್ಲಿ ಎಚ್’ಆರ್’ಟೆಕ್ ಇನ್ನೊವೇಷನ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಸವೆನ್ ಹಿಲ್ಸ್ ನಾಲೆಡ್ಜ್ ಸೆಂಟರ್ ಸಹಯೋಗದಲ್ಲಿ ಮೇಳ ಆಯೋಜಿಸಲಾಗಿದೆ.
ಯಾರೆಲ್ಲಾ ಪಾಲ್ಗೊಳ್ಳಬಹುದು?
ಈ ಉದ್ಯೋಗ ಮೇಳದಲ್ಲಿ ಎಂಬಿಎ, ಎಂಸಿಎ ಹಾಗೂ ಎಂಕಾಂ ಪದವೀಧರರು ಪಾಲ್ಗೊಳ್ಳಬಹುದಾಗಿದೆ.
ಸೆ.14 ಅಂದರೆ ನಾಳೆ ಬೆಳಗ್ಗೆ 8:30 ರಿಂದ ಎಂಬಿಎ-ಎಂಸಿಎ ಸಭಾಂಗಣದಲ್ಲಿ `ಮೆಗಾ ಉದ್ಯೋಗ ಮೇಳ’ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಈ ಮೇಳದಲ್ಲಿ 10 ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿದ್ದು, ಎಂಬಿಎ, ಎಂಸಿಎ ಮತ್ತು ಎಂಕಾಂ ಪದವೀಧರರು ಇದರ ಸದುಪಯೋಗ ಮಾಡಿಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಎಂಬಿಎ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಹರ್ಷ ಸಿ. ಮಠದ್(ಮೊ.ಸಂಖ್ಯೆ: 9964255232) ಇವರನ್ನು ಸಂಪರ್ಕಿಸಬಹುದಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post