ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಈ ರಾಜ್ಯ, ದೇಶದ ಭವಿಷ್ಯ ಎಂಜನೀಯರ್ ಗಳ ಕೈಯಲ್ಲಿದೆ. ನಾವು ವಿಶ್ವೇಶ್ವರಯ್ಯ ಅವರ ನಾಡಿನಲ್ಲಿ ಹುಟ್ಟಿದ್ದೇವೆ, ನಾವು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದರಾಗಿ ಕೆಲಸ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ #Basavaraja Bommai ಹೇಳಿದರು.
ಅವರು ಇಂದು ನಗರದ ಸೆಂಚ್ಯೂರಿ ಕ್ಲಬ್ ನಲ್ಲಿ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಎಂಜನೀಯರ್ಸ್ ಏರ್ಪಡಿಸಿದ್ದ ಎಂಜನೀಯರ್ಸ್ ಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Also read: ಜಾತಿ ಜನಗಣತಿ ಅನುಷ್ಠಾನಕ್ಕೆ ಬಿಜೆಪಿ ಬೆಂಬಲ ಹೇಳಿಕೆಯಿಂದ ಮನಸ್ಸು ನಿರಾಳವಾಯಿತು: ಸಿಎಂ
ವಿಶ್ವೇಶ್ವರಯ್ಯ ನವರು ಈಗಲೂ ನಮಗೆ ಒಂದಿಲ್ಲೊಂದು ರೀತಿಯಲ್ಲಿ ಸ್ಪೂರ್ತಿಯಾಗಿದ್ದಾರೆ. ನಾನು ಜಲ ಸಂಪನ್ಮೂಲ ಸಚಿವನಾಗಿದ್ದಾಗ ಕನ್ನಂಬಾಡಿ ಆಣೆಕಟ್ಟೆಗೆ ಭೇಟಿ ನೀಡಿದಾಗ ಎರಡು ಗೇಟ್ ಗಳು ಸೋರುತ್ತಿದ್ದವು. ಅವುಗಳನ್ನು ಬದಲಾಯಿಸಲು ನಾನು ಅಧಿಕಾರಿಗಳಿಗೆ ಸೂಚಿಸಿದೆ. ಅವರು ಮಹಾರಾಜರು ಕಟ್ಟಿದ್ದು, ವಿಶ್ವೇಶ್ವರಯ್ಯ ಕಟ್ಟಿದ್ದು, ಇದನ್ನು ಬದಲಾಯಿಸುವುದು ಸುಲಭವಲ್ಲ ಎಂದು ಹೇಳಿದರು. ಆದರೆ, ನಾನು ಅದನ್ನು ಬದಲಾಯಿಸಲು ಹೇಳಿದೆ, ವಿಶ್ವೇಶ್ವರಯ್ಯ ಕಟ್ಟಿದ ಡ್ಯಾಮಿಗೆ ನಾನು ಗೇಟು ಹಾಕುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ ಎಂದು ಹೇಳಿದರು.

ನಾವು ಸ್ವಾತಂತ್ರ್ಯ ಪಡೆದಾಗ ನಮ್ಮ ದೇಶದ ಜನಸಂಖ್ಯೆ ಮೂವತ್ತು ಕೋಟಿ ಇತ್ತು, ಈಗ ನೂರಾ ಮೂವತ್ತು ಕೋಟಿ ಇದೆ. ಪ್ರಧಾನಿ ನರೇಂದ್ರ ಮೋದಿಯವರು ಜನಸಂಖ್ಯೆಯನ್ನು ಉತ್ಪಾದಕರನ್ನಾಗಿ ಪರಿವರ್ತಿಸಿದರು, ನಮ್ಮ ತಂತ್ರಜ್ಞರನ್ನು ದೇಶ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಳ್ಳಲು ಬಯಸುತ್ತಿದ್ದಾರೆ.

ಯೋಜನಾ ರಹಿತ ಅಭಿವೃದ್ಧಿ ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗಲಿದೆ. ಯಾವುದೇ ನಗರ, ಹಳ್ಳಿ ಯೋಜನಾ ರಹಿತವಾಗಿ ನಿರ್ಮಾಣ ಹಾಗೂ ವಿಸ್ತರಣೆ ಮಾಡಿದರೆ ಸಮಸ್ಯೆ ಆಗುತ್ತದೆ. ಎಂಜನೀಯರ್ ಗಳು ಆಡಳಿತ ಮಾಡುವವರಿರಬೇಕು, ನಾವು ಹೊಂದಾಣಿಕೆ ಮಾಡಿಕೊಂಡು ಬದುಕುತ್ತಿದ್ದೇವೆ. ನೀವು ಮಾಡುವ ಯೋಜನೆಗೆ ಯಾವುದೇ ವಿರೋಧ, ಆಕ್ಷೇಪ ಬರದಿದ್ದರೆ ಅದು, ಉತ್ತಮ ಯೋಜನೆ ಅಲ್ಲ, ಯಾವುದಾದರೂ ಆಕ್ಷೇಪ ಬಂದರೆ ಅದನ್ನು ಎದುರಿಸಿ ಯಶಸ್ವಿಯಾಗಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಎಸಿಸಿಎ ಅಧ್ಯಕ್ಷ ನಾಗೇಶ್ ಪುಟ್ಟಸ್ವಾಮಿ ಹಾಗೂ ಮತ್ತಿತರರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 
















Discussion about this post