ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಲೆನಾಡಿನ ಮಂದಿಗೆ ಉತ್ಕೃಷ್ಟ ಸೇವೆ ನೀಡುತ್ತಿರುವ @ಹೋಮ್ ಶೋರೂಂ ಇನ್ನು ಮುಂದೆ ನೀಲ್’ಕಮಲ್ ಹೋಮ್ ಆಗಿ ಉನ್ನತೀಕರಣಗೊಂಡಿದ್ದು, ಗ್ರಾಹಕರಿಗೆ ಅತ್ಯುತ್ಕೃಷ್ಟ ಗುಣಮಟ್ಟದ ಸೇವೆ ನೀಡಲು ಸಜ್ಜಾಗಿದೆ.
ಸವಳಂಗ ರಸ್ತೆಯ ನೆಹರೂ ಕ್ರೀಡಾಂಗಣದ ಎದುರಿನಲ್ಲಿ @ಹೋಮ್ ಆಗಿ ಈವರೆಗೂ ಉತ್ತಮ ಗುಣಮಟ್ಟದ ಪೀಠೋಪಕರಣಗಳು, ಗೃಹಾಲಂಕಾರಿಕ ವಸ್ತುಗಳನ್ನು ಗ್ರಾಹಕರಿಗೆ ಒದಗಿಸುತ್ತಿತ್ತು. ಈಗ ನೀಲ್ ಕಮಲ್ ಹೋಮ್ ಆಗಿ ಉನ್ನತೀಕರಣಗೊಂಡಿದ್ದು, ಇಂದು ಮರು ಲೋಕಾರ್ಪಣೆಗೊಂಡಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅತಿ ಉತ್ತಮವಾದ ಪೀಠೋಪಕರಣಗಳನ್ನು ಒದಗಿಸುತ್ತಿದ್ದ ಈ ಶೋರೂಂ ಈಗ ಬದಲಾದ ಉನ್ನತೀಕರಣದ ಆಯಾಮದಲ್ಲಿ ಮತ್ತಷ್ಟು ಗುಣಮಟ್ಟದ ಸೇವೆಗೆ ಸಜ್ಜಾಗಿರುವುದು ಸಂತೋಷದ ಸಂಗತಿಯಾಗಿದೆ. ಅತ್ಯಂತ ಸಂತಸದಿಂದ ಮರು ಲೋಕಾರ್ಪಣೆ ಮಾಡಲಾಗಿದ್ದು, ಮಲೆನಾಡಿನ ಜನರು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
Also read: ಆರ್‌ಸಿಬಿ ರಚನೆ ಹಿನ್ನೆಲೆ ಅ.7ರಂದು ಪೂರ್ವಭಾವಿ ಸಭೆ: ರಾಷ್ಟ್ರಭಕ್ತ ಬಳಗ ಸಂಚಾಲಕ ಈಶ್ವರಪ್ಪ
ನೀಲ್ ಕಮಲ್ ಹೋಮ್ ಪ್ರಮುಖರಾದ ಡಾ.ಮಂಜುನಾಥ್ ಮಾತನಾಡಿ, ಶಿವಮೊಗ್ಗ ಸೇರಿದಂತೆ ಮಲೆನಾಡಿನ ಜನರಿಗೆ ಈವರೆಗೂ ಉತ್ತಮ ಗುಣಮಟ್ಟದ ಸೇವೆ ಒದಗಿಸುತ್ತಿದ್ದೇವೆ. ಗ್ರಾಹಕರ ಸ್ಪಂದನೆಯೂ ಸಹ ಅತ್ಯುತ್ತಮವಾಗಿದೆ ಎಂದರು.

ಶಿವಮೊಗ್ಗ ನೀಲ್ ಕಮಲ್ ಹೋಮ್ ಮುಖ್ಯಸ್ಥ ದೀಪಕ್ ಮಂಜುನಾಥ್, ಸಿಬ್ಬಂದಿಗಳು ಹಾಗೂ ಗ್ರಾಹಕರು ಉಪಸ್ಥಿತರಿದ್ದರು.
@ಹೋಮ್ ನೀಲ್ ಕಮಲ್ ಹೋಮ್ ಆಗಿ ಬದಲಾದ ಮೊದಲ ದಿನವೇ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


























Discussion about this post