ಕಲ್ಪ ಮೀಡಿಯಾ ಹೌಸ್ | ಮಂಗಳೂರು |
ಮಂಗಳೂರಿನ ಉರ್ವಾ ಕ್ರಿಕೆಟ್ ಮೈದಾನದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಜರುಗಿದ ಮೊದಲ ಅವೃತ್ತಿಯ “ಮಂಗಳೂರು ದಸರಾ ಟ್ರೋಫಿ-2024” #Mangalore Dasara Trophy-2024 ಪಂದ್ಯಾಟದಲ್ಲಿ ಪಂಜ ಫ್ರೆಂಡ್ಸ್ RCP ನಿಟ್ಟೆ ತಂಡವು ವಿಜೇತರಾಯಿತು.
ಮಂಗಳೂರು ದಸರಾ ಮಹೋತ್ಸವದ ಅಂಗವಾಗಿ ರಾಜ್ಯ NSUI ಪ್ರಧಾನ ಕಾರ್ಯದರ್ಶಿ ಅನ್ವಿತ್ ಕಟೀಲ್ ಅವರ ನೇತೃತ್ವದಲ್ಲಿ ಒಟ್ಟು 16 ತಂಡಗಳ ಪಾಲ್ಗೊಳ್ಳುವಿಕೆಯಲ್ಲಿ ನಡೆದ ಈ ಪಂದ್ಯಾಟದಲ್ಲಿ ಪಂಜ ಫ್ರೆಂಡ್ಸ್ RCP ನಿಟ್ಟೆ ತಂಡವು ವಿಜೇತರಾಗಿ ಹಾಗೂ ಫ್ರೆಂಡ್ಸ್ ಹಳೆಯಂಗಡಿ, ಜೋಸೆಫ್ ತಂಡವು ದ್ವಿತೀಯ ಸ್ಥಾನಾರ್ಥಿಯಾಗಿ ಹೊರಹೋಮ್ಮಿತು.
Also read: ವಾಣಿಜ್ಯ-ಕೈಗಾರಿಕಾ ಸಂಘದಿಂದ ರತನ್‌ಟಾಟಾರವರಿಗೆ ಗೌರವ ಶ್ರದ್ಧಾಂಜಲಿ
ಮಾಜಿ ಸಚಿವ ರಮಾನಾಥ್ ರೈ, ಕಾಂಗ್ರೆಸ್ ಮುಖಂಡರುಗಳಾದ ಪ್ರಸಾದ್ ರಾಜ್ ಕಾಂಚನ್, ಬೇಬಿ ಕುಂದರ್ ಸೇರಿದಂತೆ ಪ್ರಮುಖರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post