ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹಾಲು ಉತ್ಪಾದಕ ರೈತರಿಗೆ ನೀಡುವುದಾಗಿ ಹೇಳಿ ಹಾಲಿನ ದರ ಹೆಚ್ಚಳ #Milk Price Hike ಮಾಡುತ್ತಿರುವ ಸರ್ಕಾರ ಗ್ರಾಹಕರ ಮೇಲೆ ಹೊರೆ ಹಾಕುತ್ತಿದೆ ಎಂದು ವಿಧಾನ ಪರಿಷತ್ ಶಾಸಕ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಡಿ.ಎಸ್. ಅರುಣ್ #D S Arun ದೂರಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಲಿನ ದರ ಹೆಚ್ಚಳ ಮಾಡಿ ರೈತರಿಗೆ ನೀಡುವುದಾಗಿ ಹೇಳುತ್ತಿದೆ. ಆದರೆ ರೈತರಿಗೆ ಈಗಾಗಲೇ ನೀಡಬೇಕಿರುವ 865 ಕೋಟಿ ರೂ. ಪ್ರೋತ್ಸಾಹ ಧನ ಇನ್ನೂ ಬಾಕಿ ಇದೆ. ಇದನ್ನು ನೀಡದೆ ಮತ್ತೊಮ್ಮೆ ರೈತರ ಹೆಸರು ಹೇಳಿಕೊಂಡು ಗ್ರಾಹಕರ ಸುಲಿಗೆ ಮಾಡಲಾಗುತ್ತಿದೆ ಎಂದರು.
ಜೂನ್‌ನಲ್ಲಿ ಲೀಟರ್‌ಗೆ 5 ರೂ. ಜಾಸ್ತಿ ಮಾಡಲಾಗಿದೆ. ಹೀಗೆ ಜಾಸ್ತಿ ಮಾಡಿದ ದರಕ್ಕೆ 50 ಮಿಲಿ ಹಾಲು ಹೆಚ್ಚುವರಿಯಾಗಿ ನೀಡುವುದು ಹೇಳಲಾಗಿತ್ತುಘಿ. ಅದರೆ ಅದನ್ನು ಪರೀಕ್ಷಿಸಿ ಖರೀದಿಸಲು ಗ್ರಾಹಕರಿಗೂ ಕಷ್ಟವಾಗುತ್ತಿದೆ. ಹೆಚ್ಚುವರಿ ಹಾಲನ್ನು ಬಹುತೇಕ ನಿಲ್ಲಿಸಲಾಗಿದೆ ಎಂದರು.
Also read: ಮನುಷ್ಯನಿಗೆ ಜೀವನ ಪೂರ್ತಿ ಹಾಲುಣಿಸುವ ಗೋಮಾತೆ ಮಹಾತಾಯಿ: ಚಿದಾನಂದಗೌಡ ಅಭಿಪ್ರಾಯ
ಜಾನುವಾರುಗಳಿಗೆ ಮೇವು ಸಿಕ್ಕುತ್ತಿಲ್ಲ, ಹಿಂಡಿ, ಬೂಸಾ ದರ ಹೆಚ್ಚಾಗಿದೆ. ಹೀಗಿದ್ದರೂ ಕೂಡ ಉತ್ಪಾದಕರಿಗೆ ನೀಡಬೇಕಿರುವ ಬಾಕಿ ನೀಡದೆ ಸತಾಯಿಸಲಾಗುತ್ತಿದೆ. ಇದು ಮುಖ್ಯಮಂತ್ರಿಗಳ ಬೆಲೆ ಏರಿಕೆಯ ಗ್ಯಾರಂಟಿಯಾಗಿದೆ. ಚುನಾವಣೆ ಸಂದರ್ಭದಲ್ಲಿ ನೀಡಿದ ಪ್ರಣಾಳಿಕೆಯನ್ನೇ ಅವರು ಮರೆತಿದ್ದಾರೆ. ಯಾವುದೇ ಕಾರಣಕ್ಕೂ ಹಾಲಿನ ದರ ಹೆಚ್ಚಳ ಮಾಡದಂತೆ ಆಗ್ರಹಿಸಿದರು.
ಕೃಷಿ ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರ ರೈತ ಉತ್ಪಾದಕ ಸಂಘಗಳನ್ನು (ಫಾರ್ಮರ್ ಪ್ರೋಡ್ಯೂಸರ್‌ಸರ್ ಆರ್ಗನೈಜೇಶನ್) ಆರಂಭಿಸಲು ಯೋಜನೆಯನ್ನು ರೂಪಿಸಿದೆ. ಇವುಗಳಿಗೆ ರಾಜ್ಯ ಸರ್ಕಾರ ಧನ ಸಹಾಯ ನೀಡಬೇಕಿದೆ. ರಾಜ್ಯದಲ್ಲಿ ಈ ರೀತಿಯ 750 ಸಂಘಗಳನ್ನು ತೆರೆಯಲು ಅವಕಾಶವಿದೆ. ಆದರೆ ಇದುವರೆಗೂ 480 ಎಪಿಓ ಗಳನ್ನು ಮಾತ್ರ ಆರಂಭಿಸಲಾಗಿದೆ. ಸಂಘದ ಸಿಇಓಗಳಿಗೆ ಎರಡು ವರ್ಷದವರೆಗೆ ರಾಜ್ಯ ಸರ್ಕಾರವೇ ನೀಡಬೇಕಿದೆ ಎಂದರು.
ಎಪಿಓ ಗಳಿಗೆ 54 ಕೋಟಿ ರೂ. ರಾಜ್ಯ ಸರ್ಕಾರ ನೀಡಬೇಕಿದೆ. ಆದರೆ ಇದುವರೆಗೂ ನೀಡಿರುವುದು ಕೇವಲ1.16 ಕೋಟಿ ಮಾತ್ರವೆಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ಜಿಲ್ಲಾ ರೈತಮೋರ್ಚಾ ಅಧ್ಯಕ್ಷ ಸಿದ್ಧಲಿಂಗಪ್ಪ, ಉಪಾಧ್ಯಕ್ಷ ಗಣೇಶ್ ಬಿಳಕಿ, ಕುಮಾರ್ ನಾಯ್ಡು, ಕುಮಾರ್, ಕೆ.ವಿ. ಅಣ್ಣಪ್ಪ, ಚಂದ್ರಶೇಖರ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post